Russia-Ukraine Crisis: ನವೀನ್ ಸಾವಿಗೆ ರಾಷ್ಟ್ರ, ರಾಜ್ಯ ರಾಜಕಾರಣಿಗಳ ಶೋಕ

ಉಕ್ರೇನ್‌ ಖಾರ್ಕೀವ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನವೀನ್ ಅವರು ಸಾವನ್ನಪ್ಪಿರುವುದಕ್ಕೆ ದೇಶಾದ್ಯಂತ ಶೋಕ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

Russia-Ukraine Crisis: ನವೀನ್ ಸಾವಿಗೆ ರಾಷ್ಟ್ರ, ರಾಜ್ಯ ರಾಜಕಾರಣಿಗಳ ಶೋಕ
Linkup
ಹೊಸದಿಲ್ಲಿ: ಉಕ್ರೇನ್‌ನ ಖಾರ್ಕೀವ್ ನಗರದಲ್ಲಿ ರಷ್ಯಾ ಪಡೆಗಳ ಶೆಲ್ ದಾಳಿಗೆ ಹಾವೇರಿ ಜಿಲ್ಲೆಯ ಅವರು ಮೃತಪಟ್ಟಿರುವ ಘಟನೆ ಬಗ್ಗೆ ವಿವಿಧ ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷ ಓದುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಶೇಖಪ್ಪ ಗ್ಯಾನಗೊಂಡರ್ ಅವರು ಮಂಗಳವಾರ ಬೆಳಿಗ್ಗೆ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ನವೀನ್ ಅವರ ಸಾವಿನ ಬಗ್ಗೆ ಕಾಂಗ್ರೆಸ್ ನಾಯಕ ಶೋಕ ವ್ಯಕ್ತಪಡಿಸಿದ್ದಾರೆ. "ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಅವರು ಮೃತಪಟ್ಟ ದುರಂತಮಯ ಸುದ್ದಿ ಬಂದಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಸುರಕ್ಷಿತ ಸ್ಥಳಾಂತರಕ್ಕೆ ಭಾರತ ಸರ್ಕಾರ ಕಾರ್ಯತಂತ್ರ ಯೋಜನೆ ಹೊಂದುವ ಅಗತ್ಯವಿದೆ. ಪ್ರತಿ ನಿಮಿಷವೂ ಅಮೂಲ್ಯ" ಎಂದು ಅವರು ಹೇಳಿದ್ದಾರೆ. "ಈ ಸುದ್ದಿ ಕೇಳಲು ಭಯಾನಕವಾಗಿದೆ. ಅವರ ಕುಟುಂಬಕ್ಕೆ ಪ್ರಾರ್ಥನೆಗಳು. ಅಲ್ಲಿ ಸಿಲುಕಿರುವ ಎಲ್ಲ ಇತರೆ ಭಾರತೀಯರ ಸುರಕ್ಷತೆಗೆ ಪ್ರಾರ್ಥಿಸುತ್ತೇನೆ ಮತ್ತು ಅವರು ಶೀಘ್ರವೇ ಮರಳಿ ಮನೆಗೆ ಬರುತ್ತಾರೆ ಎಂದು ಆಶಿಸುತ್ತೇನೆ. ಈ ಸಂಘರ್ಷವು ಶೀಘ್ರದಲ್ಲಿಯೇ ಅಂತ್ಯಗೊಳ್ಳುತ್ತದೆ ಎಂಬ ಭರವಸೆ ಇದೆ" ಎಂದು ದಿಲ್ಲಿ ಸಿಎಂ ಟ್ವೀಟ್ ಮಾಡಿದ್ದಾರೆ. "ಈ ದುರದೃಷ್ಟಕರ ಬೆಳವಣಿಗೆ ಕೇಳಿ ಅತೀವ ದುಃಖವಾಗಿದೆ. ಪ್ರತಿ ಭಾರತೀಯ ನಾಗರಿಕನ ಜೀವನವೂ ಅತಿ ಅಮೂಲ್ಯ. ಸಂಘರ್ಷದಲ್ಲಿ ಮತ್ತೆ ಯಾವ ಜೀವವೂ ಹೋಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸುತ್ತೇನೆ. ಮೃತ ವಿದ್ಯಾರ್ಥಿಯ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು" ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಹೇಳಿದ್ದಾರೆ. "ದುರಂತ ಘಟನೆಯಲ್ಲಿ, ವಿದ್ಯಾರ್ಥಿಯ ಜೀವ ಮರೆಯಾಗಿದೆ ಮತ್ತು ಇನ್ನೂ ಅನೇಕ ಜನರು ಪ್ರತಿದಿನ ಅಪಾಯವನ್ನು ಎದುರಿಸುತ್ತಾ, ಭಾರತ ಸರ್ಕಾರ ತಮ್ಮನ್ನು ಮರಳಿ ಕರೆತರಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ದುರದೃಷ್ಟವಶಾತ್, ನಮ್ಮ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಗಂಭೀರ ಬೆದರಿಕೆಯನ್ನು ಸರ್ಕಾರ ಇನ್ನೂ ಅರ್ಥಮಾಡಿಕೊಂಡಂತೆ ಕಾಣಿಸುತ್ತಿಲ್ಲ" ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. "ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರು ಉಕ್ರೇನ್ ನಲ್ಲಿ ಸಾವನ್ನಪ್ಪಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. "ರಷ್ಯಾ -ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಅವರು ಮೃತ ಪಟ್ಟ ಸುದ್ದಿ ತಿಳಿದು ಅತೀವ ದು:ಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆದಷ್ಟು ಬೇಗ ಅಪಾಯದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದು ಮಧು ಬಂಗಾರಪ್ಪ ಟ್ವೀಟ್ ಮಾಡಿದ್ದಾರೆ. "ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸುದ್ದಿ ತಿಳಿದು ಅತೀವ ನೋವಾಗಿದೆ. ದೇವರು ವಿದ್ಯಾರ್ಥಿಯ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬ ವರ್ಗಕ್ಕೆ, ಆಪ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.