Ramya Ramaswamy: ಹೊಸ ಸಿನಿಮಾ ಒಪ್ಪಿಕೊಂಡ ಕ್ರೇಜಿಸ್ಟಾರ್: ರವಿಚಂದ್ರನ್‌ಗೆ ಚಿ.ಗುರುದತ್ ಆಕ್ಷನ್ ಕಟ್!

ಸ್ಯಾಂಡಲ್‌ವುಡ್‌ನ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿರುವ ಹೊಸ ಸಿನಿಮಾದ ಹೆಸರು ‘ರಮ್ಯ ರಾಮಸ್ವಾಮಿ’. ರವಿಚಂದ್ರನ್ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ನಿರ್ಮಾಪಕ ಎನ್‌.ಎಸ್.ರಾಜ್‌ಕುಮಾರ್ ತಮ್ಮ ಓಂಕಾರ್ ಫಿಲ್ಮಂಸ್ ಮೂಲಕ ‘ರಮ್ಯ ರಾಮಸ್ವಾಮಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚಿ.ಗುರುದತ್ ಆಕ್ಷನ್ ಕಟ್ ಹೇಳಲಿದ್ದಾರೆ.

Ramya Ramaswamy: ಹೊಸ ಸಿನಿಮಾ ಒಪ್ಪಿಕೊಂಡ ಕ್ರೇಜಿಸ್ಟಾರ್: ರವಿಚಂದ್ರನ್‌ಗೆ ಚಿ.ಗುರುದತ್ ಆಕ್ಷನ್ ಕಟ್!
Linkup
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ದೃಶ್ಯ 2’ ಮತ್ತು ‘ಕನ್ನಡಿಗ’ ಚಿತ್ರಗಳು ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ‘ದೃಶ್ಯ 2’ ಸಿನಿಮಾ ಥಿಯೇಟರ್‌ಗಳಲ್ಲಿ ಸದ್ದು ಮಾಡಿದ್ದರೆ, ‘ಕನ್ನಡಿಗ’ ಚಿತ್ರ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಹೊಸ ಚಿತ್ರವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿದ್ದಾರೆ. ಆ ಚಿತ್ರ ಯಾವುದು ಅಂದ್ರೆ…. ‘’ ಸ್ಯಾಂಡಲ್‌ವುಡ್‌ನ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿರುವ ಹೊಸ ಸಿನಿಮಾದ ಹೆಸರು ‘ರಮ್ಯ ರಾಮಸ್ವಾಮಿ’. ರವಿಚಂದ್ರನ್ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ನಿರ್ಮಾಪಕ ಎನ್‌.ಎಸ್.ರಾಜ್‌ಕುಮಾರ್ ತಮ್ಮ ಓಂಕಾರ್ ಫಿಲ್ಮಂಸ್ ಮೂಲಕ ‘ರಮ್ಯ ರಾಮಸ್ವಾಮಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಪೃಥ್ವಿ’, ‘ಮೈನಾ’, ‘ಮೈತ್ರಿ’, ‘ಕನ್ನಡಿಗ’ ಅಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಎನ್‌.ಎಸ್.ರಾಜ್‌ಕುಮಾರ್ ಇದೀಗ ‘ರಮ್ಯ ರಾಮಸ್ವಾಮಿ’ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯದಲ್ಲೇ ‘ರಮ್ಯ ರಾಮಸ್ವಾಮಿ’ ಚಿತ್ರಕ್ಕೆ ಚಾಲನೆ ಸಿಗಲಿದೆ. ಚಿ.ಗುರುದತ್ ನಿರ್ದೇಶನ ಎನ್‌.ಎಸ್.ರಾಜ್‌ಕುಮಾರ್ ನಿರ್ಮಾಣದ ರವಿಚಂದ್ರನ್ ಅಭಿನಯದ ‘ರಮ್ಯ ರಾಮಸ್ವಾಮಿ’ ಚಿತ್ರಕ್ಕೆ ಚಿ.ಗುರುದತ್ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಚಿ.ಗುರುದತ್ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ‘ಸಮರ’, ‘ದತ್ತ’, ‘ಕಾಮಣ್ಣನ ಮಕ್ಕಳು’, ‘ಕಿಚ್ಚ ಹುಚ್ಚ’ ಚಿತ್ರಗಳಿಗೆ ಚಿ.ಗುರುದತ್ ಆಕ್ಷನ್ ಕಟ್ ಹೇಳಿದ್ದರು. ಡಿ.ರಾಜೇಂದ್ರ ಬಾಬು ವಿಧಿವಶರಾದಾಗ ಶಿವರಾಜ್ ಕುಮಾರ್ ಅಭಿನಯದ ‘ಆರ್ಯನ್’ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ಚಿ.ಗುರುದತ್ ಹೊತ್ತಿದ್ದರು. ಚಿ.ಗುರುದತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾವೊಂದು ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಚಿ.ಗುರುದತ್ ನಿರ್ದೇಶನದಲ್ಲಿ ಶಿವಣ್ಣ ನಟನೆಯಲ್ಲಿ ಮೂಡಿಬರಲಿರುವ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿದ್ದಾರೆ. ‘ರಾಮಸ್ವಾಮಿ’ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಚಿ.ಗುರುದತ್ ನಿರ್ದೇಶನ ಮಾಡಿರುವ ‘ರಮ್ಯ ರಾಮಸ್ವಾಮಿ’ ಚಿತ್ರದಲ್ಲಿ ರಾಮಸ್ವಾಮಿ ಆಗಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ‘ರಮ್ಯ’ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ‘ರಮ್ಯ’ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಅದು ಯಾರು ಎಂಬುದು ಸದ್ಯಕ್ಕೆ ಗುಟ್ಟಾಗೇ ಉಳಿದಿದೆ. ಅಂದ್ಹಾಗೆ, ‘ರಮ್ಯ ರಾಮಸ್ವಾಮಿ’ ಚಿತ್ರಕ್ಕೆ ಜನಾರ್ಧನ ಮಹರ್ಷಿ ಕಥೆ ಬರೆದಿದ್ದಾರೆ. ‘ರಮ್ಯ ರಾಮಸ್ವಾಮಿ’ ಚಿತ್ರಕ್ಕೆ ಜಿ.ಎಸ್‌.ವಿ.ಸೀತಾರಾಂ ಛಾಯಾಗ್ರಹಣ ಹಾಗೂ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಇರಲಿದೆ.