Darshan: 'ಡಿ ಬಾಸ್' ದರ್ಶನ್‌ ಫಾರ್ಮ್‌ಹೌಸ್‌ ಸೇರಿತು ಶುಕವನದ ಗಿಳಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ-ಪಕ್ಷಿಗಳು ಎಂದರೆ ತುಂಬ ಇಷ್ಟ. ಅವರು ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುತ್ತಿರುತ್ತಾರೆ. ಜೊತೆಗೆ ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಅನೇಕ ಬಗೆಯ ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ.

Darshan: 'ಡಿ ಬಾಸ್' ದರ್ಶನ್‌ ಫಾರ್ಮ್‌ಹೌಸ್‌ ಸೇರಿತು ಶುಕವನದ ಗಿಳಿ
Linkup
'ಡಿ ಬಾಸ್' ದರ್ಶನ್‌ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ, ಅಪಾರವಾದ ಪ್ರೀತಿ. ಅದಕ್ಕೆ ಸಾಕ್ಷಿ ಅವರ ಫಾರ್ಮ್‌ ಹೌಸ್‌ನಲ್ಲಿರುವ ಅನೇಕ ಪ್ರಾಣಿ-ಪಕ್ಷಿಗಳು. ಕಳೆದ ವರ್ಷ ಲಾಕ್‌ಡೌನ್‌ ವೇಳೆ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುವುದಕ್ಕಾಗಿ ದಾವಣಗೆರೆ, ಧಾರವಾಡದಿಂದ ಕುದುರೆ, ಕುರಿಗಳನ್ನು ತೆಗೆದುಕೊಂಡು ಹೋಗಿದ್ದು ಗೊತ್ತೇ ಇದೆ. ಇದೀಗ ಡಿ ಬಾಸ್ ಫಾರ್ಮ್‌ಹೌಸ್‌ಗೆ ಮತ್ತೋರ್ವ ಹೊಸ ಅತಿಥಿ ಎಂಟ್ರಿಯಾಗಿದ್ದಾರೆ. ಅವರು ಬಂದಿರುವುದು ಶುಕವನದಿಂದ! ಸದ್ಯ ಕೊರೊನಾ ಎರಡನೇ ಅಲೆ ಶುರುವಾಗಿರುವುದರಿಂದ ಡಿ ಬಾಸ್ ಅವರು ಬಳಿ ಇರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಇದ್ದಾರೆ. ಸೋಮವಾರ (ಮೇ 10) ಅವರು ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅಲ್ಲಿನ ಆವರಣದಲ್ಲಿರುವ ಶುಕವನವನ್ನು ದರ್ಶನ್‌ ವೀಕ್ಷಣೆ ಮಾಡಿದರು. ಇದೇ ವೇಳೆ ಅಲ್ಲಿನ ರೆಡ್ ಹೆಡ್ಡೆಡ್ ಅಮೆಜಾನ್ ಜಾತಿಗೆ ಸೇರಿದ ಗಿಳಿಯೊಂದನ್ನು ಇಷ್ಟಪಟ್ಟ ದರ್ಶನ್‌, ಅದನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಶ್ರೀಗಳು ಪಕ್ಷಿಯನ್ನು ದರ್ಶನ್‌ಗೆ ನೀಡಿದ್ದಾರೆ. ಗಿಳಿಯನ್ನು ಗೌರವದಿಂದ ಸ್ವೀಕರಿಸಿದ 'ಚಾಲೆಂಜಿಂಗ್ ಸ್ಟಾರ್', ಅದನ್ನು ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕಲಿದ್ದಾರೆ. ಇನ್ನು, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ದರ್ಶನ್‌ ಜೊತೆ ನಟ ರಾಜ್ ವರ್ಧನ್‌ ಕೂಡ ಭೇಟಿ ನೀಡಿದ್ದರು. ಇನ್ನು, ಕಳೆದ ತಿಂಗಳು ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅಭಯಾರಣ್ಯಕ್ಕೆ ದರ್ಶನ್ ಭೇಟಿ ನೀಡಿದ್ದರು. ದರ್ಶನ್‌ ಅವರಿಗೆ ವನ್ಯಜೀವಿ ಫೋಟೋಗ್ರಫಿ ಅಂದರೆ ತುಂಬ ಇಷ್ಟ. ವನ್ಯ ಜೀವಿಗಳ ಫೋಟೋ ತೆಗೆಯಲು ಅವರು ಬೇರೆ ಬೇರೆ ದೇಶಗಳಿಗೆ ಹೋಗುತ್ತಿರುತ್ತಾರೆ. ಆ ಫೋಟೋಗಳನ್ನು ಮಾರಿದ ನಂತರ ಬರುವ ಹಣವನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸುತ್ತಾರೆ. ಈ ಹಿಂದಿನ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ದರ್ಶನ್ ಅವರು ಅನೇಕ ಕಡೆ ಹೋಗಿ ಬಂದಿದ್ದರು. ಕೆಲ ಅರಣ್ಯಗಳಿಗೆ ಭೇಟಿ ನೀಡಿದ್ದರು. ಮಾರ್ಚ್‌ನಲ್ಲಿ ತೆರೆಕಂಡ ಅವರ 'ರಾಬರ್ಟ್' ಸಿನಿಮಾವು ದೊಡ್ಡ ಯಶಸ್ಸು ಕಂಡಿತ್ತು. ಕೊರೊನಾ ಆತಂಕದ ನಡುವೆಯೂ ಆ ಚಿತ್ರ ನೂರು ಕೋಟಿ ಕ್ಲಬ್ ಸೇರಿತ್ತು. ಸದ್ಯ ಕೊರೊನಾ ಎರಡನೇ ಅಲೆ ಶುರುವಾಗಿರುವುದರಿಂದ ಸಿನಿಮಾ ಕೆಲಸಗಳಿಗೆ ದರ್ಶನ್‌ ಬ್ರೇಕ್ ನೀಡಿದ್ದಾರೆ.