ಬೆಂಗಳೂರಿನಲ್ಲಿ ಫೋನ್‌ ಆಫ್‌ ಮಾಡಿಕೊಂಡು 3 ಸಾವಿರ ಸೋಂಕಿತರು ನಾಪತ್ತೆ: ಆಘಾತಕಾರಿ ವಿಷಯ ತಿಳಿಸಿದ ಆರ್‌ ಅಶೋಕ್‌

ಸದ್ಯಕ್ಕೆ 14 ದಿನ ಕಫ್ರ್ಯೂ ಜಾರಿಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದಿದ್ದರೆ ಮುಂದಿನ ಯೋಚನೆ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಯವರು ಪರಿಸ್ಥಿತಿ ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಇದೇ ವೇಳೆ ಸಚಿವ ಆರ್‌ ಅಶೋಕ್‌ ತಿಳಿಸಿದ್ದಾರೆ. ಇನ್ನು ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 22596 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 137 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಫೋನ್‌ ಆಫ್‌ ಮಾಡಿಕೊಂಡು 3 ಸಾವಿರ ಸೋಂಕಿತರು ನಾಪತ್ತೆ: ಆಘಾತಕಾರಿ ವಿಷಯ ತಿಳಿಸಿದ ಆರ್‌ ಅಶೋಕ್‌
Linkup
ಬೆಂಗಳೂರು: ರಾಜ್ಯ ರಾಜಧಾನಿ ನಗರದಲ್ಲಿ ಕೊರೊನಾ ಸೋಂಕು ಬಂದಿರುವ 2ರಿಂದ 3 ಸಾವಿರ ಜನರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅಂಥವರನ್ನು ಶೋಧಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೊರೊನಾ ಪಾಸಿಟಿವ್‌ ವರದಿ ಬಂದದ್ದರ ಬಗ್ಗೆ ಮೊಬೈಲ್‌ಗೆ ಸಂದೇಶ ಹೋಗುತ್ತಿದ್ದಂತೆ ಇಷ್ಟು ಮಂದಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಇವರನ್ನು ಹುಡುಕುವುದು ಕಷ್ಟದ ಕೆಲಸ. ಪೊಲೀಸರ ಮೂಲಕ ಶೋಧ ಕಾರ್ಯ ಮಾಡಿಸುವುದೂ ಕಷ್ಟಸಾಧ್ಯವಾಗಿದೆ. ಹಾಗಾಗಿ, ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡ ಸೋಂಕಿತರು ತಮ್ಮ ಸಂಪರ್ಕ ತಿಳಿಸಬೇಕು. ಯಾರೂ ಕೂಡ ಹೀಗೆ ಮಾಡಬಾರದು,'' ಎಂದು ಮನವಿ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ನೋಡಿ ವಿಸ್ತರಣೆ! ''ಸದ್ಯಕ್ಕೆ 14 ದಿನ ಕಫ್ರ್ಯೂ ಜಾರಿಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದಿದ್ದರೆ ಮುಂದಿನ ಯೋಚನೆ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಯವರು ಪರಿಸ್ಥಿತಿ ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ,'' ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 22596 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 137 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.