4ನೇ ತ್ರೈಮಾಸಿಕದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಲು ಎಲ್‌ಐಸಿ ಸಜ್ಜು, ಸೃಷ್ಟಿಯಾಗಲಿದೆ ಇತಿಹಾಸ

'ಭಾರತೀಯ ಜೀವ ವಿಮಾ ನಿಗಮ'ದ ಐಪಿಒ ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ 2022ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್‌ ಪಾಂಡೆ ಹೇಳಿದ್ದಾರೆ.

4ನೇ ತ್ರೈಮಾಸಿಕದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಲು ಎಲ್‌ಐಸಿ ಸಜ್ಜು, ಸೃಷ್ಟಿಯಾಗಲಿದೆ ಇತಿಹಾಸ
Linkup
ಹೊಸದಿಲ್ಲಿ: ದೇಶದ ಬಹುನಿರೀಕ್ಷಿತ 'ಭಾರತೀಯ ()'ದ ಆರಂಭಿಕ ಷೇರು ಕೊಡುಗೆ (ಐಪಿಒ) ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ 2022ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ಹೇಳಿದ್ದಾರೆ. ಮೂಲಕ ಸರಕಾರ 10 ಲಕ್ಷ ಕೋಟಿ ರೂ. (133 ಬಿಲಿಯನ್ ಡಾಲರ್‌) ಸಂಗ್ರಹಿಸಲು ಯೋಜನೆ ರೂಪಿಸಿದೆ. ಕಂಪನಿಯ ಶೇ. 10ರಷ್ಟು ಷೇರುಗಳನ್ನು ಮಾರಾಟ ಮಾಡುವುದು ಸರಕಾರದ ಚಿಂತನೆಯಾಗಿದೆ. ಒಂದೊಮ್ಮೆ ಕಂಪನಿಯ ಶೇ. 5ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದೇ ಆದಲ್ಲಿ ಇದು ಭಾರತದ ಅತೀ ದೊಡ್ಡ ಐಪಿಒ ಆಗಲಿದೆ. ಹಾಗೊಮ್ಮೆ ಶೇ. 10ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದಲ್ಲಿ ಇದು ಜಾಗತಿಕವಾಗಿ ವಿಮಾ ಕಂಪನಿಯೊಂದರ ಎರಡನೇ ಅತೀ ದೊಡ್ಡ ಐಪಿಒ ಆಗಲಿದೆ ಎಂದು ಬ್ಲ್ಯೂಂಬರ್ಗ್‌ ವರದಿ ಮಾಡಿದೆ. ಕಳೆದ ತಿಂಗಳು ಬ್ಲೂಂಬರ್ಗ್‌ ಜತೆಗಿನ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್‌, “ನಾವು ಇದನ್ನು (ಐಪಿಒ) ಮಾಡುವಂತೆ ಒತ್ತಾಯಿಸುತ್ತಿದ್ದೇವೆ. ಸಮಸ್ಯೆ ನಮಗೆ ಬೇಡವೆಂದಲ್ಲ; ಆದರೆ ಸರಿಯಾದ ಪ್ರಕ್ರಿಯೆಯನ್ನು ಮಾಡುವ ಪ್ರಶ್ನೆಯಾಗಿದೆ,” ಎಂದು ಹೇಳಿದ್ದರು. 2020ರ ಫೆಬ್ರವರಿಯಲ್ಲಿಯೇ ಎಲ್‌ಐಸಿಯ ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ಸರಕಾರ ಚಿಂತನೆ ನಡೆಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕದಿಂದಾಗಿ ಈ ಪ್ರಕ್ರಿಯೆ ಮುಂದೂಡಲ್ಪಟ್ಟಿತು. ಭಾರತ ಸರಕಾರ 5-6 ಸರಕಾರಿ ಸ್ವಾಮ್ಯದ ಕಂಪನಿಗಳನ್ನು 2021 - 22ರಲ್ಲಿ ಖಾಸಗೀಕರಣಗೊಳಿಸಲು ಉದ್ದೇಶಿಸಿದೆ. ಅರ್ಧ ಡಜನ್‌ನಷ್ಟು ಸಿಪಿಎಸ್‌ಇ (ಕೇಂದ್ರ ಸಾರ್ವಜನಿಕ ವಲಯದ ಉದ್ಯಮ) ಗಳಿಗೆ ಡಿಸೆಂಬರ್‌ - ಜನವರಿ ಅವಧಿಯಲ್ಲಿ ಫೈನಾನ್ಶಿಯಲ್‌ ಬಿಡ್‌ ಕರೆಯಲಾಗುವುದು ಎಂದು ತುಹಿನ್‌ ಪಾಂಡೆ ತಿಳಿಸಿದ್ದಾರೆ. ಬಿಪಿಸಿಎಲ್‌ನ ಮಾರಾಟದ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತುಹಿನ್‌ ಪಾಂಡೆ ಹೇಳಿದ್ದು, ಇನ್ನುಳಿದ ಬಿಇಎಂಎಲ್‌, ಶಿಪ್ಪಿಂಗ್‌ ಕಾರ್ಪೊರೇಷನ್‌, ಪವನ್‌ ಹಾನ್ಸ್‌, ಸೆಂಟ್ರಲ್‌ ಎಲೆಕ್ಟ್ರಾನಿಕ್ಸ್‌ ಮತ್ತು ನೀಲಾಂಚಲ್‌ ಇಸ್ಪತ್‌ನ ಫೈನಾನ್ಶಿಯಲ್‌ ಬಿಡ್ಡಿಂಗ್‌ ಡಿಸೆಂಬರ್‌ - ಜನವರಿಯಲ್ಲಿ ನಡೆಯಬಹುದು ಎಂದು ತಿಳಿಸಿದ್ದಾರೆ.