35 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ

ಸೂಲಿಬೆಲೆ ಸಮೀಪದ ಗಿಡ್ಡಪ್ಪನಹಳ್ಳಿಯಲ್ಲಿ 35 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್‌ ಭೂಮಿ ಪೂಜೆ ನಡೆಸಿದರು. ದರಿಂದ ಈ ಬಾಗದಲ್ಲಿ ಕಸ ವಿಲೇವಾರಿ ಸುಗಮಗೊಂಡು ಸ್ವಚ್ಚತೆಯನ್ನು ಕಾಪಾಡಲು ಸಹಕಾರಿಯಾಗಲಿದೆ.

35 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ
Linkup
ಸೂಲಿಬೆಲೆ: ಇಲ್ಲಿಗೆ ಸಮೀಪದ ಗಿಡ್ಡಪ್ಪನಹಳ್ಳಿಯಲ್ಲಿ 35 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್‌ ಭೂಮಿ ಪೂಜೆ ನಡೆಸಿದರು. ನಂತರ ಮಾತನಾಡಿದ ಅವರು,ಗಿಡ್ಡಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗಾಗಿ ಭೂಮಿಯನ್ನು ಗುರ್ತಿಸಿದ್ದು ನರೇಗಾ ಯೋಜನೆಯಡಿ ಸುಮಾರು 35 ಲಕ್ಷ ವೆಚ್ಚದಲ್ಲಿ ಘಟಕವನ್ನು ನಿರ್ಮಾಣ ಮಾಡಲಾಗುವುದು.ಇದರಿಂದ ಈ ಬಾಗದಲ್ಲಿ ಕಸ ವಿಲೇವಾರಿ ಸುಗಮಗೊಂಡು ಸ್ವಚ್ಚತೆಯನ್ನು ಕಾಪಾಡಲು ಸಹಕಾರಿಯಾಗಲಿದೆ. ಸ್ವಚ್ಚ ಗ್ರಾಮಗಳನ್ನು ಹೊಂದುವುದು ಗ್ರಾಪಂ ಮುಖ್ಯ ಉದ್ದೇಶವಾಗಿದೆ ಎಂದರು ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಅಕ್ಬರ್‌ ಆಲಿ ಖಾನ್‌ ಮಾತನಾಡಿ,ಬಹುದಿನಗಳಿಂದ ಕಸ ವಿಲೇವಾರಿ ಘಟ ಕವನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಸಾಕಾರಗೊಂಡಿದೆ. ಈಗಾಗಲೇ ಗ್ರಾಪಂ ಹಂತದಲ್ಲಿ ನರೇಗಾ ಯೋಜನೆಯಲ್ಲಿ ಹಲವು ಕಾಮಗಾರಿಗಳನ್ನು ಮಾಡಿದ್ದು ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ,ಮೋರಿ ಕಾಮಗಾರಿ,ಪ್ರಾರ್ಥನ ಮಂದಿರದ ಕಾಂಕ್ರಿಟ್‌ ರಸ್ತೆ ಅಭಿವೃದ್ದಿ ಮಾಡಲಾಗಿದೆ ಎಂದರು. ಮುಖಂಡರಾದ ಜೆಟಿಬಿ ಲೋಕೇಶ್‌,ಜಿ.ಎನ್‌ ದೇವರಾಜ್‌ ಮೊದಲಾದವರು ಹಾಜರಿದ್ದರು.