17 ವರ್ಷದ ಹುಡುಗಿಗೆ ಫೋಟೋ ಕಳಿಸಿ ಎಂದು ಕೇಳಿದ್ದ ನಟನ ಮೆಸೇಜ್‌ ಸ್ಕ್ರೀನ್‌ಶಾಟ್ ವೈರಲ್; ನಟ ಹೇಳಿದ್ದೇನು?

ನಟರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಫೋಟೋ, ಫೋನ್ ನಂಬರ್ ನೀಡುವಂತೆ ಮೆಸೇಜ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆ ಬಗ್ಗೆ ನಟರು ಮೌನ ಮುರಿದಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

17 ವರ್ಷದ ಹುಡುಗಿಗೆ ಫೋಟೋ ಕಳಿಸಿ ಎಂದು ಕೇಳಿದ್ದ ನಟನ ಮೆಸೇಜ್‌ ಸ್ಕ್ರೀನ್‌ಶಾಟ್ ವೈರಲ್; ನಟ ಹೇಳಿದ್ದೇನು?
Linkup
ಡ್ಯಾನಿಯಲ್ ಅನ್ನೀ ಪೋಪ್ ಅವರು ವಿಜಯ್ ಸೇತುಪತಿ ಅವರ 'ಇದರಕುತಾನೆ ಆಸೈಪಟ್ಟೈ ಬಲಕುಮಾರ' ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದ್ದರೂ ಖ್ಯಾತಿ ಪಡೆದಿದ್ದರು. ಬಿಗ್ ಬಾಸ್ ತಮಿಳು ಸೀಸನ್ 2ರಲ್ಲಿಯೂ ಭಾಗವಹಿಸಿದ್ದರು. ಕೆಲ ದಿನಗಳಿಂದ ಒಂದು ವಿವಾದಲ್ಲಿ ಡ್ಯಾನಿಯಲ್ ಹೆಸರು ಕೇಳಿ ಬರುತ್ತಿದೆ. ಮಹಿಳೆಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿ ಫೋಟೋ, ಫೋನ್ ನಂಬರ್‌ಗಳನ್ನು ಡ್ಯಾನಿಯಲ್ ಕೇಳುತ್ತಿದ್ದಾರಂತೆ. ಈ ಕುರಿತು ಕೆಲವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ. ಆ ಬಗ್ಗೆ ಡ್ಯಾನಿಯಲ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ದಿನಗಳ ಕಾಲ ಡ್ಯಾನಿಯಲ್ ಅವರು ಸುಮ್ಮನೆ ಇದ್ದರು. ಈಗ ಕೊನೆಯದಾಗಿ ಹೇಳಿಕೆ ನೀಡುವುದರ ಮೂಲಕ ಮೌನ ಮುರಿದಿದ್ದಾರೆ. "ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಟ್ವಿಟ್ಟರ್ ಮುಂತಾದ ಕಡೆ ಅವರ ಬಗ್ಗೆ ಕೆಲ ದಿನಗಳ ಹಿಂದಿನಿಂದ ಸುದ್ದಿ ಹರಿದಾಡುತ್ತಿದೆ. ಅಸಭ್ಯ ಮಾತುಗಳಿಂದ ಸಮಾಜದಲ್ಲಿ ಅವರ ಪ್ರತಿಷ್ಠೆ ಹಾಳು ಮಾಡಲು ಪ್ರಯತ್ನಪಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಡ್ಯಾನಿಯಲ್ ವಿರುದ್ಧದ ಫೋಟೋ, ಮೀಮ್ಸ್, ವಿಡಿಯೋಗಳನ್ನು ಅಪ್‌ಲೋಡ್ ಮಾಡಿರೋದನ್ನು ಡಿಲಿಟ್ ಮಾಡಬೇಕು. ಇಲ್ಲವಾದಲ್ಲಿ ಚೆನ್ನೈನ ಸೈಬರ್‌ ಕೇಂದ್ರದಲ್ಲಿ ದೂರು ದಾಖಲು ಮಾಡಿ, ಮಾನನಷ್ಟ ಮೊಕದ್ದಮೆ ಹೂಡಲಾಗುವುದು" ಎಂದು ಡ್ಯಾನಿಯಲ್ ಅನ್ನೀ ಪೋಪ್ ಅವರ ವಕೀಲ ಎಸ್ ರಘುಮಾನ್ ಅವರು ಹೇಳಿಕೆ ನೀಡಿದ್ದಾರೆ. ವಕೀಲ ಎಸ್ ರಘುಮಾನ್ ಹೇಳಿಕೆ ಪ್ರಕಾರ ಸಮಾಜದಲ್ಲಿ ಡ್ಯಾನಿಯಲ್ ಅನ್ನೀ ಪೋಪ್ ಅವರ ಹೆಸರನ್ನು ಹಾಳುಮಾಡುವುದಕ್ಕೋಸ್ಕರ ಒಂದು ಗುಂಪು ಕಾರ್ಯ ನಿರ್ವಹಿಸುತ್ತಿದೆ. ನಟ ಸಿಂಬು ಅವರ ಮುಂಬರುವ 'ಮಾನಾಡು' ಸಿನಿಮಾದಲ್ಲಿ ಡ್ಯಾನಿಯಲ್ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.