ಹಿರಿಯ ನಾಗರಿಕರಿಗೆ ಈ ಬ್ಯಾಂಕುಗಳಲ್ಲಿದೆ ವಿಶೇಷ ಎಫ್‌ಡಿ ಸ್ಕೀಮ್ಸ್‌! ಬಡ್ಡಿಯೂ ಹೆಚ್ಚು!

ದೇಶದ ಅತಿ ದೊಡ್ಡ ಬ್ಯಾಂಕ್​ ಏನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಹಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ (ಎಫ್‌ಡಿ) ಮೇಲೆ ಹೆಚ್ಚಿನ ಬಡ್ಡಿದರ ಒದಗಿಸುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕರಿಗೆ ಈ ಬ್ಯಾಂಕುಗಳಲ್ಲಿದೆ ವಿಶೇಷ ಎಫ್‌ಡಿ ಸ್ಕೀಮ್ಸ್‌! ಬಡ್ಡಿಯೂ ಹೆಚ್ಚು!
Linkup
ಹೊಸದಿಲ್ಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಏನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ () ಸೇರಿದಂತೆ ಹಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ (ಎಫ್‌ಡಿ) ಮೇಲೆ ಹೆಚ್ಚಿನ ಬಡ್ಡಿದರ ಒದಗಿಸುತ್ತಿವೆ. ಖಾಸಗಿ ಬ್ಯಾಂಕುಗಳಾದ ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ಗಳು ಕೂಡ ಎಫ್‌ಡಿ ಮೇಲೆ ಹೆಚ್ಚು ಬಡ್ಡಿ ನೀಡುತ್ತಿವೆ. ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಬಡ್ಡಿದರಗಳಲ್ಲಿ ಭಾರೀ ಕುಸಿತವಾಗಿತ್ತು. ಈ ಪರಿಸ್ಥಿತಿಯಲ್ಲೂ ಹಿರಿಯ ನಾಗರಿಕರಿಗೆ ಸ್ವಲ್ಪ ಮಟ್ಟಿಗೆ ನೆರವಾಗಲು ಈ ವಿಶೇಷ ಎಫ್ಡಿ. ಯೋಜನೆಯನ್ನು ಕಳೆದ ವರ್ಷವೇ ಪರಿಚಯಿಸಲಾಗಿತ್ತು. ಯಾವ ಯಾವ ಬ್ಯಾಂಕಿನಿಲ್ಲಿ ಯಾವ ಯೋಜನೆಗಳಿವೆ? ಎಷ್ಟು ಬಡ್ಡಿ ನಿಗದಿಯಾಗಿದೆ ಎಂಬ ವಿವರ ಇಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್ಡಿ ವಿಶೇಷ ಠೇವಣಿ ಆಫರ್‌ನ ಸಮಯದಲ್ಲಿ ಐದು ವರ್ಷದಿಂದ 10 ವರ್ಷಗಳ ಅವಧಿಗೆ 5 ಕೋಟಿಗಿಂತ ಕಡಿಮೆ (ಎಫ್‌ಡಿ) ಇಡಲು ಬಯಸುವ ಹಿರಿಯ ನಾಗರಿಕರಿಗೆ ಶೇ 0.25 ಹೆಚ್ಚುವರಿ ಪ್ರೀಮಿಯಂ (ಶೇ 0.50ಕ್ಕಿಂತ ಹೆಚ್ಚು) ನೀಡಲಾಗುತ್ತದೆ. 2020 ಮೇ 18ರಿಂದ 2022ರ ಮಾರ್ಚ್‌ 31ರವರೆಗೆ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಈ ವಿಶೇಷ ಕೊಡುಗೆಯು ಮೇಲ್ಕಂಡ ಅವಧಿಗೆ ಹಿರಿಯ ನಾಗರಿಕರ ಹೊಸ ಎಫ್‌ಡಿ ಹಾಗೂ ರಿನೀವಲ್‌ ಎಫ್‌ಡಿಗಳಿಗೂ ಅನ್ವಯಿಸುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಅಡಿಯಲ್ಲಿ ನಿಶ್ಚಿತ ಠೇವಣಿ ಇರಿಸಿದರೆ ಶೇ 6.25ರ ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಗೋಲ್ಡನ್ ಇಯರ್ ಎಫ್ಡಿ ಹಿರಿಯ ನಾಗರಿಕ ಗ್ರಾಹಕರು ಸೀಮಿತ ಅವಧಿಗೆ ಶೇ 0.20ರಷ್ಟು ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ ಮತ್ತು ವರ್ಷಕ್ಕೆ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ದರ ಪಡೆಯುತ್ತಾರೆ. ಸ್ಕೀಮ್ ಅವಧಿಯಲ್ಲಿ ತೆರೆದಿರುವ ಹೊಸ ಠೇವಣಿಗಳು ಮತ್ತು ನವೀಕರಿಸಿದ ಠೇವಣಿಗಳ ಮೇಲೆ ಹೆಚ್ಚುವರಿ ದರವು ಲಭ್ಯವಿರುತ್ತದೆ.
  • ಅರ್ಹ ಎಫ್ಡಿ ಅವಧಿ: 5 ವರ್ಷದ 1 ದಿನದಿಂದ 10 ವರ್ಷಗಳವರೆಗೆ
  • ಅನ್ವಯಿಸುವ ಅವಧಿ: 2020ರ ಮೇ 20ರಿಂದ 2022ರ ಏಪ್ರಿಲ್‌ 8
  • 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್ಡಿಗೆ ಈ ಯೋಜನೆ ಅನ್ವಯಿಸುತ್ತದೆ
  • ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ ಎಫ್‌ಡಿ ಯೋಜನೆಯುಡಿ ವಾರ್ಷಿಕ ಶೇ 6.30ರಷ್ಟು ಬಡ್ಡಿ ದರ ನೀಡುತ್ತದೆ.
ಹಿರಿಯ ನಾಗರಿಕರಿಗಾಗಿ ಎಸ್ಬಿಐ Wecare ಠೇವಣಿ ರೀಟೇಲ್ ಟರ್ಮ್ ಡೆಪಾಸಿಟ್ (TD) ವಿಭಾಗದಲ್ಲಿ ಪರಿಚಯಿಸಲಾದ ಹಿರಿಯ ನಾಗರಿಕರಿಗಾಗಿ ವಿಶೇಷ “SBI Wecare” ಠೇವಣಿ ಯೋಜನೆಯಲ್ಲಿ 30 ಬೇಸಿಸ್ ಪಾಯಿಂಟ್ ಹೆಚ್ಚುವರಿ ಪ್ರೀಮಿಯಂ (ಅಸ್ತಿತ್ವದಲ್ಲಿರುವ 50 ಬಿಪಿಎಸ್ಗಿಂತ ಹೆಚ್ಚಿನದು) ಹಿರಿಯ ನಾಗರಿಕರಿಗೆ ಅವರ ರೀಟೇಲ್ TDಗಾಗಿ ಪಾವತಿಸಲಾಗುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಈ ಠೇವಣಿ ಯೋಜನೆಯನ್ನು 31ನೇ ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಎಫ್‌ಡಿ ಯೋಜನೆಯಡಿ ನಿಶ್ಚಿತ ಠೇವಣಿ ಇರಿಸಿದರೆ ವಾರ್ಷಿಕ ಶೇ 6.20ರಷ್ಟು ಬಡ್ಡಿದರ ನೀಡಲಾಗುತ್ತದೆ.