ಹೆರಿಗೆಯಾದ ಆರೇ ದಿನಕ್ಕೆ ಕೆಲಸಕ್ಕೆ ಮರಳಿದ ನಟಿ ನೇಹಾ ಧೂಪಿಯಾ!

ನಟಿ ನೇಹಾ ಧೂಪಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿ ಆರು ದಿನಗಳ ನಂತರ ಕೆಲಸಕ್ಕೆ ಮರಳಿದ್ದಾರೆ. ಸಾಮಾನ್ಯ ಜನರು ಸೇರಿದಂತೆ ಸೆಲೆಬ್ರಿಟಿಗಳು ಕೂಡ ಹೆರಿಗೆ ನಂತರ ಕೆಲ ಸಮಯ ತೆಗೆದುಕೊಂಡು, ಕೆಲಸಕ್ಕೆ ಮರಳುತ್ತಾರೆ, ಆದರೆ ನೇಹಾ ಬಹುಬೇಗ ಕೆಲಸ ಶುರು ಮಾಡಿದ್ದಾರೆ.

ಹೆರಿಗೆಯಾದ ಆರೇ ದಿನಕ್ಕೆ ಕೆಲಸಕ್ಕೆ ಮರಳಿದ ನಟಿ ನೇಹಾ ಧೂಪಿಯಾ!
Linkup
ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿರುವ ನಟಿ ಅವರು ತಾವು ಹೆರಿಗೆಯಾದ ಆರೇ ದಿನಕ್ಕೆ ಜಾಹೀರಾತೊಂದರ ಶೂಟಿಂಗ್‌ನಲ್ಲಿ ಭಾಗಿಯಾದೆ ಎಂದಿದ್ದಾರೆ. ಇದರಿಂದ ತಮಗೆ ಪ್ರಸವದ ನಂತರದ ಒತ್ತಡದಿಂದ ಹೊರಬರಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಅವರ ಮನೆಯಲ್ಲಿಯೇ ನಡೆದ ಈ ಶೂಟಿಂಗ್‌ನಲ್ಲಿ ನೇಹಾ ಪಾಲ್ಗೊಂಡಿದ್ದು, ಈಗಲೂ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಹೆರಿಗೆ ಬಗ್ಗೆ ಮಾತನಾಡಿದ ನೇಹಾ ಧೂಪಿಯಾ ಈ ಬಗ್ಗೆ ಹೇಳಿಕೊಂಡಿರುವ ಅವರು, ‘ಪೋಸ್ಟ್‌ಪಾರ್ಟಮ್‌ ಅಂದರೆ ಪ್ರಸವಾ ನಂತರದ ಬಗ್ಗೆ ಮಹಿಳೆಯರು ಅಥವಾ ಹೊಸ ತಾಯಂದಿರು ಮಾತನಾಡಿಕೊಳ್ಳುವುದನ್ನು ನಾನು ಈವರೆಗೂ ನೋಡಿಲ್ಲ. ಈ ವಿಷಯದ ಬಗ್ಗೆಯೂ ಜನರು ಮಾತನಾಡಬೇಕು. ಹೆರಿಗೆಯ ನಂತರದ ಒತ್ತಡದ ಬಗ್ಗೆಯೂ ಜಾಗೃತಿ ಮೂಡಬೇಕು. ಮಗು ಹೊಟ್ಟೆಯಿಂದ ಹೊರಗೆ ಬಂದ ನಂತರ ಖಾಲಿತನದ ಅನುಭವವಾಗುತ್ತದೆ. ಅದೇ ರೀತಿ ಮಗುವಿಗೆ ರಾತ್ರಿ ವೇಳೆ ಹಾಲುಣಿಸುವುದು, ನಿದ್ರೆ ಬಾರದಿರುವುದು, ಕೈಯಲ್ಲಿರುವ ಮಗು ಎಡೆಬಿಡದೆ ಅಳುವಾಗ ಏನು ಮಾಡಬೇಕೆಂದು ತೋಚದೆ ಇರುವುದು ಇತ್ಯಾದಿಗಳು ಬಾಣಂತಿಯರಲ್ಲಿ ಒತ್ತಡ ಉಂಟು ಮಾಡುತ್ತವೆ. ನನಗೆ ಈಗ ಈ ಬಗ್ಗೆ ಗೊತ್ತಾಗಿದೆ. ಈ ಕಾರಣಗಳು ನನ್ನನ್ನು ಅಸಮಾಧಾನಗೊಳಿಸದಂತೆ ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ನೇಹಾ ಧೂಪಿಯಾ ವಿವರಿಸಿದ್ದಾರೆ. ದೇಹ ಪ್ರಶಂಸಿಸಿ ಎಂದ ನೇಹಾ ಧೂಪಿಯಾ ತಾಯಿಯಾಗಿರುವುದಕ್ಕೆ ನಮ್ಮನ್ನು ನಾವು ಪ್ರಶಂಸಿಕೊಳ್ಳುವುದು ಅತಿ ಮುಖ್ಯ ಎಂದಿರುವ ಅವರು, ‘ಪ್ರತಿ ತಾಯಂದಿರು ಕನ್ನಡಿ ನೋಡಿಕೊಳ್ಳುವಾಗ ಇನ್ನೊಂದು ಜೀವಕ್ಕೆ ಜೀವ ಕೊಟ್ಟಿರುವ ನಿಮ್ಮ ದೇಹವನ್ನು ಪ್ರಶಂಸಿಸಿ. ಸ್ಟಿಚ್‌ಗಳು, ಸ್ಟ್ರೆಚ್‌ ಮಾರ್ಕ್ ಅಥವಾ ಹೊಟ್ಟೆ ದಪ್ಪವಾಗಿದ್ದರೆ ಅದರ ಬಗ್ಗೆ ಹೆಮ್ಮೆಪಡಿ. ಯಾಕೆಂದರೆ ನೀವು ಮಾಡಿದ್ದನ್ನು ಬೇರೆ ಯಾರು ಕೂಡ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಖುಷಿ ವಿಷಯ ಹಂಚಿಕೊಂಡಿದ್ದ ಅಕ್ಟೋಬರ್ 3ರಂದು ನೇಹಾ ಧೂಪಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲು ಅವರಿಗೆ ಮಗಳು ಹುಟ್ಟಿದ್ದಳು. ಈ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದ ನೇಹಾ ಧೂಪಿಯಾ "Bedi’s Boy. ನಮಗೆ ದೇವರು ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ನೇಹಾ ಮತ್ತು ಮಗು ಆರೋಗ್ಯವಾಗಿದ್ದಾರೆ. ’ಬೇಬಿ' ಎಂಬ ಟೈಟಲ್‌ನ್ನು ತನ್ನ ತಮ್ಮನಿಗೆ ಕೊಡಲು ಮೆಹರ್ ಸಿದ್ಧವಾಗಿದ್ದಾಳೆ. ಈ ಪಯಣವನ್ನು ಹೋರಾಡಿದ ನೇಹಾ ಧೂಪಿಯಾಗೆ ಧನ್ಯವಾದಗಳು’’ ಎಂದು ಹೇಳಿದ್ದಾರೆ. 2018ರಲ್ಲಿ ಮದುವೆಯಾಗಿದ್ದ ನೇಹಾ ಧೂಪಿಯಾ-ಅಂಗದ್ ಬೇಡಿ 2018ರ ಮೇ 10 ರಂದು ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ನಂತರ ನವೆಂಬರ್‌ನಲ್ಲಿ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಹು ಬೇಗ ಮಗುವಾಗಿದ್ದಕ್ಕೆ ನೇಹಾ ಆ ವೇಳೆ ಅವರು ಟ್ರೋಲ್ ಆಗಿದ್ದರು. ಇದುವರೆಗೂ ನೇಹಾ ದಂಪತಿ ಮಗಳ ಮುಖವನ್ನು ಸೋಶಿಯಲ್ ಮೀಡಿಯಾದಲ್ಲಿ ತೋರಿಸಿಲ್ಲ. ಆಸ್ಪತ್ರೆಯಲ್ಲಿ ನೇಹಾ ಧೂಪಿಯಾ ಜೊತೆಗಿರುವ ಫೋಟೋಗಳನ್ನು ಸೋಹಾ ಅಲಿ ಖಾನ್ ಹಂಚಿಕೊಂಡಿದ್ದರು.