ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ

ರಿವರ್ಸ್ ವಾಕಿಂಗ್ ಕೀಲು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್‌ಗಳಂತಹ ಸ್ನಾಯುಗಳ ಪ್ರತ್ಯೇಕ ಗುಂಪನ್ನು ತೊಡಗಿಸುತ್ತದೆ. ಸ್ಥಿರತೆ ಮತ್ತು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಯಮಿತ ರಿವರ್ಸ್ ವಾಕಿಂಗ್ ಕೆಳಗಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಾಗ ಕೆಳ ಕಾಲುಗಳಲ್ಲಿ ಸ್ನಾಯು ಸಹಿಷ್ಣುತೆಯನ್ನು ಸುಧಾರಿಸುತ್ತದೆ. 25 ವರ್ಷದ ನೇಹಾ ಖನ್ನಾ ಅಪಘಾತದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಬಳಿಕ ಹಾಸಿಗೆ ಹಿಡಿದಳು. ಆಕೆಯಂತಹ ಕ್ರಿಯಾಶೀಲ ವ್ಯಕ್ತಿ ಕುಳಿತಲ್ಲಿಯೇ ಕೂರುವುದು ದೊಡ್ಡ ಶಿಕ್ಷೆಯೇ ಸರಿ. ಹೀಗಾಗಿಯೇ ಆಕೆ ಕೆಲ ವ್ಯಾಯಾಮ ಮಾಡಲು ಬಯಸಿದ್ದಳು. ಆದರೆ, ಆಕೆಯ ಮೊಣಕಾಲಿನಲ್ಲಿನ ಅಂಗಾಂಶಗಳಿಗಾಗಿದ್ದ ಗಾಯದ ತೀವ್ರತೆಯಿಂದಾಗಿ ನಿಧಾನವಾಗಿ ಗುಣಮುಖವಾಗುತ್ತಿತ್ತು. ಆಕೆಯ ಮೊಣಕಾಲಿನ ಪ್ರೊಪ್ರಿಯೋಸೆಪ್ಷನ್ ಅನ್ನು ಸುಧಾರಿಸಲು ಪುನಶ್ಚೇತನ ವ್ಯಾಯಾಮವಾಗಿ ರಿವರ್ಸ್ ವಾಕಿಂಗ್ ಮಾಡಲು ಆಕೆಯ ವೈದ್ಯರು ಶಿಫಾರಸು ಮಾಡಿದರು. ಈ ರೀತಿಯ ನಡಿಗೆಯು ಖನ್ನಾ ಅವರಂತಹ ರೋಗಿಗಳಿಗೆ ಉಪಯುಕ್ತವಾಗಿರುತ್ತದೆ. ಏಕೆಂದರೆ, ಇದು ಪಾದಗಳು ನೆಲವನ್ನು ಸ್ಪರ್ಶಿಸುವ ಬಲ ಮತ್ತು ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅಂಗಗಳ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. 'ಇದು ದೈಹಿಕ ಚೇತರಿಕೆಗೆ ಸಹಾಯ ಮಾಡುವುದಲ್ಲದೆ, ನನ್ನ ಮಾನಸಿಕ ಚುರುಕುತನವನ್ನು ಸುಧಾರಿಸಿತು. ಏಕೆಂದರೆ, ನಿಯಮಿತವಾದ ರಿವರ್ಸ್ ವಾಕಿಂಗ್ ಏಕತಾನತೆಯ ಕ್ರಿಯೆಯಿಂದ ಹೊರಬರಲು ನನ್ನ ಮೆದುಳಿಗೆ ಸವಾಲು ಹಾಕಿತು' ಎಂದು ಖನ್ನಾ ಹೇಳುತ್ತಾರೆ. ದೇಹಕ್ಕಾಗುವ ಪ್ರಯೋಜನಗಳು ರಿವರ್ಸ್ ವಾಕಿಂಗ್ ಕೀಲು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್‌ಗಳಂತಹ ಸ್ನಾಯುಗಳ ಪ್ರತ್ಯೇಕ ಗುಂಪನ್ನು ತೊಡಗಿಸುತ್ತದೆ. ಸ್ಥಿರತೆ ಮತ್ತು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಯಮಿತ ರಿವರ್ಸ್ ವಾಕಿಂಗ್ ಕೆಳಗಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಳಿಜಾರು ಅಥವಾ ಇಳಿಮುಖವಾಗಿ ನೀವು ರಿವರ್ಸ್ ವಾಕಿಂಗ್ ಮಾಡಿದಾಗ ನಿರಂತರ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಹಲವಾರು ಸ್ನಾಯು ಗುಂಪುಗಳ ಚಲನೆಯ ವ್ಯಾಪ್ತಿಯನ್ನು ಬದಲಾಯಿಸಬಹುದು, ಪ್ಲ್ಯಾಂಟರ್ ಫ್ಯಾಸಿಟಿಸ್ ಎಂಬ ಸಾಮಾನ್ಯ ಸ್ಥಿತಿಯಿಂದ ಉಂಟಾಗುವ ನೋವಿಗೆ ಪರಿಹಾರ ನೀಡುತ್ತದೆ, ಹಿಮ್ಮಡಿ ನೋವಿಗೆ ಕಾರಣವಾಗುವ ಹಿಮ್ಮಡಿ ಮೂಳೆಯನ್ನು ಕಾಲ್ಬೆರಳುಗಳಿಗೆ ಸಂಪರ್ಕಿಸುವ ಅಂಗಾಂಶದ ಉರಿಯೂತವನ್ನು ನಿವಾರಿಸುತ್ತದೆ ಎಂದು ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಸಂಸ್ಥೆಯ ಮುಖ್ಯ ಯೋಗ ಅಧಿಕಾರಿ ಡಾ.ರಾಜೀವ್ ರಾಜೇಶ್ ಹೇಳುತ್ತಾರೆ. ಇದನ್ನೂ ಓದಿ: ವಯಸ್ಸಾಗುತ್ತಾ ಹೋದಂತೆ ಮೂಳೆಗಳನ್ನು ಬಲಿಷ್ಠವಾಗಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ... ರಿವರ್ಸ್ ವಾಕಿಂಗ್ ಮಾಡುವುದರಿಂದ ಸಾಮಾನ್ಯವಾಗಿ ನಡೆಯುವುದಕ್ಕಿಂತ ಶೇ 40 ರಷ್ಟು ಹೆಚ್ಚು ಶಕ್ತಿಯು ಖರ್ಚಾಗುತ್ತದೆ. ಆದ್ದರಿಂದ, ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹಿಮ್ಮುಖವಾಗಿ ಚಲಿಸುವುದರಿಂದ ನಿಮ್ಮ ಹೃದಯವು ವೇಗವಾಗಿ ಬಡಿಯುತ್ತದೆ. ಸವಾಲಿನ ನೆಲಗಳಲ್ಲಿ ಸತತವಾಗಿ ರಿವರ್ಸ್ ವಾಕಿಂಗ್ ಮಾಡಿದರೆ, ಇದೊಂದು ಉತ್ತಮ ಕಾರ್ಡಿಯೋ ವ್ಯಾಯಾಮವಾಗಿರುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ಬೆಂಗಳೂರಿನ ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್‌ನ ಮುಖ್ಯಸ್ಥೆ ಡಾ ಕಾರ್ತಿಯಾಯಿನಿ ಮಹದೇವನ್ ಮಾತನಾಡಿ, 'ನಿಮ್ಮ ಮೊಣಕಾಲು ಮತ್ತು ಪಾದವನ್ನು ಮುಂಬದಿಯಿಂದ ಬಗ್ಗಿಸಲು ಸಹಾಯ ಮಾಡುವ ಈ ವ್ಯಾಯಾಮವು ಶಿನ್ ಸ್ನಾಯುಗಳಿಗೆ ಉತ್ತಮವಾಗಿದೆ. ನೀವು ರಿವರ್ಸ್ ವಾಕಿಂಗ್ ಮಾಡುವಾಗ, ಕಾಲ್ಬೆರಳು ನೆಲಕ್ಕೆ ತಾಗುತ್ತದೆ ಮತ್ತು ನಂತರ ಪಾದದ ಮೂಲಕ ಹಿಮ್ಮಡಿಗೆ ಭಾರ ರವಾನೆಯಾಗುತ್ತದೆ. ಇದು ಗ್ಲುಟಿಯಲ್ ಸ್ನಾಯುಗಳು ಕೆಲಸ ಮಾಡುವಾಗ ಸುಧಾರಿತ ಸಮನ್ವಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಮನಸ್ಸಿಗಾಗುವ ಪ್ರಯೋಜನಗಳು ರಿವರ್ಸ್ ವಾಕಿಂಗ್ ಮಾಡುವುದು ಹಲವಾರು ನರವೈಜ್ಞಾನಿಕ ಪ್ರಯೋಜನಗಳನ್ನು ಹೊಂದಿದೆ. ಇದು ಸರಳವಾಗಿ ಕಂಡರೂ ಕೂಡ ಅರಿವಿಗೆ ಸಂಬಂಧಿಸಿದ ಕಾರ್ಯಗಳು, ನಮ್ಮ ದೃಷ್ಟಿಗೋಚರ ಮತ್ತು ವೆಸ್ಟಿಬುಲರ್ ವ್ಯವಸ್ಥೆಯ ನಡುವಿನ ಸಮನ್ವಯ ಸಾಧಿಸುತ್ತದೆ. ದೃಷ್ಟಿಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ ಮತ್ತು ಕೈನೆಸ್ತೇಷಿಯಾದಂತಹ ಹಲವಾರು ಅರಿವಿನ ಕಾರ್ಯಗಳನ್ನು ಒಳಗೊಂಡಿರುತ್ತದೆ. ನಮ್ಮ ಮೆದುಳು ಇದೆಲ್ಲವನ್ನೂ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಕಲಿತಿದೆ. ಆದರೆ, ನಾವು ರಿವರ್ಸ್ ವಾಕಿಂಗ್ ಮಾಡಿದಾಗ, ಹೊಸ ರೀತಿಯ ಪುನಶ್ಚೇತನದೊಂದಿಗೆ ಮಿದುಳಿಗೆ ಸವಾಲೆಸೆಯುತ್ತದೆ, ಮರುನಿರ್ದೇಶನಗಳನ್ನು ನೀಡುತ್ತದೆ ಎಂದು ರಾಜೇಶ್ ಹೇಳುತ್ತಾರೆ. ಇದನ್ನೂ ಓದಿ: ಮಾನಸಿಕ, ದೈಹಿಕ ಯೋಗಕ್ಷೇಮಕ್ಕೆ ಧನಾತ್ಮಕ ಪ್ರತಿಫಲ ತರುವ ಮನಃಪೂರ್ವಕ ನಡಿಗೆ ಹೇಗಿರಬೇಕು? ಎತ್ತರ ಅಥವಾ ಅಡೆತಡೆಗಳನ್ನು ಹಾಕಿಕೊಳ್ಳುವ ಮೂಲಕ ನೀವು ಸವಾಲಿನ ಮಟ್ಟವನ್ನು ಹೆಚ್ಚಿಸುತ್ತೀರಿ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಈ ವ್ಯಾಯಾಮವು ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೊಡ್ಡದೆಂದರೆ ನ್ಯೂರೋಪ್ಲ್ಯಾಸ್ಟಿಸಿಟಿಯನ್ನು ಉತ್ತೇಜಿಸುವುದು ಅಥವಾ ಅದರ ಪ್ರೋಗ್ರಾಮಿಂಗ್ ಅನ್ನು ಪುನರ್‌ರಚಿಸುವ ನರಮಂಡಲದ ಸಾಮರ್ಥ್ಯ, ಪರಿಸರ ಪ್ರಚೋದಕಗಳಲ್ಲಿನ ಬದಲಾವಣೆಯನ್ನು ಗಮನಕ್ಕೆ ತರುತ್ತದೆ. ದೇಹವನ್ನು ರಿವರ್ಸ್ ಗೇರ್‌ನಲ್ಲಿ ಹಾಕುವ ಸಮಯ ಇದಾಗಿದೆ. ಸರಿಯಾಗಿ ರಿವರ್ಸ್ ವಾಕಿಂಗ್ ಮಾಡುವುದು ಹೇಗೆ * ತೆರೆದ ಜಾಗವನ್ನು ಆರಿಸಿಕೊಳ್ಳಿ * ನಿಮ್ಮ ಹೆಬ್ಬೆರಳಿನಿಂದ ಹಿಂದಕ್ಕೆ ತಲುಪುವ ಮೂಲಕ ನಿಧಾನವಾಗಿ ಪ್ರಾರಂಭಿಸಿ ಮತ್ತು ನಂತರ ನಿಮ್ಮ ಪಾದದ ಮೂಲಕ ನಿಮ್ಮ ಹಿಮ್ಮಡಿಯ ಕಡೆಗೆ ಚಲಿಸಿ * ಕ್ರಮೇಣ ವೇಗವನ್ನು ಅಭಿವೃದ್ಧಿಪಡಿಸಿಕೊಳ್ಳಿ. ವೇಗವನ್ನು ಹೆಚ್ಚಿಸಲು ಆತುರಪಡಬೇಡಿ. ಮೊದಲ ವಾರದಲ್ಲಿ 10 ನಿಮಿಷಗಳ ಕಾಲ ಪ್ರತಿದಿನ ಈ ರೀತಿಯಲ್ಲಿ ನಡೆಯಿರಿ ಮತ್ತು ನಂತರದ ವಾರದಲ್ಲಿ 15 ನಿಮಿಷಗಳ ಕಾಲ ಕ್ರಮೇಣ ಸಮಯ ಮತ್ತು ವೇಗವನ್ನು ಹೆಚ್ಚಿಸಿ. * ನೀವು ಆರೋಗ್ಯ ಸ್ಥಿರತೆಯ ಸಮಸ್ಯೆಗಳು ಅಥವಾ ತಲೆತಿರುಗುವಿಕೆಯನ್ನು ಹೊಂದಿದ್ದರೆ ರಿವರ್ಸ್ ವಾಕಿಂಗ್ ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ
Linkup
ರಿವರ್ಸ್ ವಾಕಿಂಗ್ ಕೀಲು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್‌ಗಳಂತಹ ಸ್ನಾಯುಗಳ ಪ್ರತ್ಯೇಕ ಗುಂಪನ್ನು ತೊಡಗಿಸುತ್ತದೆ. ಸ್ಥಿರತೆ ಮತ್ತು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಯಮಿತ ರಿವರ್ಸ್ ವಾಕಿಂಗ್ ಕೆಳಗಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಾಗ ಕೆಳ ಕಾಲುಗಳಲ್ಲಿ ಸ್ನಾಯು ಸಹಿಷ್ಣುತೆಯನ್ನು ಸುಧಾರಿಸುತ್ತದೆ. 25 ವರ್ಷದ ನೇಹಾ ಖನ್ನಾ ಅಪಘಾತದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಬಳಿಕ ಹಾಸಿಗೆ ಹಿಡಿದಳು. ಆಕೆಯಂತಹ ಕ್ರಿಯಾಶೀಲ ವ್ಯಕ್ತಿ ಕುಳಿತಲ್ಲಿಯೇ ಕೂರುವುದು ದೊಡ್ಡ ಶಿಕ್ಷೆಯೇ ಸರಿ. ಹೀಗಾಗಿಯೇ ಆಕೆ ಕೆಲ ವ್ಯಾಯಾಮ ಮಾಡಲು ಬಯಸಿದ್ದಳು. ಆದರೆ, ಆಕೆಯ ಮೊಣಕಾಲಿನಲ್ಲಿನ ಅಂಗಾಂಶಗಳಿಗಾಗಿದ್ದ ಗಾಯದ ತೀವ್ರತೆಯಿಂದಾಗಿ ನಿಧಾನವಾಗಿ ಗುಣಮುಖವಾಗುತ್ತಿತ್ತು. ಆಕೆಯ ಮೊಣಕಾಲಿನ ಪ್ರೊಪ್ರಿಯೋಸೆಪ್ಷನ್ ಅನ್ನು ಸುಧಾರಿಸಲು ಪುನಶ್ಚೇತನ ವ್ಯಾಯಾಮವಾಗಿ ರಿವರ್ಸ್ ವಾಕಿಂಗ್ ಮಾಡಲು ಆಕೆಯ ವೈದ್ಯರು ಶಿಫಾರಸು ಮಾಡಿದರು. ಈ ರೀತಿಯ ನಡಿಗೆಯು ಖನ್ನಾ ಅವರಂತಹ ರೋಗಿಗಳಿಗೆ ಉಪಯುಕ್ತವಾಗಿರುತ್ತದೆ. ಏಕೆಂದರೆ, ಇದು ಪಾದಗಳು ನೆಲವನ್ನು ಸ್ಪರ್ಶಿಸುವ ಬಲ ಮತ್ತು ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅಂಗಗಳ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. 'ಇದು ದೈಹಿಕ ಚೇತರಿಕೆಗೆ ಸಹಾಯ ಮಾಡುವುದಲ್ಲದೆ, ನನ್ನ ಮಾನಸಿಕ ಚುರುಕುತನವನ್ನು ಸುಧಾರಿಸಿತು. ಏಕೆಂದರೆ, ನಿಯಮಿತವಾದ ರಿವರ್ಸ್ ವಾಕಿಂಗ್ ಏಕತಾನತೆಯ ಕ್ರಿಯೆಯಿಂದ ಹೊರಬರಲು ನನ್ನ ಮೆದುಳಿಗೆ ಸವಾಲು ಹಾಕಿತು' ಎಂದು ಖನ್ನಾ ಹೇಳುತ್ತಾರೆ. ದೇಹಕ್ಕಾಗುವ ಪ್ರಯೋಜನಗಳು ರಿವರ್ಸ್ ವಾಕಿಂಗ್ ಕೀಲು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್‌ಗಳಂತಹ ಸ್ನಾಯುಗಳ ಪ್ರತ್ಯೇಕ ಗುಂಪನ್ನು ತೊಡಗಿಸುತ್ತದೆ. ಸ್ಥಿರತೆ ಮತ್ತು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಯಮಿತ ರಿವರ್ಸ್ ವಾಕಿಂಗ್ ಕೆಳಗಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಳಿಜಾರು ಅಥವಾ ಇಳಿಮುಖವಾಗಿ ನೀವು ರಿವರ್ಸ್ ವಾಕಿಂಗ್ ಮಾಡಿದಾಗ ನಿರಂತರ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಹಲವಾರು ಸ್ನಾಯು ಗುಂಪುಗಳ ಚಲನೆಯ ವ್ಯಾಪ್ತಿಯನ್ನು ಬದಲಾಯಿಸಬಹುದು, ಪ್ಲ್ಯಾಂಟರ್ ಫ್ಯಾಸಿಟಿಸ್ ಎಂಬ ಸಾಮಾನ್ಯ ಸ್ಥಿತಿಯಿಂದ ಉಂಟಾಗುವ ನೋವಿಗೆ ಪರಿಹಾರ ನೀಡುತ್ತದೆ, ಹಿಮ್ಮಡಿ ನೋವಿಗೆ ಕಾರಣವಾಗುವ ಹಿಮ್ಮಡಿ ಮೂಳೆಯನ್ನು ಕಾಲ್ಬೆರಳುಗಳಿಗೆ ಸಂಪರ್ಕಿಸುವ ಅಂಗಾಂಶದ ಉರಿಯೂತವನ್ನು ನಿವಾರಿಸುತ್ತದೆ ಎಂದು ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಸಂಸ್ಥೆಯ ಮುಖ್ಯ ಯೋಗ ಅಧಿಕಾರಿ ಡಾ.ರಾಜೀವ್ ರಾಜೇಶ್ ಹೇಳುತ್ತಾರೆ. ಇದನ್ನೂ ಓದಿ: ವಯಸ್ಸಾಗುತ್ತಾ ಹೋದಂತೆ ಮೂಳೆಗಳನ್ನು ಬಲಿಷ್ಠವಾಗಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ... ರಿವರ್ಸ್ ವಾಕಿಂಗ್ ಮಾಡುವುದರಿಂದ ಸಾಮಾನ್ಯವಾಗಿ ನಡೆಯುವುದಕ್ಕಿಂತ ಶೇ 40 ರಷ್ಟು ಹೆಚ್ಚು ಶಕ್ತಿಯು ಖರ್ಚಾಗುತ್ತದೆ. ಆದ್ದರಿಂದ, ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹಿಮ್ಮುಖವಾಗಿ ಚಲಿಸುವುದರಿಂದ ನಿಮ್ಮ ಹೃದಯವು ವೇಗವಾಗಿ ಬಡಿಯುತ್ತದೆ. ಸವಾಲಿನ ನೆಲಗಳಲ್ಲಿ ಸತತವಾಗಿ ರಿವರ್ಸ್ ವಾಕಿಂಗ್ ಮಾಡಿದರೆ, ಇದೊಂದು ಉತ್ತಮ ಕಾರ್ಡಿಯೋ ವ್ಯಾಯಾಮವಾಗಿರುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ಬೆಂಗಳೂರಿನ ಕೊಲಂಬಿಯಾ ಪೆಸಿಫಿಕ್ ಕಮ್ಯುನಿಟೀಸ್‌ನ ಮುಖ್ಯಸ್ಥೆ ಡಾ ಕಾರ್ತಿಯಾಯಿನಿ ಮಹದೇವನ್ ಮಾತನಾಡಿ, 'ನಿಮ್ಮ ಮೊಣಕಾಲು ಮತ್ತು ಪಾದವನ್ನು ಮುಂಬದಿಯಿಂದ ಬಗ್ಗಿಸಲು ಸಹಾಯ ಮಾಡುವ ಈ ವ್ಯಾಯಾಮವು ಶಿನ್ ಸ್ನಾಯುಗಳಿಗೆ ಉತ್ತಮವಾಗಿದೆ. ನೀವು ರಿವರ್ಸ್ ವಾಕಿಂಗ್ ಮಾಡುವಾಗ, ಕಾಲ್ಬೆರಳು ನೆಲಕ್ಕೆ ತಾಗುತ್ತದೆ ಮತ್ತು ನಂತರ ಪಾದದ ಮೂಲಕ ಹಿಮ್ಮಡಿಗೆ ಭಾರ ರವಾನೆಯಾಗುತ್ತದೆ. ಇದು ಗ್ಲುಟಿಯಲ್ ಸ್ನಾಯುಗಳು ಕೆಲಸ ಮಾಡುವಾಗ ಸುಧಾರಿತ ಸಮನ್ವಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಮನಸ್ಸಿಗಾಗುವ ಪ್ರಯೋಜನಗಳು ರಿವರ್ಸ್ ವಾಕಿಂಗ್ ಮಾಡುವುದು ಹಲವಾರು ನರವೈಜ್ಞಾನಿಕ ಪ್ರಯೋಜನಗಳನ್ನು ಹೊಂದಿದೆ. ಇದು ಸರಳವಾಗಿ ಕಂಡರೂ ಕೂಡ ಅರಿವಿಗೆ ಸಂಬಂಧಿಸಿದ ಕಾರ್ಯಗಳು, ನಮ್ಮ ದೃಷ್ಟಿಗೋಚರ ಮತ್ತು ವೆಸ್ಟಿಬುಲರ್ ವ್ಯವಸ್ಥೆಯ ನಡುವಿನ ಸಮನ್ವಯ ಸಾಧಿಸುತ್ತದೆ. ದೃಷ್ಟಿಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ ಮತ್ತು ಕೈನೆಸ್ತೇಷಿಯಾದಂತಹ ಹಲವಾರು ಅರಿವಿನ ಕಾರ್ಯಗಳನ್ನು ಒಳಗೊಂಡಿರುತ್ತದೆ. ನಮ್ಮ ಮೆದುಳು ಇದೆಲ್ಲವನ್ನೂ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಕಲಿತಿದೆ. ಆದರೆ, ನಾವು ರಿವರ್ಸ್ ವಾಕಿಂಗ್ ಮಾಡಿದಾಗ, ಹೊಸ ರೀತಿಯ ಪುನಶ್ಚೇತನದೊಂದಿಗೆ ಮಿದುಳಿಗೆ ಸವಾಲೆಸೆಯುತ್ತದೆ, ಮರುನಿರ್ದೇಶನಗಳನ್ನು ನೀಡುತ್ತದೆ ಎಂದು ರಾಜೇಶ್ ಹೇಳುತ್ತಾರೆ. ಇದನ್ನೂ ಓದಿ: ಮಾನಸಿಕ, ದೈಹಿಕ ಯೋಗಕ್ಷೇಮಕ್ಕೆ ಧನಾತ್ಮಕ ಪ್ರತಿಫಲ ತರುವ ಮನಃಪೂರ್ವಕ ನಡಿಗೆ ಹೇಗಿರಬೇಕು? ಎತ್ತರ ಅಥವಾ ಅಡೆತಡೆಗಳನ್ನು ಹಾಕಿಕೊಳ್ಳುವ ಮೂಲಕ ನೀವು ಸವಾಲಿನ ಮಟ್ಟವನ್ನು ಹೆಚ್ಚಿಸುತ್ತೀರಿ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಈ ವ್ಯಾಯಾಮವು ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೊಡ್ಡದೆಂದರೆ ನ್ಯೂರೋಪ್ಲ್ಯಾಸ್ಟಿಸಿಟಿಯನ್ನು ಉತ್ತೇಜಿಸುವುದು ಅಥವಾ ಅದರ ಪ್ರೋಗ್ರಾಮಿಂಗ್ ಅನ್ನು ಪುನರ್‌ರಚಿಸುವ ನರಮಂಡಲದ ಸಾಮರ್ಥ್ಯ, ಪರಿಸರ ಪ್ರಚೋದಕಗಳಲ್ಲಿನ ಬದಲಾವಣೆಯನ್ನು ಗಮನಕ್ಕೆ ತರುತ್ತದೆ. ದೇಹವನ್ನು ರಿವರ್ಸ್ ಗೇರ್‌ನಲ್ಲಿ ಹಾಕುವ ಸಮಯ ಇದಾಗಿದೆ. ಸರಿಯಾಗಿ ರಿವರ್ಸ್ ವಾಕಿಂಗ್ ಮಾಡುವುದು ಹೇಗೆ * ತೆರೆದ ಜಾಗವನ್ನು ಆರಿಸಿಕೊಳ್ಳಿ * ನಿಮ್ಮ ಹೆಬ್ಬೆರಳಿನಿಂದ ಹಿಂದಕ್ಕೆ ತಲುಪುವ ಮೂಲಕ ನಿಧಾನವಾಗಿ ಪ್ರಾರಂಭಿಸಿ ಮತ್ತು ನಂತರ ನಿಮ್ಮ ಪಾದದ ಮೂಲಕ ನಿಮ್ಮ ಹಿಮ್ಮಡಿಯ ಕಡೆಗೆ ಚಲಿಸಿ * ಕ್ರಮೇಣ ವೇಗವನ್ನು ಅಭಿವೃದ್ಧಿಪಡಿಸಿಕೊಳ್ಳಿ. ವೇಗವನ್ನು ಹೆಚ್ಚಿಸಲು ಆತುರಪಡಬೇಡಿ. ಮೊದಲ ವಾರದಲ್ಲಿ 10 ನಿಮಿಷಗಳ ಕಾಲ ಪ್ರತಿದಿನ ಈ ರೀತಿಯಲ್ಲಿ ನಡೆಯಿರಿ ಮತ್ತು ನಂತರದ ವಾರದಲ್ಲಿ 15 ನಿಮಿಷಗಳ ಕಾಲ ಕ್ರಮೇಣ ಸಮಯ ಮತ್ತು ವೇಗವನ್ನು ಹೆಚ್ಚಿಸಿ. * ನೀವು ಆರೋಗ್ಯ ಸ್ಥಿರತೆಯ ಸಮಸ್ಯೆಗಳು ಅಥವಾ ತಲೆತಿರುಗುವಿಕೆಯನ್ನು ಹೊಂದಿದ್ದರೆ ರಿವರ್ಸ್ ವಾಕಿಂಗ್ ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ