ವಿಮಾನ ಟಿಕೆಟ್‌ ಹಣವನ್ನು ಕಂತುಗಳಲ್ಲಿ ಪಾವತಿಸಲು 'ಸ್ಪೈಸ್‌ಜೆಟ್‌' ಅವಕಾಶ

ವಿಮಾನ ಪ್ರಯಾಣಿಕರು ಇನ್ಮುಂದೆ ಇಎಂಐ ಮೂಲಕವೂ ಟಿಕೆಟ್‌ ಹಣ ಪಾವತಿಸಬಹುದು. ಸ್ಪೈಸ್‌ ಜೆಟ್‌ ವಿಮಾನಯಾನ ಕಂಪನಿಯು ಇಂತಹದೊಂದು ವಿನೂತನ ಯೋಜನೆಗೆ ಸೋಮವಾರ ಚಾಲನೆ ನೀಡಿದೆ. 3, 6 ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸಬಹುದು.

ವಿಮಾನ ಟಿಕೆಟ್‌ ಹಣವನ್ನು ಕಂತುಗಳಲ್ಲಿ ಪಾವತಿಸಲು 'ಸ್ಪೈಸ್‌ಜೆಟ್‌' ಅವಕಾಶ
Linkup
ನವದೆಹಲಿ: ವಿಮಾನ ಪ್ರಯಾಣಿಕರು ಇನ್ಮುಂದೆ ಮೂಲಕವೂ ಟಿಕೆಟ್‌ ಹಣ ಪಾವತಿಸಬಹುದು. ಸ್ಪೈಸ್‌ ಜೆಟ್‌ ವಿಮಾನಯಾನ ಕಂಪನಿಯು ಇಂತಹದೊಂದು ವಿನೂತನ ಯೋಜನೆಗೆ ಸೋಮವಾರ ಚಾಲನೆ ನೀಡಿದೆ. ವಿಮಾನ ಟಿಕೆಟ್ ದರವನ್ನು 3, ಅಥವಾ 6 ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸಲು ಸ್ಪೈಸ್‌ಜೆಟ್ ಅವಕಾಶ ನೀಡಿದೆ. ಹೊಸ ಯೋಜನೆಯಡಿ, ಗ್ರಾಹಕರು ಹೆಚ್ಚುವರಿ ಶುಲ್ಕ ಅಥವಾ ಬಡ್ಡಿ ಪಾವತಿಯ ಗೊಡವೆ ಇಲ್ಲದೆಯೇ ಟಿಕೆಟ್ ಮೊತ್ತವನ್ನು ಮೂರು ತಿಂಗಳ ಇಎಂಐ ಮೂಲಕ ಪಾವತಿ ಮಾಡಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ಪಾನ್‌ ಸಂಖ್ಯೆ, ಆಧಾರ್‌ ಸಂಖ್ಯೆ ಅಥವಾ ವಿಐಡಿ ನೀಡಬೇಕಾಗುತ್ತದೆ. ಅಲ್ಲದೆ ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್‌ (ಒಟಿಪಿ) ಮೂಲಕ ದೃಢೀಕರಿಸಬೇಕಾಗುತ್ತದೆ. ಮೊದಲ ಇಎಂಐ ಕಂತನ್ನು ಗ್ರಾಹಕರು ತಮ್ಮ ಯುಪಿಐ ಐಡಿ ನೀಡಿ ಪಾವತಿಸಬೇಕಾಗುತ್ತದೆ. ಗ್ರಾಹಕರ ಯುಪಿಐ ಐಡಿಯಿಂದ ಇಎಂಐ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಇಎಂಐ ಯೋಜನೆಯನ್ನು ಪಡೆಯಲು ಗ್ರಾಹಕರು ತಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮಾಹಿತಿ ನೀಡುವ ಅಗತ್ಯ ಇಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ವಿಮಾನಯಾನ ನಿರ್ಬಂಧ ಹಿಂಪಡೆದ ಅಮೆರಿಕ ಕೋವಿಡ್‌ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ಹಿಂಪಡೆದಿದೆ. ಯೋರೋಪ್‌ ರಾಷ್ಟ್ರಗಳು ಹಾಗೂ ಅಮೆರಿಕ ಗಡಿಗೆ ಹೊಂದಿಕೊಂಡಿರುವ ಮೆಕ್ಸಿಕೋ, ಕೆನಡಾ ಮೇಲೆ ವಿಧಿಸಿದ್ದ ನಿರ್ಬಂಧವನ್ನೂ ಸಡಿಲಗೊಳಿಸಲಾಗಿದೆ. ಈ ಮೂಲಕ ಈ ದೇಶಗಳ ಜನರು ವಿದೇಶದಲ್ಲಿರುವ ಆಪ್ತರು ಮತ್ತು ಕುಟುಂಬದವರ ಭೇಟಿಗೆ ಅನುಕೂಲವಾಗಿದೆ. ಎರಡು ಡೋಸ್‌ ಲಸಿಕೆ ಪಡೆದವರು, ಲಸಿಕೆ ಪಡೆದ ಪ್ರಮಾಣಪತ್ರದೊಂದಿಗೆ ಅಮೆರಿಕ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಕೋವಿಡ್‌ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರಕಾರ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ವಿಧಿಸಿತ್ತು.