'ವಿಜಯಾನಂದ' ಬಯೋಪಿಕ್‌ನಲ್ಲಿ ಶೈನ್‌ ಶೆಟ್ಟಿ ವಿಲನ್‌; ಪಾತ್ರದ ಬಗ್ಗೆ 'ಬಿಗ್ ಬಾಸ್' ವಿನ್ನರ್ ಹೇಳಿದ್ದೇನು?

ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ ಅವರ ಬಯೋಪಿಕ್‌ 'ವಿಜಯಾನಂದ' ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಈಗ ಶೈನ್ ಶೆಟ್ಟಿ ಕೂಡ ಎಂಟ್ರಿ ನೀಡಿದ್ದಾರೆ.

'ವಿಜಯಾನಂದ' ಬಯೋಪಿಕ್‌ನಲ್ಲಿ ಶೈನ್‌ ಶೆಟ್ಟಿ ವಿಲನ್‌; ಪಾತ್ರದ ಬಗ್ಗೆ 'ಬಿಗ್ ಬಾಸ್' ವಿನ್ನರ್ ಹೇಳಿದ್ದೇನು?
Linkup
ಉದ್ಯಮಿ ವಿಜಯ್ ಸಂಕೇಶ್ವರ ಅವರ ಬಯೋಪಿಕ್ '' ಚಿತ್ರಕ್ಕೆ ಭಾನುವಾರ (ಅ.24) ಅದ್ದೂರಿಯಾಗಿ ಮುಹೂರ್ತ ನೆರವೇರಿದೆ. ಹುಬ್ಬಳ್ಳಿಯ ವಿಆರ್‌ಎಲ್‌ ಕೇಂದ್ರ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಇದೀಗ ಸಿನಿಮಾ ತಂಡದಿಂದ ಒಂದೊಂದೇ ಸುದ್ದಿಗಳು ಹೊರಬೀಳುತ್ತಿವೆ. ಇದೀಗ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್‌ ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ. ವಿಶೇಷವೆಂದರೆ, ಅವರಿಲ್ಲಿ ಖಳ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಹೇಳಿಕೊಂಡಿದ್ದು ಹೀಗೆ. ಇನ್ನೊಬ್ಬರ ಕಾಲು ಎಳೆಯುವವನ ಪಾತ್ರ'ಒಬ್ಬ ವ್ಯಕ್ತಿ ಅವನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರೆ, ಬರೀ ಅವನ ಕೆಲಸದ ಬಗ್ಗೆ ಮಾತ್ರ ಗಮನ ನೀಡಬೇಕು. ಆಗ ಮಾತ್ರ ಅವರು ವಿಜಯ್ ಸಂಕೇಶ್ವರ ಅವರ ಥರ ಹೀರೋ ಆಗ್ತಾರೆ. ಅದೇ ಒಬ್ಬ ವ್ಯಕ್ತಿ ಅವನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಬೇರೆಯವರ ಕಾಲು ಎಳೆಯೋಕೆ ಹೋದರೆ, ನನ್ನ ಥರ ವಿಲನ್ ಆಗ್ತಾರೆ. ಇದು 'ವಿಜಯಾನಂದ' ಸಿನಿಮಾದಲ್ಲಿನ ನನ್ನ ಪಾತ್ರವಾಗಿದೆ' ಎಂದು ನಟ ಹೇಳಿಕೊಂಡರು. ಈ ಬಯೋಪಿಕ್‌ನಲ್ಲಿ ನಾನಿರುವುದಕ್ಕೆ ಹೆಮ್ಮೆ ಇದೆ'ಕನ್ನಡ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿರುವ ವಿಆರ್‌ಎಲ್‌ ಫಿಲ್ಮ್‌ ಪ್ರೊಡಕ್ಷನ್ಸ್‌ನಿಂದ ಶುರುವಾಗುತ್ತಿರುವ 'ವಿಜಯಾನಂದ' ಸಿನಿಮಾದಲ್ಲಿ ನಾನು ಕೂಡ ಒಂದು ಸಣ್ಣ ಕೊಡುಗೆ ನೀಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ. ವಿಜಯ್ ಸಂಕೇಶ್ವರ ಅವರನ್ನು ನಾನು ಮೊದಲು ನೋಡಿದಾಗ, ನಾನಿನ್ನೂ ಆಗ 10ನೇ ಕ್ಲಾಸ್ ಓದ್ತಾ ಇದ್ದೆ. ಅಂದು ಅವರ ಕನ್ನಡ ನಾಡು ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾಗಿ ನಮ್ಮ ತಂದೆ ಕೆಲಸ ಮಾಡಿದ್ದರು. ಆಗ ಅವರನ್ನು ಮೊದಲ ಬಾರಿಗೆ ನೋಡಿದ್ದೇನೆ. ಇಂದು ಅವರ ಬಯೋಪಿಕ್‌ನ ಭಾಗವಾಗಿದ್ದಕ್ಕೆ ತುಂಬ ಹೆಮ್ಮೆ ಇದೆ' ಎಂದು ಶೈನ್ ಹೇಳುತ್ತಾರೆ. 'ವಿಜಯಾನಂದ' ಸಿನಿಮಾದ ಹೀರೋ ನಿಹಾಲ್‌ ಅವರು ಎರಡು ವರ್ಷಗಳ ಹಿಂದೆ ನನ್ನ ಗಲ್ಲಿ ಕಿಚನ್‌ನಲ್ಲಿ ಇಡ್ಲಿ ತಿನ್ನುತ್ತಿದ್ದರು. ನನ್ನ ಬೆಳವಣಿಗೆಯಲ್ಲಿ ಅವರ 40 ರೂ. ಕೂಡ ಇದೆ. ಅಂದಿನ ನಮ್ಮ ಜರ್ನಿ ಇಲ್ಲಿಗೆ ಬಂದು ನಿಂತಿದೆ. ಚಿತ್ರದ ನಿರ್ದೇಶಕಿ ರಿಷಿಕಾ ಹಾಗೂ ನಿಹಾಲ್‌ ಅವರಿಗೂ ಒಳ್ಳೆಯದಾಗಲಿ' ಎಂದು ಶೈನ್ ಹಾರೈಸುತ್ತಾರೆ. ಈ ಹಿಂದೆ 'ಟ್ರಂಕ್' ಸಿನಿಮಾ ಮಾಡಿದ್ದ ರಿಷಿಕಾ ಶರ್ಮಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಆನಂದ ಸಂಕೇಶ್ವರ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಸಂಕೇಶ್ವರ ಅವರ ಪಾತ್ರವನ್ನು ನಿಹಾಲ್‌ ಮಾಡುತ್ತಿದ್ದು, ಅವರ ಪತ್ನಿಯಾಗಿ ಸಿರಿ ಪ್ರಹ್ಲಾದ್ ಕಾಣಿಸಿಕೊಳ್ಳಲಿದ್ದಾರೆ. ಆನಂದ ಸಂಕೇಶ್ವರ ಮತ್ತು ಅವರ ಪತ್ನಿ ವಾಣಿ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಗೋಪಿ ಸುಂದರ್ ಅವರು 'ವಿಜಯಾನಂದ' ಬಯೋಪಿಕ್‌ಗೆ ಸಂಗೀತ ನೀಡುತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡುತ್ತಿದ್ದು, 'ಕ್ರೇಜಿ ಸ್ಟಾರ್' ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸಂಕೇಶ್ವರ ಅವರ ತಂದೆ-ತಾಯಿ ಪಾತ್ರಗಳಲ್ಲಿ ಅನಂತ್ ನಾಗ್ ಮತ್ತು ವಿನಯಾ ಪ್ರಸಾದ್ ನಟಿಸಲಿದ್ದಾರೆ.