'ಲೋಹಿತ್‌' ಅನ್ನೋ ಹೆಸರನ್ನು 'ಪುನೀತ್' ಎಂದು ಬದಲಿಸಿದ್ದಕ್ಕೆ ಇತ್ತು ಬಲವಾದ ಕಾರಣ!

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್‌ ಅವರನ್ನು ಎಲ್ಲರೂ 'ಅಪ್ಪು' ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಆದರೆ, ಪುನೀತ್ ಮೂಲ ಹೆಸರು ಲೋಹಿತ್. ಆದರೆ, ಆ ಹೆಸರನ್ನೇಕೆ ಬದಲಾಯಿಸಲಾಯಿತು? ಇಲ್ಲಿದೆ ಕಾರಣ, ಮಂದೆ ಓದಿ.

'ಲೋಹಿತ್‌' ಅನ್ನೋ ಹೆಸರನ್ನು 'ಪುನೀತ್' ಎಂದು ಬದಲಿಸಿದ್ದಕ್ಕೆ ಇತ್ತು ಬಲವಾದ ಕಾರಣ!
Linkup
'ಪವರ್ ಸ್ಟಾರ್' ಅವರು 'ಸೂಪರ್ ಸ್ಟಾರ್' ನಟನ ಪುತ್ರ. ಹುಟ್ಟಿನಿಂದಲೇ ಜನಪ್ರಿಯೆತೆಯನ್ನು ಪಡೆದುಕೊಂಡ, ಕನ್ನಡದ ಮೊದಲ ಸ್ಟಾರ್ ಕಿಡ್ ಎಂದರೆ ತಪ್ಪಾಗಲಾರದು. ಬಾಲನಟನಾಗಿ ಫೇಮಸ್ ಆಗಿದ್ದ ಅಪ್ಪು ಮೂಲ ಹೆಸರು ಲೋಹಿತ್‌. ಅವರು ಬಾಲ ನಟನಾಗಿ ಕಾಣಿಸಿಕೊಂಡ ಸಿನಿಮಾಗಳ ಟೈಟಲ್ ಕಾರ್ಡ್‌ನಲ್ಲಿ ಇದೇ ಹೆಸರು ಇತ್ತು. ಆದರೆ, 'ಅಪ್ಪು' ಸಿನಿಮಾ ಬರುವ ವೇಳೆಗಾಗಲೇ ಅವರ ಹೆಸರು ಪುನೀತ್ ಎಂದು ಬದಲಾಗಿತ್ತು. ಅಷ್ಟಕ್ಕೂ ಈ ಹೆಸರು ಬದಲಾವಣೆಗೆ ಕಾರಣವೇನು? ಲೋಹಿತ್ ಎನ್ನುವ ಹೆಸರು ಇಡಲು ಪ್ರೇರಣೆ ಆಗಿದ್ದು 'ಸತ್ಯ ಹರಿಶ್ಚಂದ್ರ' ಸಿನಿಮಾ. ಅದರಲ್ಲಿ ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ. ಅದೇ ಹೆಸರನ್ನೇ ನಂತರ ಲೋಹಿತ್ ಎಂದು ಅಪ್ಪುಗೆ ಇಟ್ಟಿದ್ದರು. ಈ ಬಗ್ಗೆ ಡಾ. ರಾಜ್ ಕುಟುಂಬದ ಸಂಬಂಧಿ, ನಟ, ಶಾಸಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. 'ಒಮ್ಮೆ ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬಹಳ ಬೇಕಾದ ಹಿರಿಯರೊಬ್ಬರು, 'ಅದೇನೋ ಆ ಲೋಹಿತ್ ಅನ್ನೋದು ಅಲ್ಪಾಯುಷಿ ಇರುವಂತಹ ಹೆಸರು. ಅದರ ಬದಲಾಗಿ ಪುನೀತ್ ಎಂದು ಬದಲಿಸಿ. ಹೀಗೆ ಬದಲಿಸುವುದರಿಂದ, ಅವರು ಚಿತ್ರರಂಗಕ್ಕೆ ಬಂದಾಗ ಬಹಳ ಒಳ್ಳೆಯದಾಗುತ್ತದೆ' ಎಂದಿದ್ದರು. ಆಗ ಲೋಹಿತ್ ಅನ್ನೋ ಹೆಸರನ್ನು ಬದಲಿಸಿದ್ದರು. 'ಅಪ್ಪು' ಚಿತ್ರ ಬಂದಾಗ ಲೋಹಿತ್ ಇದ್ದಿದ್ದನ್ನು ಪುನೀತ್ ರಾಜ್‌ಕುಮಾರ್ ಆಗಿ ಪೂರ್ಣಪ್ರಮಾಣದಲ್ಲಿ ಬದಲಿಸಿದರು ಎಂದು ನಾನು ಕೇಳಿದ್ದೇನೆ. ಅವತ್ತಿಂದ ಇವತ್ತಿನವರೆಗೆ ಪುನೀತನಾಗಿ, ಸಾಧಕನಾಗಿ ಅಪ್ಪು ಇದ್ದ' ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಅಕಾಲಿಕ ಮರಣಕ್ಕೀಡಾದ ಅಪ್ಪುದೊಡ್ಮನೆಯ ಮುದ್ದಿನ ಅಪ್ಪು ಬಾಲ್ಯದಿಂದಲೇ ಸ್ಟಾರ್ ಆಗಿ ಬೆಳೆದವರು. ಬಾಲ ನಟನಾಗಿ ಮಿಂಚಿದವರು. 10ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದು, ಸಾಧನೆ ಮಾಡಿದವರು. ಬಾಲ್ಯ ಕಳೆದ ಮೇಲೆ ಸಿನಿಮಾಗಳ ತೆರೆಹಿಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ನಂತರ 'ಅಪ್ಪು' ಸಿನಿಮಾದಿಂದ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಅಲ್ಲಿಂದ ಪುನೀತ್ ಹಿಂತಿರುಗಿ ನೋಡಿದ್ದೇ ಇಲ್ಲ! ಕನ್ನಡ ಚಿತ್ರರಂಗದ ಮಟ್ಟಿಗೆ ಹೆಚ್ಚು ಸಕ್ಸಸ್ ರೇಟ್ ಹೊಂದಿರುವ ಹೀರೋಗಳಲ್ಲಿ ಪುನೀತ್ ಹೆಸರು ಮುಂಚೂಣಿಯಲ್ಲಿತ್ತು. ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದು ಹೊಸಬರಿಗೆ ಅಪ್ಪು ಪ್ರೋತ್ಸಾಹ ಸಿಕ್ಕಿತ್ತು. ಅದು ದೊಡ್ಡಮಟ್ಟಕ್ಕೆ ತಿರುಗುವ ವೇಳೆಗೆ ಅಪ್ಪು ನಮ್ಮಿಂದ ದೂರವಾಗಿದ್ದು ಬೇಸರದ ಸಂಗತಿ! ಇಂದು ನಮ್ಮೊಂದಿಗೆ ಅಪ್ಪು ಇಲ್ಲದೇ ಇದ್ದರೂ, ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.