ರಣ್‌ವೀರ್ ಸಿಂಗ್ ಜೊತೆ ಸಿನಿಮಾ: ನಿರ್ದೇಶಕ ಶಂಕರ್‌ಗೆ ಶುರು ಸಂಕಷ್ಟ!

ನಿರ್ದೇಶಕ ಶಂಕರ್‌ಗೆ ತಮಿಳಿನ 'ಅನ್ನಿಯನ್' ನಿರ್ಮಾಪಕ ವಿ.ರವಿಚಂದ್ರನ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

ರಣ್‌ವೀರ್ ಸಿಂಗ್ ಜೊತೆ ಸಿನಿಮಾ: ನಿರ್ದೇಶಕ ಶಂಕರ್‌ಗೆ ಶುರು ಸಂಕಷ್ಟ!
Linkup
2005ರಲ್ಲಿ ತಮಿಳಿನಲ್ಲಿ ನಿರ್ದೇಶಿಸಿದ್ದ '' ಚಿತ್ರದ ಹಿಂದಿ ರೀಮೇಕ್‌ನಲ್ಲಿ ಕಾಣಿಸಿಕೊಳ್ಳಲು ಬಾಲಿವುಡ್ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಿಂದಿಯ ರೀಮೇಕ್‌ಗೆ ಶಂಕರ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದ ಘೋಷಣೆ ಮೊನ್ನೆ ಮೊನ್ನೆಯಷ್ಟೇ ಆಗಿತ್ತು. ಇದೀಗ ಇದೇ ಚಿತ್ರಕ್ಕೆ ವಿಘ್ನ ಎದುರಾಗಿದೆ. ಬಾಲಿವುಡ್ ನಟ ರಣ್‌ವೀರ್ ಸಿಂಗ್ ಹಾಗೂ ನಿರ್ದೇಶಕ ಶಂಕರ್ ಚರ್ಚೆ ಮಾಡುತ್ತಿರುವ ಫೋಟೋಗಳನ್ನು ಪರಸ್ಪರ ಹಂಚಿಕೊಂಡು 'ಅನ್ನಿಯನ್' ರೀಮೇಕ್ ಬಗ್ಗೆ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಇದರಿಂದ ಶಂಕರ್‌ಗೆ ಹೊಸ ಸಂಕಷ್ಟ ಶುರುವಾಗಿದೆ. ನಿರ್ದೇಶಕ ಶಂಕರ್‌ಗೆ ತಮಿಳಿನ 'ಅನ್ನಿಯನ್' ನಿರ್ಮಾಪಕ ವಿ.ರವಿಚಂದ್ರನ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ರೀಮೇಕ್ ಮಾಡಲು ಹಕ್ಕಿಲ್ಲ! ನಿರ್ದೇಶಕ ಶಂಕರ್‌ಗೆ ತಮಿಳಿನ 'ಅನ್ನಿಯನ್' ಚಿತ್ರದ ನಿರ್ಮಾಪಕ ವಿ.ರವಿಚಂದ್ರನ್ ಲೀಗಲ್ ನೋಟೀಸ್ ಹಾಗೂ ಒಂದು ಪತ್ರವನ್ನು ಕಳುಹಿಸಿದ್ದಾರೆ. ''ಹಿಂದಿ ರೀಮೇಕ್ ಮಾಡಲು ನಿಮಗೆ ಯಾವುದೇ ಹಕ್ಕಿಲ್ಲ. ಇದು ಕಾಪಿರೈಟ್ ಉಲ್ಲಂಘನೆ ಆಗುತ್ತದೆ. ನಾನು ತಮಿಳು ರೈಟರ್ ಸುಜಾತರವರಿಂದ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡಿದ್ದೇನೆ. ಹೀಗಾಗಿ ಹಿಂದಿಯಲ್ಲಿ ರೀಮೇಕ್ ಮಾಡುವುದು ಕಾನೂನುಬಾಹಿರ'' ಎಂದು ಲೀಗಲ್ ನೋಟೀಸ್‌ನಲ್ಲಿ ಆಸ್ಕರ್ ಫಿಲ್ಮ್ಸ್‌ನ ವಿ.ರವಿಚಂದ್ರನ್ ಉಲ್ಲೇಖಿಸಿದ್ದಾರೆ. ''ಕಾಪಿರೈಟ್ ನನ್ನ ಹೆಸರಿನಲ್ಲಿರುವುದರಿಂದ ಕೂಡಲೆ ನೀವು ಈ ಪ್ರಾಜೆಕ್ಟ್ ನಿಲ್ಲಿಸಿ'' ಎಂದು ಶಂಕರ್‌ಗೆ ವಿ.ರವಿಚಂದ್ರನ್ ಪತ್ರದ ಮುಖೇನ ತಿಳಿಸಿದ್ದಾರೆ. ಹಿಂದಿ ರೀಮೇಕ್‌ಗೆ ಪೆನ್ ಸ್ಟುಡಿಯೋಸ್ ಬಂಡವಾಳ ಶಂಕರ್ ಹಾಗೂ ರಣ್‌ವೀರ್ ಸಿಂಗ್ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ 'ಅನ್ನಿಯನ್' ಚಿತ್ರದ ಹಿಂದಿ ರೀಮೇಕ್‌ಗೆ ಪೆನ್ ಸ್ಟುಡಿಯೋಸ್ ಬಂಡವಾಳ ಹಾಕಲಿದೆ. ಅಂದ್ಹಾಗೆ, 'ಅನ್ನಿಯನ್' ಚಿತ್ರ ಸೈಕೊಲಾಜಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಅಂಬಿ, ರೆಮೊ, ಅನ್ನಿಯನ್ ಎಂಬ ಮೂರು ವಿಭಿನ್ನ ಶೇಡ್‌ಗಳಲ್ಲಿ ವಿಕ್ರಂ ಕಾಣಿಸಿಕೊಂಡಿದ್ದರು. ಇದೀಗ ಇದೇ ಪಾತ್ರವನ್ನು ನಿರ್ವಹಿಸಲು ರಣ್‌ವೀರ್ ಸಿಂಗ್ ಸಜ್ಜಾಗಿದ್ದಾರೆ.