ಯೂಟ್ಯೂಬ್‌ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಗಳಿಸುತ್ತಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಯೂಟ್ಯೂಬ್‌ನಲ್ಲಿ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದು ಅವರೇ ಖುದ್ದು ತಿಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ತಮ್ಮ ಉಪನ್ಯಾಸಗಳು ಜನಪ್ರಿಯವಾಗಿರುವುದರಿಂದ ಹಣ ಸಿಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೂಟ್ಯೂಬ್‌ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಗಳಿಸುತ್ತಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ
Linkup
ಚಂಡೀಗಢ: ಯೂಟ್ಯೂಬ್‌ನಲ್ಲಿ ತಮ್ಮ ಉಪನ್ಯಾಸಗಳು ಜನಪ್ರಿಯವಾಗಿರುವುದರಿಂದ ಕೇಂದ್ರ ಸಚಿವ ಅವರು ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಈ ವಿಷಯವನ್ನು ಖುದ್ದು ಗಡ್ಕರಿ ಅವರೇ ಹಂಚಿಕೊಂಡಿದ್ದಾರೆ. ಹರಿಯಾಣದಲ್ಲಿ ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ''ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಇದ್ದುಕೊಂಡು ಅಡುಗೆ ಮಾಡಲು ಆರಂಭಿಸಿದೆ. ಜತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆನ್‌ಲೈನ್‌ ಉಪನ್ಯಾಸ ನೀಡುತ್ತಿದ್ದೆ. ಇವುಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದೆ. ಅವು ಜನಪ್ರಿಯಗೊಂಡ ಕಾರಣ ಮಾಸಿಕ 4 ಲಕ್ಷ ರೂ. ಗಳಿಸುತ್ತಿದ್ದೇನೆ,'' ಎಂದು ತಿಳಿಸಿದರು. ಕಾರಿನಲ್ಲಿ ಹೈಸ್ಪೀಡ್‌ ಡ್ರೈವ್‌: ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಎಕ್ಸ್‌ಪ್ರೆಸ್‌ವೇನಲ್ಲಿ ಸಚಿವ ನಿತಿನ್‌ ಗಡ್ಕರಿ ಅವರು ಕಾರೊಂದರಲ್ಲಿ ಕುಳಿತುಕೊಂಡು ಗಂಟೆಗೆ 120 ಕಿ.ಮೀ. ಗರಿಷ್ಠ ವೇಗವಾಗಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ''ಸ್ಪೀಡ್‌ ಟೆಸ್ಟ್‌ ಯಶಸ್ವಿಯಾಗಿದೆ,'' ಎಂದು ಅವರು ಬಳಿಕ ಹರ್ಷ ವ್ಯಕ್ತಪಡಿಸಿದರು. ಗಣ್ಯರುಗಳಿಂದ ಹಣ ಗಳಿಕೆ! ವಿಡಿಯೋಗಳ ಮೂಲಕ ರಾಜಕಾರಣಿಗಳು ಹಾಗೂ ಇತರೆ ಸಿನಿಮಾ, ಕ್ರಿಕೆಟ್‌ನ ಸ್ಟಾರ್‌ಗಳು ಕೂಡ ಹಣ ಗಳಿಸುತ್ತಿದ್ದಾರೆ. ಭಾರತದಲ್ಲಿರುವ ಜನ ಸಂಖ್ಯೆಯೇ ಅವರಿಗೆ ವರದಾನವಾಗಿದೆ. ರಾಜಕಾರಣಿಗಳಿಂಗಿಂತ ಸಿನಿಮಾ ಸ್ಟಾರ್‌ಗಳು, ಕ್ರಿಕೆಟ್‌ ತಾರೆಯರ ವಿಡಿಯೋಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡುತ್ತಿದ್ದಾರೆ. ಹೀಗೆ ವೀವ್ಸ್‌ ಹಾಗೂ ಸಬ್‌ಸ್ಕ್ರೈಬರ್‌ ಹೆಚ್ಚಾದಂತೆ ಹಣ ಗಳಿಕೆ ಕೂಡ ಹೆಚ್ಚಾಗುತ್ತದೆ. ಮಾನಿಟೈಸ್‌ ಮಾಡಿಕೊಳ್ಳುವ ಮೂಲಕ ಆದಾಯ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್‌ ಕೂಡ ಒಂದು ಬ್ಯುಸಿನೆಸ್‌ ಆಗುತ್ತಿದೆ. ತಿಂಗಳಿಗೆ ಭಾರೀ ಮೊತ್ತವನ್ನು ಅನೇಕ ಯುವ ಪೀಳಿಗೆ ಪಡೆಯುತ್ತಿದೆ. ಯೂಟ್ಯೂಬ್‌ನಲ್ಲಿ ವಿಶೇಷವಾದ ವಿಡಿಯೋಗಳಿಗೆ, ಕಂಟೆಂಟ್‌ಗಳಿಗೆ ಭಾರೀ ಮಾನ್ಯತೆ ಸಿಗುತ್ತಿದೆ.