ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು: ಕೋರ್ಟ್‌ನಲ್ಲಿ ಡೊಮಿನಿಕಾ ಸರ್ಕಾರ ಹೇಳಿಕೆ

ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಉದ್ಯಮಿ ಮೆಹುಲ್ ಚೋಕ್ಸಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಬುಧವಾರ ಹಾಜರುಪಡಿಸಲಾಯಿತು. ಆತನನ್ನು ಭಾರತಕ್ಕೆ ಗಡಿಪಾರು ಮಾಡಬೇಕಿದೆ ಎಂದು ಅಲ್ಲಿನ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು: ಕೋರ್ಟ್‌ನಲ್ಲಿ ಡೊಮಿನಿಕಾ ಸರ್ಕಾರ ಹೇಳಿಕೆ
Linkup
ಹೊಸದಿಲ್ಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಮುಂದೆ ಬುಧವಾರ ಹಾಜರುಪಡಿಸಲಾಯಿತು. ಕೆರಿಬಿಯನ್ ದ್ವೀಪ ರಾಷ್ಟ್ರವಾಗಿರುವ ಡೊಮಿನಿಕಾಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ವಿಚಾರಣೆ ಎದುರಿಸಬೇಕೆಂಬ ಹೈಕೋರ್ಟ್ ಒಂದರ ಆದೇಶದ ಅನ್ವಯ ಚೋಕ್ಸಿಯನ್ನು ಹಾಜರುಪಡಿಸಲಾಯಿತು. ನೀಲಿ ಟಿ-ಷರ್ಟ್ ಮತ್ತು ಕಪ್ಪು ಶಾರ್ಟ್‌ ಧರಿಸಿದ್ದ ಚೋಕ್ಸಿಯನ್ನು ಗಾಲಿಕುರ್ಚಿಯಲ್ಲಿ ಕರೆತರಲಾಯಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 14,000 ಕೋಟಿ ರೂ ವಂಚನೆ ಆರೋಪ ಪ್ರಕರಣದಲ್ಲಿ ಭಾಗಿಯಾಗಿರುವ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕಿದೆ ಎಂದು ಸರ್ಕಾರ ಕೋರ್ಟ್‌ನಲ್ಲಿ ವಾದಿಸಿದೆ. ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬಾರದು ಮತ್ತು ವಿಚಾರಣೆಗೆ ಒಳಪಡಿಸಬಾರದು. ಸಾಧ್ಯವಾದಷ್ಟು ಬೇಗನೆ ಆತನ ಗಡಿಪಾರಿಗಾಗಿ ಒತ್ತಾಯಿಸಲಿದೆ. ಆತ ಈಗಲೂ ಭಾರತೀಯ ಪ್ರಜೆಯೇ ಆಗಿದ್ದಾನೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಚೋಕ್ಸಿಯನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಕ್ಕೆ ಕರೆತರಲಾಗಿದೆ ಎಂದು ಆತನ ವಕೀಲರು ವಾದಿಸಿದ್ದಾರೆ. ಈ ವಾದವನ್ನು ಕೋರ್ಟ್ ಒಪ್ಪಿಕೊಂಡರೆ, ಚೋಕ್ಸಿಯನ್ನು ಮರಳಿ ಆಂಟಿಗುವಾಕ್ಕೆ ಒಪ್ಪಿಸಲಾಗುತ್ತದೆ. ಆಂಟಿಗುವಾದ ಪೌರತ್ವ ಪಡೆದಿರುವ ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಹಾದಿ ಸುಗಮವಾಗುತ್ತದೆ. ಚೋಕ್ಸಿ ಜತೆಗೆ ಇದ್ದ ನಿಗೂಢ ಮಹಿಳೆಯ ಕುರಿತು ಮಾತನಾಡಿರುವ ಆತನ ಪತ್ನಿ ಪ್ರೀತಿ, ಆ ಮಹಿಳೆ ಚೋಕ್ಸಿಗೆ ಪರಿಚಿತಳು ಹಾಗೂ ಆತನೊಂದಿಗೆ ವಾಯು ವಿಹಾರಕ್ಕೆ ತೆರಳುತ್ತಿದ್ದಳು. ಆಕೆ ಚೋಕ್ಸಿಯ ಪ್ರೇಯಸಿ ಅಲ್ಲ ಎಂದು ಹೇಳಿದ್ದಾರೆ. ಆ ಮಹಿಳೆಯನ್ನು ಭೇಟಿ ಮಾಡಲು ತೆರಳಿದ್ದ ಸಮಯದಲ್ಲಿ ಭಾರತ ಹಾಗೂ ಪ್ರಜೆಗಳಂತೆ ಕಾಣಿಸುವ ಜನರು ಚೋಕ್ಸಿಯನ್ನು ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.