ಮುಂದಿನ ಟಾರ್ಗೆಟ್ ನೀವೇ, ಉಳಿಯಬೇಕೆಂದರೆ ನಮ್ಮ ಜತೆ ಕೈಜೋಡಿಸಿ: ಮಾಧ್ಯಮಗಳಿಗೆ ಟಿಕಾಯತ್ ಸಲಹೆ

ಕೇಂದ್ರ ಸರ್ಕಾರದ ಮುಂದಿನ ಗುರಿ ನೀವೇ ಆಗಿರುತ್ತೀರಿ. ನಿಮ್ಮನ್ನು ಉಳಿಸಿಕೊಳ್ಳಬೇಕೆಂದರೆ ಈಗ ನಮ್ಮ ಜತೆ ಕೈ ಜೋಡಿಸಿ ಎಂದು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮುಂದಿನ ಟಾರ್ಗೆಟ್ ನೀವೇ, ಉಳಿಯಬೇಕೆಂದರೆ ನಮ್ಮ ಜತೆ ಕೈಜೋಡಿಸಿ: ಮಾಧ್ಯಮಗಳಿಗೆ ಟಿಕಾಯತ್ ಸಲಹೆ
Linkup
ರಾಯ್ಪುರ: ಕೇಂದ್ರ ಸರ್ಕಾರದ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳೇ ಆಗಿರಬಹುದು ಎಂದಿರುವ ರೈತ ನಾಯಕ , ತಮ್ಮನ್ನು ಉಳಿಸಿಕೊಳ್ಳಲು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಈ ಸುದೀರ್ಘ ಪ್ರತಿಭಟನೆಯೊಂದಿಗೆ ಕೈಜೋಡಿಸುವಂತೆ ಮಾಧ್ಯಮಗಳ ಮಾಲೀಕರಿಗೆ ಸಲಹೆ ನೀಡಿದ್ದಾರೆ. 'ಪ್ರತಿಯೊಬ್ಬರೂ ನಮ್ಮ ಜತೆಗೂಡಬೇಕು. ಮುಂದಿನ ಟಾರ್ಗೆಟ್ ಮಾಧ್ಯಮ ಸಂಸ್ಥೆಗಳಾಗಿರಲಿವೆ. ನಿಮ್ಮನ್ನು ನೀವು ಉಳಿಸಿಕೊಳ್ಳಬೇಕೆಂದರೆ ನಮ್ಮನ್ನು ಸೇರಿಕೊಳ್ಳಿ. ಇಲ್ಲದಿದ್ದರೆ ನೀವು ಅನುಭವಿಸಬೇಕಾಗುತ್ತದೆ' ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ಟಿಕಾಯತ್ ಛತ್ತೀಸಗಡದ ರಾಯ್ಪುರದಲ್ಲಿ ಹೇಳಿದ್ದಾರೆ. 'ನಾವು ಛತ್ತೀಸಗಡದ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತೇವೆ. ಅತಿ ದೊಡ್ಡ ಸಮಸ್ಯೆ ಎಂದರೆ ದೇಶದಲ್ಲಿನ ಎಂಎಸ್‌ಪಿ. ನಾವು ಈ ವಿಚಾರವನ್ನು ಎತ್ತಲಿದ್ದೇವೆ. ರಾಜ್ಯದ ತರಕಾರಿ ಬೆಳೆಗಾರರಿಗೆ ಯಾವ ರೀತಿ ಅನುಕೂಲಗಳನ್ನು ಕಲ್ಪಿಸಬಹುದು ಮತ್ತು ಅವರಿಗೆ ಯಾವ ರೀತಿಯ ನೀತಿಗಳನ್ನು ರೂಪಿಸಬೇಕು ಎಂಬ ಬಗ್ಗೆ ನಾವು ಮಾತನಾಡಲಿದ್ದೇವೆ' ಎಂದಿದ್ದಾರೆ. 'ಈ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದರಾಚೆಗೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾಯ್ದೆಯನ್ನು ಜಾರಿಗೆ ತರುವಂತೆ ನಾವು ಒತ್ತಾಯಿಸುತ್ತಿದ್ದೇವೆ' ಎಂದು ಸಂಘಟನೆ ಹೇಳಿದೆ. ಸೋಮವಾರ ನಡೆದ ಸಫಲತೆಯು ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯು ದೇಶಾದ್ಯಂತ ಇರುವುದನ್ನು ಸಾಬೀತುಪಡಿಸಿದೆ. ಬಂದ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರು ಇದು ರೈತರ ಒಳಿತಾಗಿ ಎಂದು ಮರೆತುಬಿಡಬೇಕು ಎಂಬುದಾಗಿ ರಾಕೇಶ್ ಟಿಕಾಯತ್ ಹೇಳಿದ್ದರು.