ಮಕ್ಕಳಲ್ಲಿ ಹೆಚ್ಚುತ್ತಿದೆ ಸ್ಥೂಲಕಾಯ; ಬಾಲ್ಯದಲ್ಲೇ ಬೊಜ್ಜು ಎಷ್ಟು ಅಪಾಯಕಾರಿ ಗೊತ್ತೇ?

ಬಾಲ್ಯದಲ್ಲಿ ಮಕ್ಕಳಿಗೆ ಹಸಿವು ಹಾಗೂ ಬಾಯಿ ಚಪಲ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಮಕ್ಕಳು ಪದೇ ಪದೇ ಹಸಿವು ಎನ್ನುವ ಮಾತನ್ನು ಹೇಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ಲಘುವಾದ ಆಹಾರವನ್ನು ಅಥವಾ ಜಂಕ್ ಆಹಾರವನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಬಾಲ್ಯದಲ್ಲಿ ಮಕ್ಕಳಿಗೆ ಹಸಿವು ಹಾಗೂ ಬಾಯಿ ಚಪಲ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಮಕ್ಕಳು ಪದೇ ಪದೇ ಹಸಿವು ಎನ್ನುವ ಮಾತನ್ನು ಹೇಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ಲಘುವಾದ ಆಹಾರವನ್ನು ಅಥವಾ ಜಂಕ್ ಆಹಾರವನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಇದರ ಪರಿಣಾಮ ಕ್ರಮೇಣ ಮಕ್ಕಳು ಬೇಕರಿ ತಿಂಡಿ ಅಥವಾ ಕುರುಕಲು ತಿಂಡಿಯನ್ನು ಸೇವಿಸುವುದನ್ನು ಇಷ್ಟ ಪಡಲು ಆರಂಭಿಸುತ್ತಾರೆ.
ಇಂತಹ ಆಹಾರಗಳನ್ನು ದಿನವಿಡೀ ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಸ್ಥೂಲಕಾಯ ಕಾಣಿಸಿಕೊಳ್ಳುತ್ತದೆ. ಮಕ್ಕಳು ಹಸಿವು ಎಂದಾಗ ಅವರಿಗೆ ಆದಷ್ಟು ಹಣ್ಣು, ಹಣ್ಣುಗಳ ಸಲಾಡ್, ಒಣ ಹಣ್ಣುಗಳಂತಹ ತಿನಿಸನ್ನು ನೀಡುವುದು ಉತ್ತಮ.
ಬಾಲ್ಯದ ಸ್ಥೂಲಕಾಯತೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸ್ಥೂಲಕಾಯದ ಮಕ್ಕಳು ಟೈಪ್-2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಪಿತ್ತಕೋಶದ ಕಾಯಿಲೆ, ಉಸಿರಾಟದ ತೊಂದರೆಗಳು, ನಡವಳಿಕೆಯ ಸಮಸ್ಯೆಗಳು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಎದುರಿಸಬಹುದು.
ಐವರು ಮಕ್ಕಳ ಪೈಕಿ ಒಂದು ಸ್ಥೂಲಕಾಯದಿಂದ ಬಳಲುತ್ತಿದ್ದಾರೆಂದು ವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಬಾಲ್ಯದಲ್ಲೇ ಸ್ಥೂಲಕಾಯದಿಂದ ಬಳಲುವ ಮಕ್ಕಳು, ವಯಸ್ಕರಾದ ಬಳಿಕ ಜೀವನಶೈಲಿ ರೋಗಗಳಿಗೆ ತುತ್ತಾಗುತ್ತಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಕಾಡುವ ಅಡೆನಾಯ್ಡಿಟಿಸ್ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಮಗು ತುಂಬಾ ಆಲಸಿಯಾಗಿದ್ದರೆ, ಕಡೆಗಣಿಸದಿರಿ...!
ಆಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸೆಯ ಪ್ರಮುಖ ಮತ್ತು ಹಿರಿಯ ಸಲಹೆಗಾರರಾದ ಡಾ ಮಂಜಿರಿ ಸೋಮಶೇಖರ್ ಅವರು ಮಾತನಾಡಿ, ಮಕ್ಕಳಲ್ಲಿ, ವಿಶೇಷವಾಗಿ ಶ್ರೀಮಂತ ಹಿನ್ನೆಲೆಯಿಂದ ಬಂದ ಮಕ್ಕಳಲ್ಲಿ ಈ ಸ್ಥೂಲಕಾಯತೆಯು ಕಳವಳಕಾರಿ ವಿಚಾರವಾಗುತ್ತಿದೆ. ಸಾಮಾನ್ಯವಾಗಿ 8-12 ವಯಸ್ಸಿನ ಮಕ್ಕಳು ಸರಾಸರಿ 60 ಕೆಜಿ ತೂಕವನ್ನು ಹೊಂದಿರುವುದು ಕಂಡು ಬರುತ್ತಿದೆ, ಇದು ಆ ವಯಸ್ಸಿನ ಮಕ್ಕಳಿನ ತೂಕಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿ ತಿಂಗಳು ಹೊರರೋಗಿ ವಿಭಾಗದಲ್ಲಿ ಸುಮಾರು 150 ಮಕ್ಕಳು ಚಿಕಿತ್ಸೆಗೆಂದು ಬರುತ್ತಾರೆ, ಅವರಲ್ಲಿ ಕನಿಷ್ಠ 30 ಮಂದಿ ಮಕ್ಕಳು ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವುದು (5 ರಲ್ಲಿ 1 ಮಕ್ಕಳು) ಕಂಡು ಬರುತ್ತಿದೆ. ಇದಕ್ಕೆ ಕಳಪೆ ಆಹಾರ ಪದ್ಧತಿ ಮತ್ತು ಪೋಷಕರ ಮೇಲ್ವಿಚಾರಣೆಯ ಕೊರತೆ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಂತಹ ನಗರದಲ್ಲಿ ಶಾಲೆಗೆ ಹೋಗುವ ಮಧ್ಯಮ ಮತ್ತು ಶ್ರೀಮಂತ ವರ್ಗದ ಮಕ್ಕಳಲ್ಲಿ ಹೆಚ್ಚಾಗಿ ಬೊಜ್ಜು ಸಮಸ್ಯೆ ಕಂಡು ಬರುತ್ತಿದೆ. ಈ ಮಕ್ಕಳು ಆಗಾಗ್ಗೆ ಅನಾರೋಗ್ಯಕ್ಕೊಳಗಾಗುವ ಹಿನ್ನೆಲೆಯಲ್ಲಿ ತೂಕ ಹೆಚ್ಚಾಗುವುದರ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸುವುದಿಲ್ಲ. ಅಲ್ಲದೆ, ಭಾರವಾಗಿರುವ ಮಗುವನ್ನು ಆರೋಗ್ಯಕರ ಮಗುವೆಂದು ಪರಿಗಣಿಸುವುದೂ ಕೂಡ ಇದಕ್ಕೆ ಒಂದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶುರುವಾಯ್ತು ಮಳೆಗಾಲ: ಮಕ್ಕಳ ಆರೋಗ್ಯದ ಕಾಳಜಿ ಹೇಗೆ...?
ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳಲ್ಲಿ ಅಧಿಕ ತೂಕದ ಜೊತೆಗೆ, ಮಲಬದ್ಧತೆ ಮತ್ತು ತೀವ್ರವಾದ ಕರುಳುವಾಳದ ಸಮಸ್ಯೆಗಳು ಕಂಡು ಬರುತ್ತವೆ, ಈ ಸಮಸ್ಯೆಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎಂದರು.
ಡಯಾಬಿಟಿಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ ಮನೋಹರ್ ಕೆಎನ್ ನಾಗೇಶಪ್ಪ ಅವರು ಮಾತನಾಡಿ, ಬೊಜ್ಜು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಸ್ಥೂಲಕಾಯ ಸಮಸ್ಯೆ ಬಗ್ಗೆ ಸಾಂಕ್ರಾಮಿಕ ರೋಗ ಸಮಸ್ಯೆದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈ ಹಿಂದೆ ವಯಸ್ಕರಲ್ಲಿ ಕಂಡು ಬರುತ್ತಿದ್ದ ಸಮಸ್ಯೆ ಇದೀಗ ಮಕ್ಕಳಲ್ಲೂ ಕಂಡು ಬರುತ್ತಿದೆ ಎಂದು ಹೇಳಿದರು.
ಮಕ್ಕಳು ತಮಗೆ ಬೇಕಾದುದನ್ನು ತಿನ್ನಲು ಬಿಡುವ ಪೋಷಕರ ಮನೋಭಾವವೇ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇದು ಮಕ್ಕಳಲ್ಲಿ ರೋಗಗಳ ಏರಿಕೆಗೆ ಕಾರಣವಾಗುತ್ತಿವೆ ಎಂದು ತಿಳಿಸಿದ್ದಾರೆ.