ಬಿಲ್‌ ಗೇಟ್ಸ್‌, ವಾರನ್‌ ಬಫೆಟ್‌ ಅಲ್ಲ; ಭಾರತದ ಈ ಉದ್ಯಮಿಯೇ ಶತಮಾನದ ಮಹಾ ದಾನಿ

ಕಳೆದ 100 ವರ್ಷಗಳಲ್ಲಿ ಅತಿ ಹೆಚ್ಚು ದಾನ ಮಾಡಿದ ಟಾಪ್‌ 10 ವ್ಯಕ್ತಿಗಳ ಪಟ್ಟಿಯಲ್ಲಿ ಜೆಮ್‌ಶೆಡ್‌ಜೀ ಟಾಟಾ ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಟಾಟಾ ಅವರು 7.44 ಲಕ್ಷ ಕೋಟಿ ರೂ. ದಾನ ನೀಡಿದ್ದಾರೆ ಎಂದು ವರದಿ ಹೇಳಿದೆ.

ಬಿಲ್‌ ಗೇಟ್ಸ್‌, ವಾರನ್‌ ಬಫೆಟ್‌ ಅಲ್ಲ; ಭಾರತದ ಈ ಉದ್ಯಮಿಯೇ ಶತಮಾನದ ಮಹಾ ದಾನಿ
Linkup
ಮುಂಬಯಿ: ಕಳೆದ 100 ವರ್ಷಗಳಲ್ಲಿ ಅತಿ ಹೆಚ್ಚು ಮಾಡಿದ ಟಾಪ್‌ 10 ವ್ಯಕ್ತಿಗಳ ಪಟ್ಟಿಯನ್ನು ಹುರಾನ್‌ ರಿಸರ್ವ್‌ ಮತ್ತು ಎಡಿಲ್‌ ಗಿವ್‌ ಫೌಂಡೇಷನ್‌ ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಜೆಮ್‌ಶೆಡ್‌ಜೀ ಟಾಟಾ ಅವರು 7.44 ಲಕ್ಷ ಕೋಟಿ ರೂ. (102 ಶತಕೋಟಿ ಡಾಲರ್‌) ದಾನ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಬಿಲ್‌ ಗೇಟ್ಸ್‌ ಮತ್ತು ಮಿಲಿಂದಾ ಗೇಟ್ಸ್‌, ಹೆನ್ರಿ ವೆಲ್ಕಮ್‌, ಹ್ಯೂಗ್ಸ್‌, ವಾರೆನ್‌ ಬಫೆಟ್‌, ಜಾರ್ಜ್‌ ಸೋರಸ್‌, ಹನ್ಸ್‌ ವಿಲ್ಸ್‌ಡೋರ್ಫ್‌, ಜೆಕೆ ಲಿಲ್ಲಿ, ಜಾನ್‌ ರಾಕ್‌ಫೆಲ್ಲರ್‌, ಎಡ್‌ಸೆಲ್‌ ಫೋರ್ಡ್‌ ಟಾಪ್‌ 10 ಪಟ್ಟಿಯಲ್ಲಿರುವ ಇತರ ದಾನಿಗಳಾಗಿದ್ದಾರೆ. ವಿಪ್ರೊದ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜೀ 12ನೇ ಸ್ಥಾನದಲ್ಲಿ ಇದ್ದಾರೆ. ಟಾಟಾ ಸಮೂಹದ ಸ್ಥಾಪಕರಾದ ಜೆಮ್‌ಶೆಡ್‌ಜೀ ಟಾಟಾ ಅವರು 1907ರಲ್ಲಿ ಜೆಮ್‌ಶೆಡ್‌ಪುರದಲ್ಲಿಉಕ್ಕಿನ ಕಾರ್ಖಾನೆಯನ್ನು (ಟಿಐಎಸ್‌ಸಿಒ) ಸ್ಥಾಪಿಸಿದ್ದರು. ಈಗ ಅದುವೇ ಟಾಟಾ ಸ್ಟೀಲ್‌ ಆಗಿದೆ. ಈಗ ಟಾಟಾ ಸಮೂಹ ಉಪ್ಪಿನಿಂದ ಸಾಫ್ಟ್‌ವೇರ್‌ ತನಕ ಹಲವಾರು ಕ್ಷೇತ್ರಗಳಲ್ಲಿ ವಹಿವಾಟು ನಡೆಸುತ್ತಿದ್ದು, 7.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. ಭಾರತದಲ್ಲಿ ಖಾಸಗಿ ರಂಗದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿ ಟಾಟಾ ಗುರುತಿಸಿಕೊಂಡಿದೆ.