ಟ್ವಿಟರ್‌ ಸಿಇಒ 'ಪರಾಗ್‌ ಅಗರ್ವಾಲ್‌'ಗೆ ವೇತನ ಪ್ಯಾಕೇಜ್‌ ಎಷ್ಟು? ಇಲ್ಲಿದೆ ಮಾಹಿತಿ!

ಟ್ವಿಟರ್‌ನ ನೂತನ ಸಿಇಒ ಭಾರತೀಯ ಮೂಲದ ಪರಾಗ್‌ ಅಗ್ರವಾಲ್‌ ಅವರಿಗೆ ವಾರ್ಷಿಕ 1 ದಶಲಕ್ಷ ಡಾಲರ್‌ ವೇತನ (ಅಂದಾಜು 7.5 ಕೋಟಿ ರೂ.) ಮತ್ತು ಬೋನಸ್‌ ದೊರೆಯಲಿದೆ ಕಂಪನಿಯು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮೀಶನ್‌ ತಿಳಿಸಿದೆ.

ಟ್ವಿಟರ್‌ ಸಿಇಒ 'ಪರಾಗ್‌ ಅಗರ್ವಾಲ್‌'ಗೆ ವೇತನ ಪ್ಯಾಕೇಜ್‌ ಎಷ್ಟು? ಇಲ್ಲಿದೆ ಮಾಹಿತಿ!
Linkup
ವಾಷಿಂಗ್ಟನ್‌: ಟ್ವಿಟರ್‌ನ ನೂತನ ಸಿಇಒ ಭಾರತೀಯ ಮೂಲದ ಪರಾಗ್‌ ಅಗ್ರವಾಲ್‌ ಅವರಿಗೆ ವಾರ್ಷಿಕ 1 ದಶಲಕ್ಷ ಡಾಲರ್‌ ವೇತನ (ಅಂದಾಜು 7.5 ಕೋಟಿ ರೂ.) ಮತ್ತು ಬೋನಸ್‌ ದೊರೆಯಲಿದೆ ಕಂಪನಿಯು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮೀಶನ್‌ ತಿಳಿಸಿದೆ. ಪರಾಗ್‌ ಅಗ್ರವಾಲ್‌ಗೆ 12.5 ದಶಲಕ್ಷ ಡಾಲರ್‌ ಮೌಲ್ಯದ ಷೇರುಗಳೂ ಸಿಗಲಿವೆ. (ಅಂದಾಜು 93.9 ಕೋಟಿ ರೂ.) ಇದು 16 ತ್ರೈ ಮಾಸಿಕಗಳಲ್ಲಿ ಇನ್‌ಕ್ರಿಮೆಂಟ್‌ ರೂಪದಲ್ಲಿ ದೊರೆಯಲಿದೆ. 2022ರ ಫೆ.1ರಿಂದ 2022ರ ಏಪ್ರಿಲ್‌ ತನಕ ಸಿಗಲಿದೆ. ಟ್ರೋಲ್‌ ಆದ ಹಳೆಯ ಟ್ವೀಟ್‌! ಪರಾಗ್‌ ಅಗ್ರವಾಲ್‌ ದಶಕದ ಹಿಂದೆ ಮಾಡಿದ್ದ ಟ್ವೀಟ್‌ ಒಂದು ಈಗ ವಿವಾದಾತ್ಮಕವಾಗಿ ವೈರಲ್‌ ಆಗಿದೆ. ಈ ಟ್ವೀಟ್‌ ನ್ನು ಗಮನಿಸಿದರೆ, ಎಲ್ಲ ಬಿಳಿಯರನ್ನು ಜನಾಂಗೀಯವಾದಿಗಳು ಎಂದು ಪರಾಗ್‌ ಅಗ್ರವಾಲ್‌ ನಂಬಿರುವಂತಿದೆ ಎಂದು ಹಲವರು ಟೀಕಿಸಿದ್ದಾರೆ. ಪರಾಗ್‌ ಟ್ವೀಟ್‌ನಲ್ಲಿ ಏನಿದೆ? 2010 ಅಕ್ಟೋಬರ್‌ 26ರಂದು ಟ್ವೀಟ್‌ ಒಂದರಲ್ಲಿ ಪರಾಗ್‌, ' ಅವರು ಮುಸ್ಲಿಮರು ಮತ್ತು ಉಗ್ರರ ನಡುವೆ ವ್ಯತ್ಯಾಸ ಕಾಣದಿದ್ದರೆ, ನಾನೇಕೆ ಬಿಳಿಯರು ಮತ್ತು ಜನಾಂಗೀಯವಾದಿಗಳ ನಡುವೆ ವ್ಯತ್ಯಾಸ ಕಾಣಬೇಕು?' ಎಂದು ಟ್ವೀಟ್‌ ಮಾಡಿದ್ದರು. ಆಗ ಪರಾಗ್‌ ಟ್ವಿಟರ್‌ ಅನ್ನೂ ಸೇರಿರಲಿಲ್ಲ. ಕಾಮಿಡಿ ಶೋ ಕಲಾವಿದ ಆಸಿಫ್‌ ಮಾಂಡ್ವಿ ಅವರ ಡೈಲಿ ಶೋ ಒಂದಕ್ಕೆ ಪ್ರತಿಕ್ರಿಯಿಸಿ ಮಾಡಿದ ಟ್ವೀಟ್‌ ಅದು ಎಂದು ತಿಳಿಸಿದ್ದಾರೆ. ಡೋರ್ಸಿ ಅವರು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಜಾಲತಾಣದಲ್ಲಿ ನಿರ್ಬಂಧಗಳನ್ನು ಹೇರಿದ ನಂತರ ಅನೇಕ ಬಲಪಂಥೀಯರು ಟ್ವಿಟರ್‌ನಿಂದ ನಿರ್ಗಮಿಸಿದ್ದರು. ಹೀಗಿದ್ದರೂ, ತಂತ್ರಜ್ಞಾನ ಸಮುದಾಯವು ಸಿಲಿಕಾನ್‌ ವ್ಯಾಲಿಯಲ್ಲಿ ಕಳೆದ 11 ವರ್ಷಗಳಲ್ಲಿ ಅಗ್ರವಾಲ್‌ ಅವರ ಸಾಧನೆಯನ್ನು ಪ್ರಶಂಸಿಸಿದೆ. ಡೋರ್ಸಿಗೆ ಪರಾಗ್‌ ಧನ್ಯವಾದ: ಟ್ವಿಟರ್‌ನ ಹೊಸ ಸಿಇಒ ಪರಾಗ್‌ ಅಗ್ರವಾಲ್‌ ಅವರು ಟ್ವಿಟರ್‌ನ ಸಹ ಸಂಸ್ಥಾಪಕ ಜಾಕ್‌ ಡೋರ್ಸಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. 'ನಾನು 10 ವರ್ಷ ಹಿಂದೆ ಕಂಪನಿಗೆ ಸೇರಿದೆ. ಆಗ 1,000 ಉದ್ಯೋಗಿಗಳಿದ್ದರು. ಆ ದಿನಗಳು ನಿನ್ನೆ ಮೊನ್ನೆಯಂತೆ ನೆನಪಿದೆ. ಡೋರ್ಸಿ ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದೆ. ನನ್ನ ಎಲ್ಲ ಏರಿಳಿತ, ಸೋಲು-ಗೆಲುವು-ತಪ್ಪು-ಒಪ್ಪುಗಳಲ್ಲಿ ಡೋರ್ಸಿ ಅವರ ಮಾರ್ಗದರ್ಶನ ಇದೆ. ಆದರೆ ಟ್ವಿಟರ್‌ ಈಗ ಅನೂಹ್ಯ ಅವಕಾಶಗಳನ್ನು ನಮ್ಮೆಲ್ಲರ ಮುಂದೆ ತೆರೆದಿಟ್ಟಿದೆ' ಎಂದು ವಿನಮ್ರರಾಗಿ ಹೇಳಿದ್ದಾರೆ.