![](https://vijaykarnataka.com/photo/87109838/photo-87109838.jpg)
(ಹರೀಶ್ ಬಸವರಾಜ್)
ಭಾರತೀಯ ಸಿನಿಮಾ ರಂಗದಲ್ಲಿ ಎ ಆರ್ ರೆಹಮಾನ್ ಹೆಸರು ಬಹಳ ದೊಡ್ಡದು. ತಮ್ಮ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಅವರ ಜತೆಗೆ ಈಗ ಕನ್ನಡದ ಮ್ಯೂಸಿಕ್ ಡೈರಕ್ಟರ್, ಬಿಗ್ ಬಾಸ್ ಖ್ಯಾತಿಯ ಕೆಲಸ ಮಾಡಿದ್ದಾರೆ. ಎ ಆರ್ ರೆಹಮಾನ್ ಅವರು ಕುರಿತು ಹಾಡೊಂದನ್ನು ಬಿಡುಗಡೆ ಮಾಡಿದ್ದು, ಇದು ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿದೆ. ಇದರ ಕನ್ನಡ ಹಾಡನ್ನು ವಾಸುಕಿ ವೈಭವ್ ಬರೆದಿದ್ದಾರೆ.
ಸಂಗೀತ ನಿರ್ದೇಶನದ ಜೊತೆ ಸಾಹಿತ್ಯ ಬರೆಯುವ ವಾಸುಕಿ ವೈಭವ್
ಈ ಹಿಂದೆ ಕೆ ಕಲ್ಯಾಣ್ ಅವರು ಎ ಆರ್ ರೆಹಮಾನ್ಗೆ ಒಂದು ಹಾಡು ಬರೆದುಕೊಟ್ಟಿದ್ದರು. ಈಗ ವಾಸುಕಿಗೆ ಆ ಅದೃಷ್ಟ ಸಿಕ್ಕಿದೆ. ತಮ್ಮ ವಿಶಿಷ್ಟ ಸಂಗೀತದ ಮೂಲಕ ಫಿಲಂಫೇರ್ ಪ್ರಶಸ್ತಿಗಳನ್ನು ಗೆದ್ದಿರುವ ವಾಸುಕಿ, ಸ್ಯಾಂಡಲ್ವುಡ್ನ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಜತೆಗೆ ಹಲವು ಹಾಡುಗಳನ್ನು ಸಹ ಬರೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ನಿನ್ನ ಸನಿಹಕೆ’ ಸಿನಿಮಾದ ಎಲ್ಲಾ ಹಾಡುಗಳನ್ನು ಅವರೇ ಬರೆದು ಗಮನ ಸೆಳೆದಿದ್ದಾರೆ.
ಹಾಡು ರಿಲೀಸ್ ಮಾಡಿದ
ಈ ಬಗ್ಗೆ ಹೇಳಿರುವ ವಾಸುಕಿ ವೈಭವ್, ‘ರೆಹಮಾನ್ ಅವರ ಜತೆಗೆ ನನ್ನ ಸ್ನೇಹಿತ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ನನಗೆ ಕರೆ ಮಾಡಿ ಇಂತಹದ್ದೊಂದು ಅವಕಾಶ ಇದೆ, ಹಾಡು ಬರೆದು ಕಳಿಸು ಎಂದಿದ್ದರು. ಹಾಡು ಕಳಿಸಿ ಬಹಳ ದಿನಗಳಾಗಿದ್ದವು. ಕಳೆದ ವಾರ ಕರೆ ಮಾಡಿ ಹಾಡು ಕಂಪೋಸಿಷನ್ ಆಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದಿದ್ದರು. ಅದಾಗಿ ಎರಡು ದಿನಗಳಲ್ಲಿ ಹಾಡು ರಿಲೀಸ್ ಆಗಿದೆ. ರೆಹಮಾನ್ ಅವರೇ ಈ ಹಾಡನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ರಿಲೀಸ್ ಮಾಡಿದ್ದಾರೆ. ಅಂತಹ ದೊಡ್ಡ ಸಂಗೀತ ನಿರ್ದೇಶಕರ ಜತೆಗೆ ಕೆಲಸ ಮಾಡಿದ ಅನುಭವ ನನಗೆ ಅತ್ಯಂತ ವಿಶೇಷ’ ಎಂದಿದ್ದಾರೆ.
ನನ್ನ ಅದೃಷ್ಟವಿದು ಎಂದ ಎ ಆರ್ ರೆಹಮಾನ್
"ರೆಹಮಾನ್ ಅವರು ಕಂಪೋಸ್ ಮಾಡಿರುವ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ. ಈಗಷ್ಟೇ ಸಂಗೀತ ನಿರ್ದೇಶನ ಆರಂಭಿಸಿರುವ ನನಗೆ ಅವರ ಕಂಪೋಸಿಷನ್ಗೆ ಹಾಡು ಬರೆಯುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎನ್ನಬಹುದು" ಎಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ವಾಸುಕಿ ವೈಭವ್
ಬಿಗ್ ಬಾಸ್ ಕನ್ನಡ ಸೀಸನ್ 7 ಶೋನಲ್ಲಿ ವಾಸುಕಿ ವೈಭವ್ ಭಾಗವಹಿಸಿ, ಫಿನಾಲೆಗೆ ಹೋಗಿದ್ದರು, ಆ ಮೂಲಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಈಗ ವಾಸುಕಿ ವೈಭವ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು, ನಿರ್ದೇಶನ ಮಾಡುತ್ತಿದ್ದಾರೆ.