ನಮ್ಮ ಲಸಿಕೆ ಬಳಸಿ: ಭಾರತಕ್ಕೆ ದುಂಬಾಲು ಬಿದ್ದ ಅಮೆರಿಕದ ಫೈಜರ್ ಕಂಪೆನಿ

ತನ್ನ ಲಸಿಕೆಯು ಭಾರತದಲ್ಲಿ ದಾಳಿ ನಡೆಸುತ್ತಿರುವ ಕೋವಿಡ್ ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದಿರುವ ಅಮೆರಿಕದ ಫೈಜರ್ ಸಂಸ್ಥೆ, ಲಸಿಕೆಯ ಬಳಕೆ ವಿಚಾರದಲ್ಲಿ ಕೆಲವು ಕಾನೂನಾತ್ಮಕ ವಿನಾಯಿತಿಗಳಿಗೆ ಪಟ್ಟು ಹಿಡಿದಿದೆ.

ನಮ್ಮ ಲಸಿಕೆ ಬಳಸಿ: ಭಾರತಕ್ಕೆ ದುಂಬಾಲು ಬಿದ್ದ ಅಮೆರಿಕದ ಫೈಜರ್ ಕಂಪೆನಿ
Linkup
ಹೊಸದಿಲ್ಲಿ: ಭಾರತದಲ್ಲಿ ಎರಡನೆಯ ಅಲೆಯಲ್ಲಿ ಅಪಾರ ಸೋಂಕಿತರು ಹಾಗೂ ಸಾವುಗಳಿಗೆ ಕಾರಣವಾಗಿದೆ ಎಂದು ನಂಬಲಾಗಿರುವ B.1.617.2 ಕೋವಿಡ್ ವಿರುದ್ಧ ತನ್ನ ಅಧಿಕ ಪರಿಣಾಮಕಾರಿಯಾಗಿದೆ ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಔಷಧ ಸಂಸ್ಥೆ ತಿಳಿಸಿದೆ. ಅಲ್ಲದೆ, ತನ್ನ ಲಸಿಕೆಯು 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಸೂಕ್ತವಾಗಿದೆ ಎನ್ನುವುದು ಸಹ ದೃಢಪಟ್ಟಿದೆ. ಈ ಲಸಿಕೆಗಳನ್ನು 2-8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಶೀತಲ ಸಂಗ್ರಹ ಸೌಲಭ್ಯಗಳಲ್ಲಿ ಒಂದು ತಿಂಗಳವರೆಗೂ ಸಂಗ್ರಹಿಸಿ ಇಡಬಹುದಾಗಿದೆ ಎಂದೂ ಫೈಜರ್ ಸರ್ಕಾರಕ್ಕೆ ವಿವರಿಸಿದೆ. ಭಾರತದಲ್ಲಿ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕಳೆದ ವರ್ಷದಿಂದಲೂ ಫೈಜರ್ ಮನವಿ ಮಾಡುತ್ತಿದೆ. ಆದರೆ ಇದುವರೆಗೂ ಫೈಜರ್ ಬಳಕೆಗೆ ಅನುಮತಿ ದೊರಕಿಲ್ಲ. ಜುಲೈ ಮತ್ತು ಅಕ್ಟೋಬರ್ ನಡುವೆ ಐದು ಕೋಟಿ ಡೋಸ್ ಲಸಿಕೆಗಳನ್ನು ನೀಡುವ ಸಂಬಂಧ ತ್ವರಿತ ಅನುಮೋದನೆಗಾಗಿ ಸರ್ಕಾರದ ಜತೆ ಫೈಜರ್ ಮಾತುಕತೆ ನಡೆಸುತ್ತಿದೆ. ಒಂದು ವೇಳೆ ಯಾವುದೇ ಅಡ್ಡಪರಿಣಾಮದ ಘಟನೆಗಳು ನಡೆದಲ್ಲಿ, ಪರಿಹಾರ ದಾವೆಗಳಿಂದ ರಕ್ಷಣೆ ಅಥವಾ ಪರಿಹಾರ ಕಾರ್ಯ ಸೇರಿದಂತೆ ಪ್ರಮುಖ ಶಾಸನಬದ್ಧ ವಿನಾಯಿತಿಗಳಿಗೆ ಕೂಡ ಮನವಿ ಮಾಡಿದೆ. ಕಳೆದ ಕೆಲವು ವಾರಗಳಲ್ಲಿ ಫೈಜರ್ ಹಾಗೂ ಸರ್ಕಾರದ ನಡುವೆ ಸರಣಿ ಸಭೆಗಳು ನಡೆದಿವೆ. ಇವುಗಳ ಪೈಕಿ ಸಮಸ್ಯೆಗಳ ನಿವಾರಣೆ, ಕಾನೂನಾತ್ಮಕ ನಷ್ಟ ಪರಿಹಾರದ ನೆರವು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಕೆಲವು ಸಭೆಗಳಲ್ಲಿ ಫೈಜರ್‌ನ ಅಧ್ಯಕ್ಷ ಹಾಗೂ ಸಿಇಒ ಅಲ್ಬರ್ಟ್ ಬೌರ್ಲಾ ಕೂಡ ಭಾಗವಹಿಸಿದ್ದರು. ಭಾರತದಲ್ಲಿ ಇದುವರೆಗೂ ಅನುಮೋದನೆ ಪಡೆದಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಳ ಪೈಕಿ ಯಾವ ಲಸಿಕೆಯೂ ಇಂತಹ ರಕ್ಷಣೆಗಳಿಲ್ಲ. ಆದರೆ ಫೈಜರ್ ಇದಕ್ಕೆ ಪಟ್ಟುಹಿಡಿದಿದೆ.