ತಮಿಳುನಾಡಿನಲ್ಲಿ ಸ್ಟಾಲಿನ್ ಯುಗ ಆರಂಭ: ಸಂಪುಟದ 33 ಸಚಿವರೊಂದಿಗೆ ಪದಗ್ರಹಣ

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಶುಕ್ರವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಸಂಪುಟಕ್ಕೆ 33 ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದರು. ಗೃಹ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳನ್ನು ಸ್ಟಾಲಿನ್ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಸ್ಟಾಲಿನ್ ಯುಗ ಆರಂಭ: ಸಂಪುಟದ 33 ಸಚಿವರೊಂದಿಗೆ ಪದಗ್ರಹಣ
Linkup
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮುಖ್ಯಸ್ಥ ಶುಕ್ರವಾರ ಪದಗ್ರಹಣ ಮಾಡಿದರು. ಅವರೊಂದಿಗೆ ಸಂಪುಟಕ್ಕೆ 33 ಶಾಸಕರು ಸಚಿವರಾಗಿ ಸ್ವೀಕರಿಸಿದರು. ಚೆನ್ನೈನ ರಾಜಭವನದಲ್ಲಿ ಬೆಳಿಗ್ಗೆ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರತಿಜ್ಞಾವಿಧಿ ಬೋಧಿಸಿದರು. ಅಣ್ಣಾದೊರೈ, ವಿ.ಆರ್. ನೆಡುಂಳೆಜಿಯಾನ್ ಮತ್ತು ಎಂ ಕರುಣಾನಿಧಿ ಅವರ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ ನಾಲ್ಕನೆಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ಟಾಲಿನ್ ಪಾತ್ರರಾಗಿದ್ದಾರೆ. ಕರುಣಾನಿಧಿ ಅವರ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಸ್ಟಾಲಿನ್ ಮುಖ್ಯಮಂತ್ರಿ ಹುದ್ದೆಯ ಜತೆಗೆ, ಗೃಹ ಇಲಾಖೆ ಹಾಗೂ ಇತರೆ ಕೆಲವು ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಇದರಲ್ಲಿ ಆಡಳಿತ ಹಾಗೂ ಪೊಲೀಸ್ ಸೇವೆಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಅಂಗವಿಕಲರ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳು ಅವರ ಕೈಯಲ್ಲಿವೆ. ರಾಜ್ಯವು ಕೋವಿಡ್ ಎರಡನೆ ಅಲೆಯ ವಿರುದ್ಧದ ಹೋರಾಟದಲ್ಲಿ ಸವಾಲು ಎದುರಿಸುತ್ತಿರುವುದರ ನಡುವೆ ಸ್ಟಾಲಿನ್ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ನೂತನ ಜಲಸಂಪನ್ಮೂಲ ಸಚಿವರಾಗಿ ಹಿರಿಯ ಡಿಎಂಕೆ ನಾಯಕ ದುರೈಮುರುಗನ್, ಹಣಕಾಸು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವರಾಗಿ ಪಳನಿವೇಲ್ ತ್ಯಾಗರಾಜನ್, ಆರೋಗ್ಯ ಸಚಿವರಾಗಿ ಎಂಎ ಸುಬ್ರಮಣಿಯನ್, ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಎಂಆರ್‌ಕೆ ಪನೀರ್‌ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪರಿಸರ ಸಚಿವಾಲಯಕ್ಕೆ ಶಿವ ವಿ ಮೆಯ್ಯನಾಥನ್, ಕಾರ್ಮಿಕ ಕಲ್ಯಾಣ ಸಚಿವರಾಗಿ ಸಿವಿ ಗಣೇಶನ್ ಆಯ್ಕೆಯಾಗಿದ್ದಾರೆ. ಎನ್‌ಆರ್‌ಐ ಇಲಾಖೆ, ಅಲ್ಪಸಂಖ್ಯಾತರು, ನಿರಾಶ್ರಿತರು ಮತ್ತು ವಕ್ಫ್ ಮಂಡಳಿ ಸಚಿವರಾಗಿ ಗಿಂಗೀ ಎಸ್ ಮಸ್ತಾನ್, ಮೀನುಗಾರಿಕೆ ಸಚಿವೆಯಾಗಿ ಅನಿತಾ ಆರ್ ರಾಧಾಕೃಷ್ಣನ್, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿ ಟಿ ಮಾನೊ ತಂಗರಾಜ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಚೆಪಾಕ್-ತಿರುವಲ್ಲಿಕೆನಿ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿರುವ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್‌ಗೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ.