ತಮಿಳುನಾಡಿನತ್ತ ವಿದ್ಯುತ್ ವಾಹನ ಕ್ಷೇತ್ರದ ಹೂಡಿಕೆ: ಹೂಡಿಕೆದಾರರಿಗೆ ಮತ್ತಷ್ಟು ಸೌಲಭ್ಯಗಳನ್ನು ನೀಡಿದ ಕರ್ನಾಟಕ ಸರ್ಕಾರ

ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಿದ್ದ ಅನೇಕ ವಿದ್ಯುತ್ ವಾಹನಗಳ ಕಂಪೆನಿಗಳು ತಮಿಳುನಾಡಿನತ್ತ ಮುಖ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳಲು ಕರ್ನಾಟಕ ಸರ್ಕಾರ ತನ್ನ ಹಿಂದಿನ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ.

ತಮಿಳುನಾಡಿನತ್ತ ವಿದ್ಯುತ್ ವಾಹನ ಕ್ಷೇತ್ರದ ಹೂಡಿಕೆ: ಹೂಡಿಕೆದಾರರಿಗೆ ಮತ್ತಷ್ಟು ಸೌಲಭ್ಯಗಳನ್ನು ನೀಡಿದ ಕರ್ನಾಟಕ ಸರ್ಕಾರ
Linkup
ಬೆಂಗಳೂರು: ವಿದ್ಯುತ್ ವಾಹನಗಳ (ಇವಿ) ಮೇಲಿನ ಹೂಡಿಕೆಯನ್ನು ನೆರೆಯ ತಮಿಳುನಾಡಿಗೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ , ತನ್ನ 2017ರ ಇವಿ ಮತ್ತು ಇಂಧನ ಸಂಗ್ರಹ ನೀತಿಯನ್ನು ಮರು ಪರಿಶೀಲನೆ ನಡೆಸಲು ಗುರುವಾರ ನಿರ್ಧರಿಸಿದೆ. ಈಗಾಗಲೇ ಹೂಡಿಕೆಗೆ ಮುಂದಾಗಿದ್ದ ಹೂಡಿಕೆದಾರರಿಗೆ ಇನ್ನಷ್ಟು ಸ್ಪರ್ಧಾತ್ಮಕ ಸೌಲಭ್ಯ ಒದಗಿಸಲು ಹಾಗೂ ಹೊಸ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸ್ಥಿರಾಸ್ತಿಗಳ ಮೌಲ್ಯದ (ವಿಎಫ್‌ಎ) ಮೇಲಿನ ಶೇ 15ರಷ್ಟು ಮರುಪಾವತಿ, ಉತ್ಪಾದನೆ ಆಧಾರಿತ ಸಬ್ಸಿಡಿ ಮತ್ತು ತರಬೇತಿ ಭತ್ಯೆ ಸೇರಿದಂತೆ ವಿವಿಧ ಹೊಸ ಸವಲತ್ತುಗಳನ್ನು ಒದಗಿಸುವ ಸಂಬಂಧ 2017ರ ನೀತಿಗೆ ತಿದ್ದುಪಡಿ ತರಲು ಗುರುವಾರ ನಡೆದ ರಾಜ್ಯ ವೇಳೆ ಸರ್ಕಾರ ನಿರ್ಧರಿಸಿದೆ. ಶೇ 50ರಷ್ಟು ಮಾತ್ರ ಇದ್ದ ವಿಎಫ್‌ಎ ಮರುಪಾವತಿಯನ್ನು ತೆರವುಗೊಳಿಸಿ ಅದನ್ನು, ಗರಿಷ್ಠ 50 ಎಕರೆ ಭೂಮಿಯ ಮೇಲಿನ ಸಂಪೂರ್ಣ ವಿಎಫ್‌ಎಯನ್ನು ಐದು ಸಮಾನ ವಾರ್ಷಿಕ ಕಂತಿನಂತೆ ಶೇ 15ಕ್ಕೆ ನಿಗದಿಪಡಿಸಲು ನಿರ್ಧರಿಸಿದೆ. ನಿವ್ವಳ ಎಸ್‌ಜಿಎಸ್‌ಟಿ ಮೇಲೆ 8-13 ವರ್ಷದ ಅವಧಿಯವರೆಗೆ ಸ್ಥಿರ ಆಸ್ತಿಯ ಶೇ 60-95ರವರೆಗಿನ ಗರಿಷ್ಠ ಮೊತ್ತದಷ್ಟು ಬಡ್ಡಿರಹಿತ ಸಾಲ ನೀಡುವ ಹಿಂದಿನ ಎಸ್‌ಒಪಿಯಲ್ಲಿ ಸರ್ಕಾರ ತಿದ್ದುಪಡಿ ತಂದಿದೆ. ಜೋಡಣೆ ಉತ್ಪಾದನೆ, ಇವಿ ಸೆಲ್ ಉತ್ಪಾದನೆ, ಇವಿ ಬ್ಯಾಟರಿ ಪ್ಯಾಕ್ ಮತ್ತು ಮಾದರಿ ಉತ್ಪಾದನೆ, ಇವಿ ಘಟಕಗಳ ಉತ್ಪಾದನೆ ಹಾಗೂ ಇವಿ ಚಾರ್ಜಿಂಗ್ ಮೂಲಸೌಕರ್ಯ ಉಪಕರಣ/ಬ್ಯಾಟರಿ ಬದಲಾವಣೆ ಉತ್ಪಾದನೆಯ ವಾಣಿಜ್ಯ ಕಾರ್ಯಾಚರಣೆ ಆರಂಭವಾದ ಮೊದಲ ವರ್ಷದಿಂದ 5 ವರ್ಷದ ಅವಧಿಯವರೆಗೆ ಒಟ್ಟಾರೆ ವಹಿವಾಟಿನ ಶೇ 1ರಂದು ಉತ್ಪಾದನೆ ಆಧಾರಿತ ಸಬ್ಸಿಡಿ ಒದಗಿಸಲು ಕೂಡ ಸರ್ಕಾರ ನಿರ್ಧರಿಸಿದೆ. 2017ರ ನೀತಿಯು ರಾಜ್ಯದ ಘಟಕದಲ್ಲಿ 50 ಟ್ರೈನಿಗಳವರೆಗೆ ಪ್ರತಿ ಟ್ರೈನಿಗೆ ಮಾಸಿಕ ಗರಿಷ್ಠ 10,000 ಭತ್ಯೆ ನೀಡುವ ಇವಿ ಉತ್ಪಾದಕರಿಗೆ ಶೇ 50ರಷ್ಟು ಭತ್ಯೆಯ ಮೊತ್ತ ಒದಗಿಸುವುದಾಗಿ ಕೂಡ ಹೇಳಿತ್ತು. ಈಗ ತಿದ್ದುಪಡಿಯಲ್ಲಿ ಭತ್ಯೆಯ ಮೊತ್ತದಲ್ಲಿ ಬದಲಾವಣೆ ಮಾಡದಿದ್ದರೂ, 50 ವಿದ್ಯಾರ್ಥಿಗಳ ತರಬೇತಿಗೆ ಮಾತ್ರ ಭತ್ಯೆ ಒದಗಿಸುವ ಮಿತಿಯನ್ನು ಸರ್ಕಾರ ತೆಗೆದುಹಾಕಿದೆ. ನೀತಿಯಲ್ಲಿನ ಬದಲಾವಣೆ ಇವಿ ಉತ್ಪಾದಕರನ್ನು ಆಕರ್ಷಿಸುವ ಭರವಸೆ ರಾಜ್ಯ ಸರ್ಕಾರಕ್ಕೆ ಇದೆ. ತಮಿಳುನಾಡಿನಲ್ಲಿ ನೀಡುತ್ತಿರುವ ಸೌಲಭ್ಯಗಳಿಗೆ ಹೋಲಿಸಿದರೆ ಈ ತಿದ್ದುಪಡಿಗಳು ಉತ್ತಮವಾಗಿವೆ ಎಂಬ ಭರವಸೆ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.