ಡಿಕೆಶಿ ನನ್ನ ಬಗ್ಗೆ ಮಾತಾಡಿದರೆ, ನನ್ನದೇ ಭಾಷೆಯಲ್ಲಿ ಉತ್ತರ ಕೊಡ್ತೀನಿ: ರೇಣುಕಾಚಾರ್ಯ

ಪ್ರಿಯಾಂಕಾ ಗಾಂಧಿ ಬಿಕಿನಿ ಅಂತಾ ಮಾತಾಡಿದ್ದು ತಪ್ಪು, ಅದರ ಬಗ್ಗೆ ಮಾತಾಡಿದ್ದೇನೆ. ಉಡುಪು ಮಹಿಳೆಯರ ವೈಯಕ್ತಿಕ ವಿಚಾರ, ಅದರ ಬಗ್ಗೆ ಮಾತಾಡಲ್ಲ. ಈ ಬಗ್ಗೆ ನಾನು ಮಾತಾಡುವಾಗ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದೇನೆ.

ಡಿಕೆಶಿ ನನ್ನ ಬಗ್ಗೆ ಮಾತಾಡಿದರೆ, ನನ್ನದೇ ಭಾಷೆಯಲ್ಲಿ ಉತ್ತರ ಕೊಡ್ತೀನಿ: ರೇಣುಕಾಚಾರ್ಯ
Linkup
ಬೆಂಗಳೂರು: ಉಡುಪು ಮಹಿಳೆಯರ ವೈಯಕ್ತಿಕ ವಿಚಾರ, ಅದರ ಬಗ್ಗೆ ಮಾತಾಡಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮಾತಾಡಿದರೆ ಅದಕ್ಕೆ ಏನು ಮಾತಾಡಬೇಕು ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ವೈಯಕ್ತಿಕ ಟೀಕೆ ಮಾಡಿದರೆ ನಾನು ನನ್ನದೇ ಭಾಷೆಯಲ್ಲಿ ಉತ್ತರ ಕೊಡುತ್ತೇನೆ ಎಂದರು. ಶಿವಕುಮಾರ್ ಭ್ರಮಾಲೋಕದಲ್ಲಿ ಇರುವುದು ಬೇಡ.ಸಮವಸ್ತ್ರ ‌ಮೊದಲಿನಿಂದಲೂ ಇದೆ. ಅಮಾಯಕ ವಿದ್ಯಾರ್ಥಿನಿಯರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳ ಕೈಚಳಕ ಇದೆ. ಇದರ ಜೊತೆಗೆ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪಿಸಿದರು. ಖರೀದಿ ಮಾಡುವುದು, ಕೊಡುವುದು ನಮ್ಮ ವೈಯಕ್ತಿಕ ವಿಚಾರ. ಕಾಂಗ್ರೆಸ್ ದೇಶ ವಿರೋಧಿಗಳ ಪರವೋ ಅಲ್ಲವೋ‌ ಅಂತಾ ಶಿವಕುಮಾರ್ ಸ್ಪಷ್ಟೀಕರಣ ಕೊಡಲಿ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದರು ಅಂತಾ ಕಾಂಗ್ರೆಸ್ ಹಸಿ ಸುಳ್ಳು ಹೇಳಿತು. ಸಾಂದರ್ಭಿಕವಾಗಿ ಮುಗ್ಧ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದಾರೆ. ದೇಶಪ್ರೇಮದಿಂದ ಕೇಸರಿ ಧ್ವಜ ಹಾರಿಸಿರಬಹುದು. ಮಕ್ಕಳಿಗೆ ಅರ್ಥ ಆಗಿಲ್ಲ, ಗೊತ್ತಾಗಿಲ್ಲ. ಖಾಲಿ ಕಂಬಕ್ಕೆ ಕೇಸರಿ ಧ್ವಜ ಹಾರಿಸಿದ್ದಾರೆ. ಅದು ತಪ್ಪು ಅಂತಾ ನಾನು ಹೇಳಲು ಆಗಲ್ಲ ಎಂದು ಹೇಳಿದರು. ರಾಷ್ಟ್ರ ಧ್ವಜದ ಗೌರವವನ್ನು ವಿದ್ಯಾರ್ಥಿಗಳು ಕಡಿಮೆ‌ ಮಾಡಿಲ್ಲ ಮುಗ್ಧ ಮಕ್ಕಳು ಏನೂ ಅರಿವಾಗದೇ ಕೇಸರಿ ಧ್ವಜ ಹಾರಿಸಿದ್ದಾರೆ. ಅದು ತಪ್ಪು ಸರಿ ಅಂತಾ ಹೇಳಲು ಆಗಲ್ಲ, ಈಶ್ವರಪ್ಪ ಹಿರಿಯರು, ಅವರ ಬಗ್ಗೆ ಮಾತಾಡಲ್ಲ. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಮುಗ್ಧರು. ಅಮಾಯಕ ವಿಧ್ಯಾರ್ಥಿಗಳ ಶಿಕ್ಷಣ ಹಾಳಾಗಬಾರದು, ಸಮವಸ್ತ್ರ ಧರಿಸಿ ಶಾಲೆಗೆ ಬನ್ನಿ ಎಂದು ಮನವಿ ಮಾಡಿದರು. ಪ್ರಿಯಾಂಕಾ ಗಾಂಧಿ ಬಿಕಿನಿ ಅಂತಾ ಮಾತಾಡಿದ್ದು ತಪ್ಪು, ಅದರ ಬಗ್ಗೆ ಮಾತಾಡಿದ್ದೇನೆ. ಉಡುಪು ಮಹಿಳೆಯರ ವೈಯಕ್ತಿಕ ವಿಚಾರ, ಅದರ ಬಗ್ಗೆ ಮಾತಾಡಲ್ಲ. ಈ ಬಗ್ಗೆ ನಾನು ಮಾತಾಡುವಾಗ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದೇನೆ. ಸ್ತ್ರೀಯರ ಬಗ್ಗೆ ಬಿಜೆಪಿಗೆ, ಸರಕಾರಕ್ಕೆ, ನನಗೆ ಅಪಾರ ಗೌರವ ಇದೆ ಎಂದು ಸ್ಪಷ್ಟನೆ ನೀಡಿದರು. ಸಚಿವ ಸ್ಥಾನದ ವಿಚಾರ ಕಾದು ನೋಡೋಣ.ನಮ್ಮ‌ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ‌ ಮಾತಾಡಿದ್ದೇನೆ. ನಾಲ್ಕು ಗೋಡೆಯ ನಡುವಿನ ಮಾತುಕತೆ ಬಹಿರಂಗವಾಗಿ ಹೇಳಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.