ಟ್ವಿಟರ್‌ ವಸ್ತುನಿಷ್ಠ ವೇದಿಕೆಯಲ್ಲ, ಕೇಂದ್ರ ಸರಕಾರ ಹೇಳಿದಂತೆ ಕೇಳುತ್ತಿದೆ: ರಾಹುಲ್‌ ಗಾಂಧಿ ವಾಗ್ಧಾಳಿ

ಟ್ವಿಟರ್ ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ, ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ.ನನ್ನ ಟ್ವಿಟರ್ ಖಾತೆ ಸ್ಥಗಿತಗೊಳಿಸುವ ಮೂಲಕ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಕಂಪನಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿ ಪ್ರಯತ್ನಿಸುತ್ತಿದೆ. ಒಂದು ರಾಜಕಾರಣಿಯಾಗಿ ನನಗಿದು ಇಷ್ಟವಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ವಾಗ್ದಾಳಿ ರಾಹುಲ್‌ ಗಾಂಧಿ ಟ್ವಿಟರ್‌ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಟ್ವಿಟರ್‌ ವಸ್ತುನಿಷ್ಠ ವೇದಿಕೆಯಲ್ಲ, ಕೇಂದ್ರ ಸರಕಾರ ಹೇಳಿದಂತೆ ಕೇಳುತ್ತಿದೆ: ರಾಹುಲ್‌ ಗಾಂಧಿ ವಾಗ್ಧಾಳಿ
Linkup
ಹೊಸದಿಲ್ಲಿ: ಹಾಗೂ ವಿರುದ್ಧ ವಾಗ್ಧಾಳಿಯನ್ನು ಮುಂದುವರಿಸಿದ್ದಾರೆ. ತಮ್ಮ ಹಾಗೂ ಕಾಂಗ್ರೆಸ್‌ ಮುಖಂಡರ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಟ್ವಿಟರ್‌ ಹಾಗೂ ಕೇಂದ್ರ ಸರಕಾರದ ವಿರುದ್ಧ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ತಮ್ಮ ಖಾತೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ಸಂಸತ್‌ನಲ್ಲಿ ಮಾತನಾಡಲು ಬಿಡುತ್ತಿಲ್ಲ. ಮಾಧ್ಯಮಗಳನ್ನು ಕೇಂದ್ರ ಸರಕಾರವೇ ಕಂಟ್ರೋಲ್‌ ಮಾಡುತ್ತಿದೆ. ಹೀಗಾಗಿ ಅಲ್ಲೂ ಕೂಡ ಮಾತನಾಡಲು ಆಗುತ್ತಿಲ್ಲ. ನಮ್ಮ ನೋವನ್ನು ವ್ಯಕ್ತಪಡಿಸಲು ಟ್ವಿಟರ್‌ವೊಂದು ಮಾರ್ಗವಾಗಿತ್ತು. ಆದರೆ ಇದೀಗ ಆ ಮಾರ್ಗವೂ ಬಂದ್‌ ಆಗಿದೆ. ಎಂದು ಕಿಡಿಕಾರಿದರು. 'ಟ್ವಿಟರ್ ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ, ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ'.'ನನ್ನ ಟ್ವಿಟರ್ ಖಾತೆ ಸ್ಥಗಿತಗೊಳಿಸುವ ಮೂಲಕ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಕಂಪನಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿ ಪ್ರಯತ್ನಿಸುತ್ತಿದೆ. ಒಂದು ರಾಜಕಾರಣಿಯಾಗಿ ನನಗಿದು ಇಷ್ಟವಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ. ' ನಾನು 20 ಲಕ್ಷ ಹಿಂಬಾಲಕರನ್ನು ಹೊಂದಿದ್ದೇನೆ. ಅವರಿಗೂ ಅಭಿಪ್ರಾಯದ ಹಕ್ಕನ್ನು ನಿರಾಕರಿಸಲಾಗಿದೆ. ತಟಸ್ಥ ವೇದಿಕೆಯ ಪರಿಕಲ್ಪನೆಯನ್ನು ಟ್ವಿಟರ್ ಉಲ್ಲಂಘಿಸಿದೆ' ಎಂದು ಆರೋಪಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಜತೆಗಿನ ಫೋಟೊದೊಂದಿಗೆ ರಾಹುಲ್ ಗಾಂಧಿ ಇತ್ತೀಚೆಗೆ ಮಾಡಿದ್ದ ಪೋಸ್ಟ್ ಅನ್ನು ತೆಗೆದು ಹಾಕಿದ್ದ ಟ್ವಿಟರ್, ಖಾತೆಯನ್ನು ಸ್ಥಗಿತಗೊಳಿಸಿತ್ತು. ಅದಾದ ನಂತರ ಕಾಂಗ್ರೆಸ್‌ನ ಅಧಿಕೃಕ ಖಾತೆ ಹಾಗೂ ಕೆಲ ಕಾಂಗ್ರೆಸ್‌ ನಾಯಕರ ಖಾತೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಈ ಬೆನ್ನಲ್ಲೇ ಕೇಂದ್ರ ಹಾಗೂ ಟ್ವಿಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಟ್ವಿಟರ್ ಸಂಬಂಧ ಸಂಸತ್‌ನಲ್ಲೂ ಆರೋಪ ಪ್ರತ್ಯಾರೋಪಗಳು ನಡೆದಿವೆ.