ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭದ್ರತಾ ಪರಿಶೀಲನೆ ಸಭೆ: ಅಜಿತ್ ದೋವಲ್ ಭಾಗಿ!

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು(ಅ.7-ಗುರುವಾರ) ಭದ್ರತಾ ಪರಿಶೀಲನಾ ಸಭೆ ನಡೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಗೃಹ ಸಚಿವಾಲಯದ ಇತರ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭದ್ರತಾ ಪರಿಶೀಲನೆ ಸಭೆ: ಅಜಿತ್ ದೋವಲ್ ಭಾಗಿ!
Linkup
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ನೇತೃತ್ವದಲ್ಲಿ ಇಂದು(ಅ.7-ಗುರುವಾರ) ಭದ್ರತಾ ಪರಿಶೀಲನಾ ಸಭೆ ನಡೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಸೇರಿದಂತೆ ಗೃಹ ಸಚಿವಾಲಯದ ಇತರ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಉಗ್ರರ ದಾಳಿಯ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಕಣಿವೆಯಲ್ಲಿ ಕಳೆದ ಕೆಲವು ದಿನಗಳಿಂದ ಉಗ್ರರು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮಾಡುತ್ತಿದ್ದು, ಮುಗ್ಧ ನಾಗರಿಕರನ್ನು ಬಲಿ ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮಿತ್ ಶಾ, ಉಗ್ರರನ್ನು ತಹಬದಿಗೆ ತರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂದ ಮೂಲಗಳು ತಿಳಿಸಿವೆ. ಇದೇ ವೇಳೆ ಎಲ್‌ಎಸಿಯಲ್ಲಿ ಚೀನಿ ಸೇನೆಯ ಸೈನ್ಯ ಜಮಾವಣೆ ಮತ್ತು ಗಡಿಯಲ್ಲಿ ಭಾರತೀಯ ಸೇನೆಯ ಸಿದ್ಧತೆ ಬಗ್ಗೆಯೂ ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಎಲ್‌ಎಸಿಯಲ್ಲಿ ಚೀನಿ ಸೇನೆಯ ಭಾರೀ ಜಮಾವಣೆಯಿಂದ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಚೀನಿ ಸೇನೆ ಜಮಾವಣೆಗೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೈನ್ಯವನ್ನು ಜಮಾವಣೆ ಮಾಡಿದೆ. ಅಲ್ಲದೇ ಚೀನಿ ಸೇನೆ ಚಟುವಟಿಕೆಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದೆ. ಎಲ್‌ಎಸಿ ವಿದ್ಯಮಾನದ ಬಗ್ಗೆ ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ವಿವಿಧ ಭದ್ರತಾ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಲಡಾಖ್ ಗಡಿ ಸಂಘರ್ಷದ ಬಳಿಕ ಮೆತ್ತಗಾಗಿದ್ದ , ಇದೀಗ ಮತ್ತೆ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯವನ್ನು ಜಮಾವಣೆ ಮಾಡುತ್ತಿದೆ. ಗಡಿಯಲ್ಲಿ ಆಧುನಿಕ ಮಿಲಿಟರಿ ಉಪಕರಣಗಳನ್ನು ಶೇಖರಿಸುತ್ತಿರುವ ಚೀನಾ, ಮತ್ತೊಂದು ಸುತ್ತಿನ ಗಡಿ ತಂಟೆಗೆ ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಡಾಖ್ ಗಡಿ ಸಂಘರ್ಷಕ್ಕೆ ತಕ್ಕ ಉತ್ತರ ನೀಡಿದ್ದ ಭಾರತೀಯ ಸೇನೆ, ಇದೀಗ ಮತ್ತೆ ಚೀನಾದ ಹುನ್ನಾರವನ್ನು ವಿಫಲಗೊಳಿಸಲು ಸಜ್ಜಾಗುತ್ತಿದೆ. ಚೀನಿ ಸೇನೆಗೆ ತಕ್ಕುದಾದ ಸಿದ್ಧತೆ ನಡೆಯುತ್ತಿದ್ದು, ಸೈನ್ಯ ಜಮಾವಣೆಗೆ ಪ್ರಾಶಸ್ತ್ಯ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಇಲಾಖೆ ಮುಖ್ಯಸ್ಥ ಅರವಿಂದ ಕುಮಾರ್, ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ ಹಾಗೂ ಬಿಎಸ್‌ಎಫ್ ಮುಖ್ಯಸ್ಥ ಪಂಕಜ್ ಸಿಂಗ್ ಭಾಗವಹಿಸಿದ್ದರು. ಸುಮಾರು 2:30 ಗಂಟೆಗಳಿಗೂ ಹೆಚ್ಚು ಕಾಲ ಈ ಸಭೆ ನಡೆದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.