ಗರ್ಭಿಣಿಯರಿಗೂ ಕೋವಿಡ್ 19 ಲಸಿಕೆ: ಆರೋಗ್ಯ ಸಚಿವಾಲಯದ ಮಹತ್ವದ ಮಾರ್ಗಸೂಚಿ

ಗರ್ಭಿಣಿಯರಿಗೂ ಕೋವಿಡ್ 19 ಲಸಿಕೆಗಳನ್ನು ನೀಡಬಹುದಾಗಿದೆ. ಅವರು ಲಸಿಕೆ ಪಡೆಯುವುದು ಹೆಚ್ಚು ಉಪಯುಕ್ತ. ಈ ಬಗ್ಗೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ರೂಪಿಸಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಗರ್ಭಿಣಿಯರಿಗೂ ಕೋವಿಡ್ 19 ಲಸಿಕೆ: ಆರೋಗ್ಯ ಸಚಿವಾಲಯದ ಮಹತ್ವದ ಮಾರ್ಗಸೂಚಿ
Linkup
ಹೊಸದಿಲ್ಲಿ: ಗರ್ಭಿಣಿಯರಿಗೂ ಲಸಿಕೆಗಳನ್ನು ನೀಡುವಂತೆ ಮಾರ್ಗಸೂಚಿ ನೀಡಿದೆ. ಗರ್ಭಿಣಿಯರಿಗೆ ಹೆಚ್ಚು ಅನುಕೂಲಕಾರಿಯಾಗುತ್ತವೆ. ಹೀಗಾಗಿ ಅವರಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ. ತಿಳಿಸಿದ್ದಾರೆ. ಲಸಿಕೆ ನೀತಿ ಜಾರಿಗೆ ತಂದ ಸಮಯದಲ್ಲಿ ಮಕ್ಕಳು, ಹಾಗೂ ಹಾಲುಣಿಸುವ ತಾಯಂದಿರನ್ನು ಲಸಿಕೆ ನೀಡುವುದರಿಂದ ಹೊರಗಿಡಲಾಗಿತ್ತು. ಬಳಿಕ ಹಾಲುಣಿಸುವ ತಾಯಂದಿರು ಕೂಡ ಕೋವಿಡ್ ಲಸಿಕೆ ಪಡೆಯಬಹುದು ಎಂದು ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಗರ್ಭಿಣಿಯರು ಲಸಿಕೆ ಪಡೆದುಕೊಂಡರೆ ಅವರ ಆರೋಗ್ಯ ಹಾಗೂ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ಅಧ್ಯಯನಗಳು ನಡೆದಿದ್ದವು. ಈಗ ಗರ್ಭಿಣಿಯರು ಕೂಡ ಲಸಿಕೆ ಪಡೆಯಬಹುದು ಮತ್ತು ಅವರು ಲಸಿಕೆ ಪಡೆಯುವುದು ಒಳ್ಳೆಯದು ಎಂದು ಮಾರ್ಗಸೂಚಿ ರೂಪಿಸಿರುವುದಾಗಿ ಸರಕಾರ ತಿಳಿಸಿದೆ. ಈ ಮಾರ್ಗಸೂಚಿಯು ಶೀಘ್ರವೇ ಅಧಿಕೃತವಾಗಿ ಜಾರಿಯಾಗುವ ನಿರೀಕ್ಷೆಯಿದೆ. ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಸುರಕ್ಷಿತ ಎಂದು ತಿಳಿಸುವ ಪುರಾವೆಗಳ ಕೊರತೆಯಿಂದಾಗಿ ಲಸಿಕೆ ನೀಡುವ ಬಗ್ಗೆ ಇದುವರೆಗೂ ತೀರ್ಮಾನ ತೆಗೆದುಕೊಂಡಿರಲಿಲ್ಲ. ಅಮೆರಿಕದಲ್ಲಿ ಫೈಜರ್, ಮಾಡೆರ್ನಾದಂತಹ ಲಸಿಕೆಗಳನ್ನು ಗರ್ಭಿಣಿಯರ ಮೇಲೆ ಪ್ರಯೋಗಿಸಲಾಗಿತ್ತು. ಅವರಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿರಲಿಲ್ಲ. ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ದಾಖಲೆಗಳು ಲಭ್ಯವಿಲ್ಲದಿದ್ದರೂ, ಗರ್ಭಿಣಿಯರು ಮತ್ತು ಅವರ ಗರ್ಭದಲ್ಲಿರುವ ಮಕ್ಕಳಿಗೆ ಯಾವುದೇ ಅಪಾಯ ಉಂಟಾಗುವುದಿಲ್ಲ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಿಗೆ ಲಸಿಕೆ- ಇನ್ನಷ್ಟು ಪ್ರಯೋಗದ ಅಗತ್ಯ 'ಸೂಕ್ತ ದಾಖಲೆಗಳು ದೊರಕುವವರೆಗೂ ಮಕ್ಕಳಿಗೆ ಲಸಿಕೆ ನೀಡುವುದು ಚರ್ಚಾಸ್ಪದ ಸಂಗತಿಯಾಗಿರುತ್ತದೆ. ಪ್ರಸ್ತುತ ಒಂದೇ ಒಂದು ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೂ ಲಸಿಕೆ ಬೇಕಾಗುತ್ತದೆಯೇ ಎನ್ನುವುದು ಈಗಲೂ ಇರುವ ಪ್ರಶ್ನೆ. ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ನಮಗೆ ಸಾಕಷ್ಟು ದಾಖಲೆಗಳು ಲಭ್ಯವಾಗುವವರೆಗೂ ದೊಡ್ಡ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಸ್ಥಿತಿಯಲ್ಲಿ ನಾವಿಲ್ಲ' ಎಂದು ಬಲರಾಮ್ ಭಾರ್ಗವ ತಿಳಿಸಿದ್ದಾರೆ. 'ಆದರೂ ನಾವು 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗದ ಅಧ್ಯಯನ ಆರಂಭಿಸಿದ್ದೇವೆ. ಸೆಪ್ಟೆಂಬರ್ ವೇಳೆಗೆ ನಮಗೆ ಫಲಿತಾಂಶ ಸಿಗಲಿದೆ' ಎಂದು ಹೇಳಿದ್ದಾರೆ. ಮಹಾರಾಷ್ಟ್ರ ದಾಖಲೆದೇಶದಲ್ಲಿ ಮೂರು ಕೋಟಿ ಡೋಸ್ ಲಸಿಕೆಗಳನ್ನು ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಜನವರಿ 16ರಂದು ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತ ಬಳಿಕ ಮಹಾರಾಷ್ಟ್ರ ಮೂರು ಕೋಟಿ ಡೋಸ್ ಲಸಿಕೆಗಳನ್ನು ನೀಡಿದೆ.