ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಕೊಂಚ ಚೇತರಿಕೆ: ಟಾಪ್ 10 ಡಿಜಿಟಲ್ ಕರೆನ್ಸಿಗಳ ಮೌಲ್ಯ ಎಷ್ಟು?
ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಕೊಂಚ ಚೇತರಿಕೆ: ಟಾಪ್ 10 ಡಿಜಿಟಲ್ ಕರೆನ್ಸಿಗಳ ಮೌಲ್ಯ ಎಷ್ಟು?
ಇತ್ತೀಚೆಗೆ ಭಾರೀ ಕುಸಿತ ಕಂಡಿದ್ದ ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಚೇತರಿಕೆ ಕಂಡಿದೆ. ವಿಶ್ವದ ಟಾಪ್ 10 ಕ್ರಿಪ್ಟೋಕರೆನ್ಸಿಗಳ ಪೈಕಿ ಪೋಲ್ಕಾಡಾಟ್ ಮತ್ತು ಡಾಗಿಕಾಯಿನ್ಗಳ ತಲಾ ಶೇ.7ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ.
ಹೊಸದಿಲ್ಲಿ: ಇತ್ತೀಚೆಗೆ ಭಾರೀ ಕುಸಿತ ಕಂಡಿದ್ದ ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಚೇತರಿಕೆ ಕಂಡಿದೆ. ವಿಶ್ವದ ಟಾಪ್ 10 ಕ್ರಿಪ್ಟೋಕರೆನ್ಸಿಗಳ ಪೈಕಿ ಪೋಲ್ಕಾಡಾಟ್ ಮತ್ತು ಡಾಗಿಕಾಯಿನ್ಗಳ ತಲಾ ಶೇ.7ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ.
ಜಾಗತಿಕ ಮಾರುಕಟ್ಟೆ ಗಾತ್ರ 1.21 ಟ್ರಿಲಿಯನ್ ಡಾಲರ್ನಷ್ಟಿದ್ದು, ಕಳೆದ ಒಂದು ದಿನದಲ್ಲಿ ಶೇ.1.95ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಭಾರೀ ಚಂಚಲ ಉಂಟಾಗಿದೆ.
ಪ್ರತಿ 10 ಸಾಂಸ್ಥಿಕ ಹೂಡಿಕೆದಾರರಲ್ಲಿ 7 ಮಂದಿ ಹೂಡಿಕೆದಾರರು ಮೇಲೆ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಹೊಸ ಹೂಡಿಕೆದಾರರು ಬೆಲೆ ಅಸ್ಥಿರತೆ ಕಂಡು ಹೂಡಿಕೆ ಮಾಡಲು ಭಯಪಡುತ್ತಿದ್ದಾರೆ ಎಂದು ಫಿಡೆಲಿಟಿ ಕ್ರಿಪ್ಟೋಕರೆನ್ಸಿ ಬಿಜಿನೆಸ್ ಫೌಂಡ್ ಅಧ್ಯಯನ ತಿಳಿಸಿದೆ.
ಕೆಲವು ಪ್ರಮುಖ ಬಿಟ್ಕಾಯಿನ್ಗಳ ಮೌಲ್ಯ ಬುಧವಾರವೂ ಇಳಿಕೆಯಾಗಿದೆ. ಈಥರ್ ಮತ್ತು ಬಿಟ್ಕಾಯಿನ್ಗಳು ತಮ್ಮ ಸರಾಸರಿ ಮೌಲ್ಯಕ್ಕಿಂತಲೂ ಕೆಳಗಿಳಿದಿವೆ.
ಇತ್ತೀಚೆಗಷ್ಟೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ವಲಯದಲ್ಲಿ ದಿಜಿಟಲ್ ಕರೆನ್ಸಿ ಕುರತಂತೆಯೇ ಅಸಮಾಧಾನ ವ್ಯಕ್ತವಾಗಿತ್ತು. ಇಥೆರಿಯಂನ ಸಹಸಂಸ್ಥಾಪಕರಾದ ಆಂಟೋನಿ ಡಿ ಲೋರಿಯೋ ಅವರು ಕ್ರಿಪ್ಟೋಕರೆನ್ಸಿ ಉದ್ಯಮವನ್ನೇ ತೊರೆಯುವುದಾಗಿ ಹೇಳಿಕೆ ನೀಡಿದ್ದರು. ಕಾಕತಾಳೀಯ ಎಂಬಂತೆ ಕ್ರಿಪ್ಟೋಕರೆನ್ಸಿ ಮೌಲ್ಯ ಕೂಡ ಸತತವಾಗಿ ಇಳಿಕೆ ಕಾಣುತ್ತಿದೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಜುಲೈ 21ರಂದು ಅವುಗಳ ಮೌಲ್ಯ ಹೀಗಿದೆ