ಎಸ್‌ಬಿಐ ಗ್ರಾಹಕರು ಕೆವೈಸಿ ಅಪ್‌ಡೇಟ್ ಮಾಡಲು ಮೇ 31 ಕಡೆಯ ದಿನ

ದೇಶದ ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಮಹತ್ವದ ಸುದ್ದಿ ಇದು. ಇದೇ ಮೇ 31ರೊಳಗೆ ಎಸ್‌ಬಿಐ ಗ್ರಾಹಕರು ಕೆವೈಸಿ ಅಪ್‌ಡೇಟ್‌ ಮಾಡುವಂತೆ ಬ್ಯಾಂಕ್‌ ತಿಳಿಸಿದೆ.

ಎಸ್‌ಬಿಐ ಗ್ರಾಹಕರು ಕೆವೈಸಿ ಅಪ್‌ಡೇಟ್ ಮಾಡಲು ಮೇ 31 ಕಡೆಯ ದಿನ
Linkup
ಮುಂಬಯಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಮಹತ್ವದ ಸುದ್ದಿ ಇದು. ಇದೇ ಮೇ 31ರೊಳಗೆ ಗ್ರಾಹಕರು ಅಪ್‌ಡೇಟ್‌ ಮಾಡುವಂತೆ ಬ್ಯಾಂಕ್‌ ತಿಳಿಸಿದೆ. ಅಂತಿಮ ದಿನಾಂಕದೊಳಗೆ ಕೆವೈಸಿ ಮಾಡದೇ ಹೋದರೆ, ಖಾತೆ ನಿಷ್ಕ್ರಿಯವಾಗುತ್ತದೆ. ಕೋವಿಡ್‌ ಹಿನ್ನೆಲೆಯ ಲಾಕ್‌ಡೌನ್‌ ಮತ್ತು ಇತರ ನಿರ್ಬಂಧಗಳಿಂದ ಬ್ಯಾಂಕಿಗೆ ಬರಲು ಅನೇಕ ಗ್ರಾಹಕರಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಅಂಚೆ ಅಥವಾ ಇಮೇಲ್‌ ಮೂಲಕವೂ ಗ್ರಾಹಕರು ತಮ್ಮ ಖಾತೆಗಳಿಗೆ ಕೆವೈಸಿಯನ್ನು ಅಪ್‌ಡೇಟ್‌ ಮಾಡಬಹುದು. ಬ್ಯಾಂಕ್‌ ಶಾಖೆಗೆ ನೇರವಾಗಿ ಭೇಟಿ ನೀಡಿ ಅಪ್‌ಡೇಟ್‌ ಮಾಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಟ್ವೀಟ್‌ ಮಾಡಿದೆ. ಗುರುತು, ವಿಳಾಸ, ಫೋನ್‌ ನಂಬರ್‌ ಸೇರಿದಂತೆ ಕೆವೈಸಿಯನ್ನು ಪೂರ್ಣಗೊಳಿಸದ ಗ್ರಾಹಕರು, ಕೂಡಲೇ ಅಪ್‌ಡೇಟ್‌ ಮಾಡಬೇಕು ಎಂದು ಬ್ಯಾಂಕ್‌ ಸೂಚಿಸಿದೆ. ಕೆವೈಸಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಬ್ಯಾಂಕ್‌ ಶಾಖೆಗೆ ಅಂಚೆ ಮೂಲಕ ತಲುಪಿಸಬಹುದು. ಇಲ್ಲವೇ, ಇ-ಮೇಲ್‌ ಮೂಲಕ ಸಾಫ್ಟ್‌ ಕಾಪಿಗಳನ್ನು ಕಳಿಸಬಹುದು. ಇವುಗಳನ್ನು ಅಂಗೀಕರಿಸುವಂತೆ ಎಸ್‌ಬಿಐ, ತನ್ನ ಅಧಿಕಾರಿಗಳಿಗೆ ಸಲಹೆ ನೀಡಿದೆ. ತಕ್ಷಣದಿಂದಲೇ ಇದು ಅನ್ವಯವಾಗಿದೆ. ಬೇರೆ ಬ್ಯಾಂಕ್‌ಗಳೂ ಈ ಪದ್ಧತಿಯನ್ನು ಅನುಸರಿಸುವ ಸಾಧ್ಯತೆ ಇದೆ.