ಈಶಾನ್ಯ ರಾಜ್ಯದ್ದು ಎಂದುಕೊಂಡಿದ್ದ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ!: ಬಾಂಗ್ಲಾದೇಶದ ಗುಂಪಿನ ಅಮಾನುಷ ಕೃತ್ಯ ಬಯಲು

ಮಹಿಳೆಯೊಬ್ಬರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅದು ಈಶಾನ್ಯ ರಾಜ್ಯದಲ್ಲಿ ನಡೆದ ಘಟನೆ ಎಂದು ಭಾವಿಸಲಾಗಿತ್ತು. ಆದರೆ ಅದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನುವುದು ಬಯಲಾಗಿದೆ.

ಈಶಾನ್ಯ ರಾಜ್ಯದ್ದು ಎಂದುಕೊಂಡಿದ್ದ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ!: ಬಾಂಗ್ಲಾದೇಶದ ಗುಂಪಿನ ಅಮಾನುಷ ಕೃತ್ಯ ಬಯಲು
Linkup
ಬೆಂಗಳೂರು: ಈಶಾನ್ಯ ರಾಜ್ಯವೊಂದರಲ್ಲಿ ನಡೆದ ಘಟನೆ ಎಂದು ಭಾವಿಸಲಾಗಿದ್ದದ್ದ ಲೈಂಗಿಕ ದೌರ್ಜನ್ಯದ ಹೇಯ ಕೃತ್ಯವು ಬೆಂಗಳೂರಿನಲ್ಲಿಯೇ ನಡೆದಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ನಗರದ ರಾಮಮೂರ್ತಿ ನಗರದಲ್ಲಿ ಮಹಿಳೆಯೊಬ್ಬರನ್ನು ಹಿಂಸಿಸಿ ಸಾಮೂಹಿಕ ಮಾಡಿದ ಪ್ರಕರಣದಲ್ಲಿ ಮಹಿಳೆಯೊಬ್ಬಳು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಒಟ್ಟು ಆರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಅಪರಾಧ ನಡೆದ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗಳನ್ನು ಘಟನೆಯ ಮರುಸೃಷ್ಟಿಗಾಗಿ ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಆರೋಪಿಗಳು ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಎಸ್ ಡಿ ತಿಳಿಸಿದ್ದಾರೆ. ಮಹಿಳೆಯೊಬ್ಬರನ್ನು ಆರು ಮಂದಿ ಆರೋಪಿಗಳು ಅಮಾನುಷವಾಗಿ ಹಿಂಸಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಈಶಾನ್ಯ ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಾಗಾಲ್ಯಾಂಡ್‌ ಮೂಲದ ಮಹಿಳೆಯೊಬ್ಬರು ರಾಜಸ್ಥಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಡಿಯೋ ಅದೇ ಘಟನೆಯದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬರೆದುಕೊಂಡಿದ್ದರು. ಆದರೆ ಈ ವಿಡಿಯೋದಲ್ಲಿರುವ ಮಹಿಳೆ ನಾಗಾಲ್ಯಾಂಡ್ ಮೂಲದ ಮಹಿಳೆಯಲ್ಲಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು. ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಅದರ ಮೂಲ ಕೂಡ ಪತ್ತೆಯಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಬೆಂಗಳೂರಿನಲ್ಲಿ ಸುಮಾರು ಆರು ದಿನಗಳ ಹಿಂದೆ ಈ ವಿಡಿಯೋ ಚಿತ್ರಿಸಲಾಗಿದೆ ಎನ್ನಲಾಗಿದೆ. ಈ ಗುಂಪು ಬಾಂಗ್ಲಾದೇಶದಿಂದ ಬಂದಿದ್ದು, ಸಂತ್ರಸ್ತೆ ಕೂಡ ಮಾನವ ಕಳ್ಳಸಾಗಣೆ ಮೂಲಕ ಭಾರತಕ್ಕೆ ಬಂದವಳಾಗಿದ್ದಾಳೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಜಗಳದ ವೇಳೆ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆ ಈಗ ಬೇರೆ ರಾಜ್ಯದಲ್ಲಿದ್ದು, ಆಕೆಯನ್ನು ಒತ್ತೆಹಚ್ಚಲು ತಂಡವೊಂದನ್ನು ಕಳುಹಿಸಲಾಗಿದೆ. ಆಕೆ ಪತ್ತೆಯಾದ ಕೂಡಲೇ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.