ಹನುಮ ಹುಟ್ಟಿದ್ದ ತಿರುಪತಿಯಲ್ಲಿ ಎನ್ನುತ್ತಿದೆ ಟಿಟಿಡಿ: ಕೊಪ್ಪಳದ 'ಅಂಜನಾದ್ರಿ' ಕಥೆ ಏನು..?

ರಾಮಾಯಣ, ಸ್ಕಂದ ಪುರಾಣ, ಬ್ರಹ್ಮಾಂಡ ಪುರಾಣ, ಪರಾಶರ ಸಂಹಿತೆ ಮುಂತಾದ ಗ್ರಂಥಗಳ ಆಧಾರದಿಂದ ಹನುಮಂತ ಹುಟ್ಟಿದ್ದು ಆಂಧ್ರಪ್ರದೇಶದ ತಿರುಮಲದಲ್ಲಿರುವ ಅಂಜನಾದ್ರಿಯಲ್ಲಿಯೇ ಎಂಬುದನ್ನು ಟಿಟಿಡಿಗೆ ವಿದ್ವಾಂಸರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಹನುಮ ಹುಟ್ಟಿದ್ದ ತಿರುಪತಿಯಲ್ಲಿ ಎನ್ನುತ್ತಿದೆ ಟಿಟಿಡಿ: ಕೊಪ್ಪಳದ 'ಅಂಜನಾದ್ರಿ' ಕಥೆ ಏನು..?
Linkup
ತಿರುಪತಿ: ರಾಮಭಕ್ತ ಹನುಮಂತನ ಜನ್ಮಸ್ಥಳದ ಬಗ್ಗೆ ಜಿಜ್ಞಾಸೆ ನಡುವೆಯೇ ತಿರುಪತಿ ದೇವಸ್ಥಾನಂ ಮಂಡಳಿ (), ತಿರುಮಲದಿಂದ 5 ಕಿ.ಮೀ. ದೂರದಲ್ಲಿರುವ 'ಜಪಾಲಿ ತೀರ್ಥಂ' ಬಳಿಯ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹನುಮಂತನ ಜನ್ಮಸ್ಥಳದ ಬಗ್ಗೆ ಅಧ್ಯಯನಕ್ಕಾಗಿ ಟಿಟಿಡಿ ನೇಮಿಸಿದ್ದ ಸಮಿತಿಯು ರಾಮನವಮಿಯಂದೇ ಹನುಮಂತನ ಜನಸ್ಥಳ ಅಂಜನಾದ್ರಿ ಎಂದು ಘೋಷಿಸಿದೆ. ತಮಿಳುಧಿನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಟಿಟಿಡಿ ಕಾರ್ಯಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ. ಮುರಳೀಧರ ಶರ್ಮಾ ನೇತೃತ್ವದ ಸಮಿತಿಯು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ಆಂಜನೇಯನ ಜನ್ಮಸ್ಥಳ ಕುರಿತಾದ ಶಾಸನ ಲಿಪಿ ಸಾಕ್ಷ್ಯಾಧಾರಗಳು, ವೈಜ್ಞಾನಿಕ ಮತ್ತು ಪೌರಾಣಿಕ ಪುರಾವೆಗಳನ್ನು ಒಳಗೊಂಡ 'ಶ್ರೀ ಆಂಜನೇಯ ಸ್ವಾಮಿ ವಾರಿ ಜನ್ಮಸ್ಥಳಂ ತಿರುಮಲಲೋನಿ ಅಂಜನಾದ್ರಿ' ಹೆಸರಿನ 20 ಪುಟಗಳ ಕಿರು ಹೊತ್ತಿಗೆಯನ್ನೂ ಬಿಡುಗಡೆ ಮಾಡಲಾಗಿದೆ. ಇದೇ ದಾಖಲೆಯನ್ನು ಟಿಟಿಡಿ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್‌ ಮಾಡಲು ದೇವಸ್ವಂ ಮಂಡಳಿ ನಿರ್ಧರಿಸಿದೆ. ರಾಮನವಮಿ ಅಂಗವಾಗಿ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಮಲಕ್ಕೆ ಆಗಮಿಸಿದ್ದ ತ.ನಾಡು ರಾಜ್ಯಪಾಲ ಬನ್ವರಿಲಾಲ್‌ ಅವರು ಸಮಿತಿಯ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಹನುಮಂತನ ಜನ್ಮಸ್ಥಳ ಅಂಜನಾದ್ರಿ ಎಂದು ಸಾಬೀತುಪಡಿಸಿರುವ ವರದಿ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಪ್ರಕಾಶಂ ಜಿಲ್ಲೆಯ ವಿದ್ವಾಂಸ ಡಾ. ಅನ್ನದಾನಂ ಚಿದಂಬರ ಶಾಸ್ತ್ರಿಗಳ ನೆರವನ್ನೂ ಟಿಟಿಡಿ ಪಡೆದಿದೆ. ಇವರು 'ಆಂಧ್ರ ವಾಂಗ್ಮೇಯಂಲೋ-ಹನುಮತ್‌ ಕಥ' ಎಂಬ ವಿಷಯದಲ್ಲಿ 1972ರಿಂದ ಸಂಶೋಧನೆ ನಡೆಸಿದ್ದಾರೆ. ಹಲವಾರು ತಾಳೆಗರಿಗಳನ್ನು, ರಾಮಾಯಣ, ಸ್ಕಂದ ಪುರಾಣ, ಬ್ರಹ್ಮಾಂಡ ಪುರಾಣ, ಪರಾಶರ ಸಂಹಿತೆ ಮುಂತಾದ ಗ್ರಂಥಗಳ ಆಧಾರದಿಂದ ಹುಟ್ಟಿದ್ದು ಆಂಧ್ರಪ್ರದೇಶದ ತಿರುಮಲದಲ್ಲಿರುವ ಅಂಜನಾದ್ರಿಯಲ್ಲಿಯೇ ಎಂಬುದನ್ನು ಟಿಟಿಡಿಗೆ ಈ ವಿದ್ವಾಂಸರು ಮನವರಿಕೆ ಮಾಡಿಕೊಟ್ಟಿದ್ದಾರೆ. ವಿವಾದಗ್ರಸ್ಥವಾಗಿದೆ ಹನುಮ ಜನ್ಮ ಸ್ಥಳ..! ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿಕ ಕಿಶ್ಕಿಂದೆಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ಜನಿಸಿದ್ದ ಎಂದು ವಾದವಿದೆ. ಇದಕ್ಕಾಗಿ ಸಾಕ್ಷ್ಯಗಳನ್ನೂ ಸಂಗ್ರಹಿಸಿ ತಜ್ಞರು ನೀಡಿದ್ದಾರೆ. ಹಂಪಿ ವಿವಿಯ ಸಂಶೋಧಕರು ಹಾಗೂ ಇತಿಹಾಸಕಾರರು ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಸಾಕ್ಷ್ಯ ಸಮೇತ ವಾದ ಮಂಡಿಸಿದ್ದಾರೆ. ಇದಕ್ಕಾಗಿ ರಾಮಾಯಣವೇ ಸಾಕ್ಷ್ಯ ಎಂದು ಹೇಳಿದ್ದಾರೆ. ಅಲ್ಲದೆ ಪ್ರಚ್ಯವಸ್ತು ಸಂಶೋಧನೆಗಳ ಸಾಕ್ಷ್ಯವನ್ನೂ ಪ್ರಸ್ತಾಪಿಸಿದ್ದಾರೆ. ಇದಲ್ಲದೆ ದೇಶದ ಇನ್ನೂ 5 ರಾಜ್ಯಗಳು ತಮ್ಮಲ್ಲೇ ಹನುಮ ಹುಟ್ಟಿದ ಎಂದು ವಾದ ಮಂಡಿಸುತ್ತಿವೆ. ಹಾಗೂ ಆಂಧ್ರದ ಜೊತೆಯಲ್ಲೇ ಜಾರ್ಖಂಡ್, ಗುಜರಾತ್, ಹರಿಯಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳೂ ಹನುಮನ ಜನ್ಮಸ್ಥಳ ತಮ್ಮ ರಾಜ್ಯದಲ್ಲಿದೆ ಎಂದು ವಾದಿಸುತ್ತಿವೆ.