'ನಾನು ಅಂಡರ್‌ವರ್ಲ್ಡ್​ ಡಾನ್‌​ ಕಲಿ ಯೋಗೇಶ್‌': ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತನಿಗೆ ಕೊಲೆ ಬೆದರಿಕೆ

ಇಂಟರ್‌ನೆಟ್‌ ಕರೆ ಮಾಡಿದ್ದ ವ್ಯಕ್ತಿ ತಾನು ಅಂಡರ್‌​ವರ್ಲ್ಡ್ ಡಾನ್‌​ ಕಲಿ ಯೋಗೇಶ್‌​ ಎಂದು ಹೇಳಿಕೊಂಡು ಬೆದರಿಕೆ ಹಾಕಿದ್ದಾನೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

'ನಾನು ಅಂಡರ್‌ವರ್ಲ್ಡ್​ ಡಾನ್‌​ ಕಲಿ ಯೋಗೇಶ್‌': ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತನಿಗೆ ಕೊಲೆ ಬೆದರಿಕೆ
Linkup
ಬೆಂಗಳೂರು: ಭೂಗತ ಪಾತಕಿಯೊಬ್ಬ ಹಾಕಿದ್ದಾನೆ ಎಂದು ಸಾಮಾಜಿಕ ಹೋರಾಟಗಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂಟರ್‌ನೆಟ್‌ ಕರೆ ಮಾಡಿದ್ದ ವ್ಯಕ್ತಿ ತಾನು ಅಂಡರ್‌ವರ್ಲ್ಡ್ ಡಾನ್‌ ಕಲಿ ಯೋಗೇಶ್‌ ಎಂದು ಹೇಳಿಕೊಂಡು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಸಂಘಟನೆಯ ಅಧ್ಯಕ್ಷ , ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಕರೆ ಬಂದಿದೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇನೆ. ನಾನು ಅಂಡರ್‌ವರ್ಲ್ಡ್ ಡಾನ್‌ ಕಲಿ ಯೋಗೇಶ್‌, ನನ್ನ ಬಗ್ಗೆ ಗೊತ್ತಾಗಬೇಕಿದ್ದರೆ ಗೂಗಲ್‌ನಲ್ಲಿ ಸರ್ಚ್ ಮಾಡು ಎಂದು ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ವಾಯ್ಸ್‌ ಆಡಿಯೋ ಕ್ಲಿಪ್‌ನಲ್ಲಿ ಮುದ್ರಿತವಾಗಿದೆ. ಬೋಳ ಸೊಸೈಟಿಯಲ್ಲಿ ಅನ್ಯಾಯ ನಡೆದಿರುವುದರಿಂದ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಧ್ಯಪ್ರವೇಶಿಸಿದ್ದೇನೆ ಎಂದು ರವಿ ಶೆಟ್ಟಿ ಹೇಳಿಕೊಂಡಿದ್ದಕ್ಕೆ, ''ನೀನು ಸಮಾಜೋದ್ಧಾರಕ ಅಲ್ಲ, ಬೋಳ ಸೊಸೈಟಿ ತಂಟೆಗೆ ಹೋದರೆ ಹುಡುಗರನ್ನು ಕಳಿಸಿ ಕಾಡಿನೊಳಗೆ ಹೊಡೆಸಿ ಬಿಡುತ್ತೇನೆ'' ಎಂದು ದೂರಿರುವ ರವಿ ಶೆಟ್ಟಿ, ರಕ್ಷಣೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ. ==================== ಮಾದಕ ವಸ್ತು ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ! : ಕೋವಿಡ್‌ನಿಂದ ಲಗ್ನ ಪತ್ರಿಕೆಗಳ ಪ್ರಿಂಟ್‌ ಮಾಡುವ ಕೆಲಸ ಸ್ಥಗಿತಗೊಂಡ ಪರಿಣಾಮ ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿರುವ ಹಲಸೂರು ಪೊಲೀಸರು, ಆತನಿಂದ 2.6 ಕೆ.ಜಿ. ಅಫೀಮು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಬುದ್ಧರಾಮ್‌ ಬಂಧಿತ. ಆರೋಪಿಯಿಂದ 2.6 ಕೆ.ಜಿ. ಅಫೀಮು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಸೆ. 20ರಂದು ಹಲಸೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯ ಆಟದ ಮೈದಾನ ಸಮೀಪ ಬುದ್ಧರಾಮ್‌ ಮಾದಕ ವಸ್ತು ಅಫೀಮು ಮಾರಾಟದಲ್ಲಿ ತೊಡಗಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಹಲಸೂರು ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಲಗ್ನ ಪತ್ರಿಕೆಯ ಪ್ರಿಂಟಿಂಗ್‌ ಡಿಸೈನರ್‌: ಆರೋಪಿ ಬುದ್ಧರಾಮ್‌ ಈ ಹಿಂದೆ ರಾಜಸ್ಥಾನದಿಂದ ಬಂದು ನಗರ್ತರಪೇಟೆಯಲ್ಲಿಲಗ್ನಪತ್ರಿಕೆ ಪ್ರಿಂಟಿಂಗ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ. ಕೋವಿಡ್‌ನಿಂದಾಗಿ ಪ್ರಿಂಟಿಂಗ್‌ ಪ್ರೆಸ್‌ ಮುಚ್ಚಿದ ಕಾರಣ ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟಕ್ಕಿಳಿದಿದ್ದ ಎಂದು ಪೊಲೀಸರು ತಿಳಿಸಿದರು.