ಶಟ್ಲರ್ ಲಕ್ಷ್ಯ ಸೇನ್ ವಿರುದ್ಧದ ಪ್ರಕರಣ; ಮುಂದಿನ ವಿಚಾರಣೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್

ಲಕ್ಷ್ಯ ಸೇನ್ ಅವರು ವಯಸ್ಸಿನ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ನಗರದ ಪೊಲೀಸರು ಶಟ್ಲರ್ ಲಕ್ಷ್ಯ ಸೇನ್ ಮತ್ತು ಕೋಚ್ ಯು. ವಿಮಲ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಸಂಬಂಧ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆನೀಡಿದೆ. ಬೆಂಗಳೂರು: ದೂರುದಾರರು ತಮಗೆ ಕಿರುಕುಳ ನೀಡಲು ಮತ್ತು ತಮ್ಮ ಖ್ಯಾತಿಗೆ ಕಳಂಕ ತರಲು ಕ್ಷುಲ್ಲಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದು, ಲಕ್ಷ್ಯ ಸೇನ್ ಅವರು ವಯಸ್ಸಿನ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ನಗರದ ಪೊಲೀಸರು ಶಟ್ಲರ್ ಲಕ್ಷ್ಯ ಸೇನ್ ಮತ್ತು ಕೋಚ್ ಯು. ವಿಮಲ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಸಂಬಂಧ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆನೀಡಿದೆ. ಹೈಗ್ರೌಂಡ್ ಪೊಲೀಸರು ಸಲ್ಲಿಸಿದ್ದ ಎಫ್‌ಐಆರ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರ ರಜಾಕಾಲದ ಪೀಠವು ವಿಚಾರಣೆಗೆ ತಡೆ ನೀಡಿದೆ. ಮುದ್ದನಪಾಳ್ಯದ ನಿವಾಸಿ ನಾಗರಾಜ ಎಂ.ಜಿ ಎಂಬುವವರು ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ವಯಸ್ಸಿನ ಸುಳ್ಳು ಮಾಹಿತಿ: ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ವಿರುದ್ಧ ಕೇಸು ದಾಖಲು ಧೀರೇಂದ್ರ ಕುಮಾರ್ ಸೇನ್ ಮತ್ತು ನಿರ್ಮಲಾ ಸೇನ್ ತಮ್ಮ ಜನನ ಪ್ರಮಾಣಪತ್ರದಲ್ಲಿ ಚಿರಾಗ್ ಮತ್ತು ಲಕ್ಷ್ಯ ಸೇನ್ ಅವರ ಜನ್ಮ ದಿನಾಂಕವನ್ನು ನಕಲು ಮಾಡಿದ್ದಾರೆ. ಇದಾದ ನಂತರ, ಸೇನ್ ಅನೇಕ ಪಂದ್ಯಾವಳಿಗಳಲ್ಲಿ ಗೆದ್ದಿದ್ದಾರೆ ಮತ್ತು ವಿವಿಧ ಸರ್ಕಾರಿ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಶಟ್ಲರ್ ಲಕ್ಷ್ಯ ಸೇನ್ ವಿರುದ್ಧದ ಪ್ರಕರಣ; ಮುಂದಿನ ವಿಚಾರಣೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್
Linkup
ಲಕ್ಷ್ಯ ಸೇನ್ ಅವರು ವಯಸ್ಸಿನ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ನಗರದ ಪೊಲೀಸರು ಶಟ್ಲರ್ ಲಕ್ಷ್ಯ ಸೇನ್ ಮತ್ತು ಕೋಚ್ ಯು. ವಿಮಲ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಸಂಬಂಧ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆನೀಡಿದೆ. ಬೆಂಗಳೂರು: ದೂರುದಾರರು ತಮಗೆ ಕಿರುಕುಳ ನೀಡಲು ಮತ್ತು ತಮ್ಮ ಖ್ಯಾತಿಗೆ ಕಳಂಕ ತರಲು ಕ್ಷುಲ್ಲಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದು, ಲಕ್ಷ್ಯ ಸೇನ್ ಅವರು ವಯಸ್ಸಿನ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ನಗರದ ಪೊಲೀಸರು ಶಟ್ಲರ್ ಲಕ್ಷ್ಯ ಸೇನ್ ಮತ್ತು ಕೋಚ್ ಯು. ವಿಮಲ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಸಂಬಂಧ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆನೀಡಿದೆ. ಹೈಗ್ರೌಂಡ್ ಪೊಲೀಸರು ಸಲ್ಲಿಸಿದ್ದ ಎಫ್‌ಐಆರ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರ ರಜಾಕಾಲದ ಪೀಠವು ವಿಚಾರಣೆಗೆ ತಡೆ ನೀಡಿದೆ. ಮುದ್ದನಪಾಳ್ಯದ ನಿವಾಸಿ ನಾಗರಾಜ ಎಂ.ಜಿ ಎಂಬುವವರು ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ವಯಸ್ಸಿನ ಸುಳ್ಳು ಮಾಹಿತಿ: ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ವಿರುದ್ಧ ಕೇಸು ದಾಖಲು ಧೀರೇಂದ್ರ ಕುಮಾರ್ ಸೇನ್ ಮತ್ತು ನಿರ್ಮಲಾ ಸೇನ್ ತಮ್ಮ ಜನನ ಪ್ರಮಾಣಪತ್ರದಲ್ಲಿ ಚಿರಾಗ್ ಮತ್ತು ಲಕ್ಷ್ಯ ಸೇನ್ ಅವರ ಜನ್ಮ ದಿನಾಂಕವನ್ನು ನಕಲು ಮಾಡಿದ್ದಾರೆ. ಇದಾದ ನಂತರ, ಸೇನ್ ಅನೇಕ ಪಂದ್ಯಾವಳಿಗಳಲ್ಲಿ ಗೆದ್ದಿದ್ದಾರೆ ಮತ್ತು ವಿವಿಧ ಸರ್ಕಾರಿ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಶಟ್ಲರ್ ಲಕ್ಷ್ಯ ಸೇನ್ ವಿರುದ್ಧದ ಪ್ರಕರಣ; ಮುಂದಿನ ವಿಚಾರಣೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್