ಹಾಕಿ ವಿಶ್ವಕಪ್: ಭಾರತ ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಆಯ್ಕೆ

ಒಡಿಶಾದಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 18 ಸದಸ್ಯರ ಭಾರತ ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ನವದೆಹಲಿ: ಒಡಿಶಾದಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 18 ಸದಸ್ಯರ ಭಾರತ ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಡಿಫೆಂಡರ್ ಅಮಿತ್ ರೋಹಿದಾಸ್ ಹರ್ಮನ್‌ಪ್ರೀತ್ ಉಪನಾಯಕರಾಗಿ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಹರ್ಮನ್‌ಪ್ರೀತ್ ನಾಯಕತ್ವ ವಹಿಸಿದ್ದರು. ಆತಿಥೇಯ ಆಸ್ಟ್ರೇಲಿಯಾ 4-1 ರಿಂದ ಜಯಿಸಿತ್ತು.
ಇದನ್ನು ಓದಿ: ಕ್ರೀಡೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಸಾವಿನ ಸುದ್ದಿ ನ್ಯೂಸ್ ಚಾನಲ್‌ನಲ್ಲಿ ನೋಡಿ ಕುಸಿದುಬಿದ್ದ ತಂದೆ!
ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು ಮತ್ತು ಅಲ್ಲಿ ಭಾರತ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಅವರು ನಾಯಕನನ್ನು ಬದಲಾಯಿಸಿದ್ದು, ಹರ್ಮನ್‌ಪ್ರೀತ್ ಸಿಂಗ್ ಗೆ ನಾಯಕತ್ವದ ಹೊಣೆ ನೀಡಿದ್ದಾರೆ.
ಟೋಕಿಯೊ ಒಲಿಂಪಿಕ್ ತಂಡದ ಭಾಗವಾಗಿದ್ದ ಗುರ್ಜಂತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್ ಮುಖ್ಯ ತಂಡದ ಭಾಗವಾಗಿಲ್ಲ. ಆದರೆ ವಿಶ್ವಕಪ್ ತಂಡದೊಂದಿಗೆ ಸ್ಟ್ಯಾಂಡ್‌ಬೈಸ್‌ನಲ್ಲಿ ಇರುತ್ತಾರೆ.
"ಪ್ರಸ್ತುತ ಆಟಗಾರರ ಫಾರ್ಮ್ ಮತ್ತು ಆಟಗಾರರ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಬೇರೆ ಯಾವುದೇ ಮಾನದಂಡಗಳನ್ನು ಅನುಸರಿಸಿಲ್ಲ" ಎಂದು ಹಾಕಿ ಇಂಡಿಯಾ ಆಯ್ಕೆದಾರರು ಹೇಳಿದ್ದಾರೆ.
ಒಡಿಶಾದಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 18 ಸದಸ್ಯರ ಭಾರತ ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ನವದೆಹಲಿ: ಒಡಿಶಾದಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 18 ಸದಸ್ಯರ ಭಾರತ ತಂಡದ ನಾಯಕರಾಗಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಡಿಫೆಂಡರ್ ಅಮಿತ್ ರೋಹಿದಾಸ್ ಹರ್ಮನ್‌ಪ್ರೀತ್ ಉಪನಾಯಕರಾಗಿ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಹರ್ಮನ್‌ಪ್ರೀತ್ ನಾಯಕತ್ವ ವಹಿಸಿದ್ದರು. ಆತಿಥೇಯ ಆಸ್ಟ್ರೇಲಿಯಾ 4-1 ರಿಂದ ಜಯಿಸಿತ್ತು.
ಇದನ್ನು ಓದಿ:ಕ್ರೀಡೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಸಾವಿನ ಸುದ್ದಿ ನ್ಯೂಸ್ ಚಾನಲ್‌ನಲ್ಲಿ ನೋಡಿ ಕುಸಿದುಬಿದ್ದ ತಂದೆ!