ಶುಕ್ರವಾರ ಮಹತ್ವದ ಎಲ್‌ಐಸಿ ಮಂಡಳಿ ಸಭೆ, ಬೃಹತ್‌ LIC IPOಗೆ ವೇದಿಕೆ ಸಜ್ಜು

ಶುಕ್ರವಾರ ಸಭೆ ಸೇರಲಿರುವ ಭಾರತೀಯ ಜೀವ ವಿಮಾ ನಿಗಮದ ಆಡಳಿತ ಮಂಡಳಿಯು ಸಂಸ್ಥೆಯ ಪ್ರಸ್ತಾವಿತ ಷೇರು ಮಾರುಕಟ್ಟೆ ಪ್ರವೇಶದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈ ಮೂಲಕ ದೇಶದ ಅತಿದೊಡ್ಡ ಆರಂಭಿಕ ಸಾರ್ವಜನಿಕ ಷೇರು ಕೊಡುಗೆಗೆ ವೇದಿಕೆ ಸಿದ್ಧವಾಗಿದೆ.

ಶುಕ್ರವಾರ ಮಹತ್ವದ ಎಲ್‌ಐಸಿ ಮಂಡಳಿ ಸಭೆ, ಬೃಹತ್‌ LIC IPOಗೆ ವೇದಿಕೆ ಸಜ್ಜು
Linkup
ಹೊಸದಿಲ್ಲಿ: ()ಯ ಆಡಳಿತ ಮಂಡಳಿ ಶುಕ್ರವಾರ ಸಭೆ ಸೇರಲಿದ್ದು, ಸಂಸ್ಥೆಯ ಪ್ರಸ್ತಾವಿತ ಷೇರು ಮಾರುಕಟ್ಟೆ ಪ್ರವೇಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ಮೂಲಕ ದೇಶದ ಅತಿದೊಡ್ಡ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ()ಗೆ ವೇದಿಕೆ ಸಿದ್ಧವಾಗಲಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತಾವಿತ ಐಪಿಒಗಾಗಿ ಡ್ರಾಫ್ಟ್‌ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಮಂಡಳಿಯ ಅನುಮೋದನೆಯ ನಂತರ ಸಲ್ಲಿಸಲಾಗುತ್ತದೆ. "ಮುಂಬರುವ ಐಪಿಒದಲ್ಲಿ ಪಾಲಿಸಿದಾರರಿಗೆ ಎಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂಬುದು ಕೂಡ ಶುಕ್ರವಾರದ ಸಭೆಯಲ್ಲಿ ನಿರ್ಧಾರವಾಗಲಿದೆ,” ಎಂದು ಈ ಬಗ್ಗೆ ತಿಳಿದಿರುವ ಇನ್ನೋರ್ವ ವ್ಯಕ್ತಿ ಹೇಳಿದ್ದಾರೆ. ವಿಮಾ ನಿಯಂತ್ರಕರು ಷೇರು ಮಾರುಕಟ್ಟೆ ಪ್ರವೇಶಕ್ಕೆ ತಮ್ಮ ಅನುಮತಿಯನ್ನು ನೀಡಿದ್ದು, ಈ ಕುರಿತು ಔಪಚಾರಿಕ ಒಪ್ಪಿಗೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ದೇಶದ ಅತಿದೊಡ್ಡ ಜೀವ ವಿಮಾ ಕಂಪನಿಯು ತನ್ನ ಪಾಲಿಸಿದಾರರಿಗೆ ಐಪಿಒದಲ್ಲಿ ಶೇ. 5ರಷ್ಟು ರಿಯಾಯಿತಿಯನ್ನು ನೀಡುವ ಸಾಧ್ಯತೆ ಇದೆ. ಜತೆಗೆ ಐಪಿಒದಲ್ಲಿ ಶೇ. 10ರಷ್ಟು ಷೇರುಗಳನ್ನು ಪಾಲಿಸಿದಾರರಿಗೆ ಮೀಸಲಾಗಿರಿಸುವ ಸಾಧ್ಯತೆಯೂ ಇದೆ. ಸರ್ಕಾರವು ಅದರ ಮೌಲ್ಯಮಾಪನವನ್ನು ಅವಲಂಬಿಸಿ ಎಲ್‌ಐಸಿಯ ಸುಮಾರು ಶೇ. 5-10ರಷ್ಟು ಷೇರನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಕಳೆದ ವಾರ ಬಜೆಟ್ ನಂತರದ ಸಂವಾದದಲ್ಲಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರು ವಾರದೊಳಗೆ 'ಡಿಆರ್‌ಎಚ್‌ಪಿ' ಅನ್ನು ಸಲ್ಲಿಸಲಾಗುವುದು ಎಂದು ‘ಇಟಿ’ಗೆ ತಿಳಿಸಿದ್ದರು. ಹೂಡಿಕೆ ಹಿಂತೆಗೆತದ ಮೇಲೆ ಸರಕಾರದ ಕಣ್ಣು ಸದ್ಯದಲ್ಲೇ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಸಾಕಷ್ಟು ಹೊಸ ಹೂಡಿಕೆದಾರರನ್ನು ಎಳೆದು ತರಲಿದೆ ಎಂದು ತುಹಿನ್ ಕಾಂತಾ ಪಾಂಡೆ ಹೇಳಿದ್ದಾರೆ. ಡಿಆರ್‌ಎಚ್‌ಪಿ ಸಲ್ಲಿಸಿದ ನಂತರ ಶೀಘ್ರವೇ ಕೊಡುಗೆ ಬೆಲೆ ನಿಗದಿಪಡಿಸುವ ನಿರೀಕ್ಷೆಯಿದೆ. ಈ ಆರ್ಥಿಕ ವರ್ಷದೊಳಗೆ ಎಲ್‌ಐಸಿಯನ್ನು ಷೇರುಪೇಟೆಗೆ ಎಳೆದು ತರಲು ಸರಕಾರ ಉತ್ಸುಕವಾಗಿದೆ. ಕಳೆದ ವಾರ ಘೋಷಿಸಿದ 2023ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ, ಸರ್ಕಾರವು 65,000 ಕೋಟಿ ರೂ. ಹೂಡಿಕೆ ಹಿಂತೆಗೆತದ ಗುರಿಯನ್ನು ಘೋಷಿಸಿತ್ತು. ಇದೇ ವೇಳೆ ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು 1.75 ಲಕ್ಷ ಕೋಟಿ ರೂ.ನಿಂದ 78,000 ಕೋಟಿ ರೂ.ಗೆ ಇಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ಮಾರಾಟದ ಮೂಲಕ ಇಲ್ಲಿಯವರೆಗೆ 12,029 ಕೋಟಿ ರೂ. ಸಂಗ್ರಹಿಸಲಾಗಿದೆ. ಎಲ್‌ಐಸಿ ಐಪಿಒ ಭಾರತದಲ್ಲಿ ಇದುವರೆಗೆ ನಡೆದ ಸಾರ್ವಜನಿಕ ಆರಂಭಿಕ ಷೇರು ಕೊಡುಗೆಗಳಲ್ಲೇ ಅತ್ಯಂತ ದೊಡ್ಡದಾಗಿದ್ದು, ಇದರಿಂದ ಸರ್ಕಾರ ತನ್ನ ಹೂಡಿಕೆ ಹಿಂತೆಗೆತ ಗುರಿಯನ್ನು ತಲುಪುವ ನಿರೀಕ್ಷೆ ಇದೆ. ವಿದೇಶಿ ಹೂಡಿಕೆದಾರರೂ ಐಪಿಒದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈ ಸಂಬಂಧ ಸರಕಾರ ವಿದೇಶಿ ನೇರ ಹೂಡಿಕೆ ನಿಯಮಗಳಲ್ಲಿ ಬದಲಾವಣೆ ಮಾಡಲು ಉದ್ದೇಶಿಸಿದೆ. ಎಲ್ಐಸಿ ಕಾಯಿದೆಯ ಪ್ರಕಾರ ವಿದೇಶಿ ಹೂಡಿಕೆದಾರರು ಕಂಪನಿಯಲ್ಲಿ ಹೂಡಿಕೆ ಮಾಡುವಂತಿಲ್ಲ. ಮತ್ತು ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ಯಾವುದೇ ಷೇರುದಾರರು ಗರಿಷ್ಠ ಶೇ. 5ರಷ್ಟು ಪಾಲನ್ನು ಮಾತ್ರ ಹೊಂದಬಹುದಾಗಿದೆ. ಎಲ್‌ಐಸಿ ಷೇರು ಕೊಡುಗೆಯನ್ನು ನಿರ್ವಹಿಸಲು ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್, ಜೆಪಿ ಮೋರ್ಗಾನ್ ಚೇಸ್ ಆಂಡ್‌ ಕೋ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಸೇರಿ 10 ಮರ್ಚೆಂಟ್ ಬ್ಯಾಂಕರ್‌ಗಳನ್ನು ಸರ್ಕಾರ ನೇಮಿಸಿದೆ. ಆಕ್ಚುರಿಯಲ್ ಸಂಸ್ಥೆ ಮಿಲಿಮನ್ ಅಡ್ವೈಸರ್ಸ್ ಎಲ್‌ಎಲ್‌ಪಿ ಇಂಡಿಯಾವು ಎಲ್‌ಐಸಿಯ ಎಂಬೆಡೆಡ್ ಮೌಲ್ಯವನ್ನು ನಿರ್ಣಯಿಸುವಲ್ಲಿ ನಿರತವಾಗಿದೆ. ಡೆಲಾಯ್ಟ್ ಮತ್ತು ಎಸ್‌ಬಿಐ ಕ್ಯಾಪ್ಸ್‌ಗಳನ್ನು ಐಪಿಒ ಪೂರ್ವ ವಹಿವಾಟು ಸಲಹೆಗಾರರಾಗಿ ನೇಮಿಸಲಾಗಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಳೆದ ವರ್ಷದ ಜುಲೈನಲ್ಲಿ ಎಲ್‌ಐಸಿಯ ಐಪಿಒ ಪ್ರಸ್ತಾವನೆಗೆ ಅನುಮತಿ ನೀಡಿತ್ತು. ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.