ಶಾಕಿಂಗ್‌: ಅತ್ಯಾಚಾರದಿಂದ ಗರ್ಭ ಧರಿಸಿದ್ದ ಕೇರಳದ ಬಾಲಕಿಗೆ ಶೌಚಾಲಯದಲ್ಲಿ ಅವಧಿ ಪೂರ್ವ ಹೆರಿಗೆ !

ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಬಾಲಕಿ ಶೌಚಾಲಯಕ್ಕೆ ತೆರಳಿದ್ದಳು. ಅಲ್ಲಿಯೇ ಅರೆಬೆಳೆದ ಭ್ರೂಣಕ್ಕೆ ಜನ್ಮ ನೀಡಿದ್ದಳು. ನಂತರ ಗಾಬರಿಯಿಂದ ಆ ಭ್ರೂಣವನ್ನು ಶೌಚಾಯಲದ ಒಳಗೆ ಹಾಕಿ, ನೀರು ಸುರಿದು ಬಂದು ತಾಯಿ ಜತೆ ಕುಳಿತಿದ್ದಳು. ತನಗೆ ಆದ ಗರ್ಭಪಾತದ ಬಗ್ಗೆ ಏನನ್ನೂ ಹೇಳದೆ ಆಕೆ ವೈದ್ಯರಿಗಾಗಿ ಕಾಯ್ದು ಕುಳಿತಿದ್ದಳು. ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಶಾಕಿಂಗ್‌: ಅತ್ಯಾಚಾರದಿಂದ ಗರ್ಭ ಧರಿಸಿದ್ದ ಕೇರಳದ ಬಾಲಕಿಗೆ ಶೌಚಾಲಯದಲ್ಲಿ ಅವಧಿ ಪೂರ್ವ ಹೆರಿಗೆ !
Linkup
ಕೊಚ್ಚಿ: ಇಪ್ಪತ್ತು ವರ್ಷದ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ್ದ ಬಾಲಕಿಯೊಬ್ಬಳು, ಆರೋಗ್ಯ ತಪಾಸಣೆ ವೇಳೆ ಆಸ್ಪತ್ರೆಯ ಶೌಚಾಲಯದಲ್ಲಿಯೇ ಅವಧಿ ಪೂರ್ವ ಶಿಶುವಿಗೆ ಜನ್ಮ ನೀಡಿ, ಮೃತ ಶಿಶುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ ತನ್ನ ತಾಯಿಯ ಜತೆಗೂಡಿ ಕೇರಳದ ವಾಯನಾಡ್‌ನ ಖಾಸಗಿ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಮಾಡಿಸಲು ಬಂದಿದ್ದಳು. ವೈದ್ಯರಿಗಾಗಿ ಕಾಯುತ್ತ ಕುಳಿತಿದ್ದ ಸಂದರ್ಭದಲ್ಲಿಯೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಬಾಲಕಿ ಶೌಚಾಲಯಕ್ಕೆ ತೆರಳಿದ್ದಳು. ಅಲ್ಲಿಯೇ ಅರೆಬೆಳೆದ ಭ್ರೂಣಕ್ಕೆ ಜನ್ಮ ನೀಡಿದ್ದಳು. ನಂತರ ಗಾಬರಿಯಿಂದ ಆ ಭ್ರೂಣವನ್ನು ಶೌಚಾಯಲದ ಒಳಗೆ ಹಾಕಿ, ನೀರು ಸುರಿದು ಬಂದು ತಾಯಿ ಜತೆ ಕುಳಿತಿದ್ದಳು. ತನಗೆ ಆದ ಗರ್ಭಪಾತದ ಬಗ್ಗೆ ಏನನ್ನೂ ಹೇಳದೆ ಆಕೆ ವೈದ್ಯರಿಗಾಗಿ ಕಾಯ್ದು ಕುಳಿತಿದ್ದಳು. ಇದೇ ವೇಳೆ, ಶೌಚಾಲಯಕ್ಕೆ ತೆರಳಿದ್ದ ಇನ್ನೊಬ್ಬ ಮಹಿಳೆ ಅಲ್ಲಿ ಶಿಶುವಿನ ಮೃತದೇಹ ಕಂಡು, ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು, ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿ ಇಡೀ ಪ್ರಕರಣದ ಹಿನ್ನೆಲೆ ಪತ್ತೆ ಹಚ್ಚಿದರು. ನಂತರ ಪೊಲೀಸರು ಬಾಲಕಿಯ ತಾಯಿ ನೀಡಿದ ದೂರಿನ ಮೆರೆಗೆ ವಾಯನಾಡ್‌ ಮೂಲದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.