ರಾಷ್ಟ್ರಧ್ವಜಕ್ಕೆ ಅಗೌರವ: ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವರ ಆರೋಪ

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಭೆಗಳಲ್ಲಿ ಕಾಣಿಸಿಕೊಳ್ಳುವ ವಿಡಿಯೋದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಆರೋಪಿಸಿದ್ದಾರೆ.

ರಾಷ್ಟ್ರಧ್ವಜಕ್ಕೆ ಅಗೌರವ: ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವರ ಆರೋಪ
Linkup
ಹೊಸದಿಲ್ಲಿ: ಮುಖ್ಯಮಂತ್ರಿ ಅವರು ರಾಷ್ಟ್ರ ಧ್ವಜವನ್ನು ಅಗೌರವಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಶುಕ್ರವಾರ ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕೋವಿಡ್ ಸನ್ನಿವೇಶದ ಕುರಿತು ಭಾಗವಹಿಸುವ ಎಲ್ಲ ವಿಡಿಯೋ ಸಭೆಗಳಲ್ಲಿಯೂ ಅವರ ಹಿನ್ನೆಲೆಯಲ್ಲಿ ಎರಡು ತ್ರಿವರ್ಣ ಧ್ವಜಗಳು ಕಾಣಿಸುತ್ತವೆ. ಇವುಗಳು ವಿರೂಪಗೊಂಡಿವೆ ಹಾಗೂ ಬಿಳಿ ಬಣ್ಣದ ಭಾಗ ಕುಗ್ಗಿದೆ ಎಂದು ಪಟೇಲ್ ಆರೋಪ ಮಾಡಿದ್ದಾರೆ. ರಾಷ್ಟ್ರಧ್ವಜವು ಈ ರೀತಿ ವಿರೂಪಗೊಳ್ಳುವಂತೆ ಮಾಡುವುದು ಭಾರತದ ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಪಟೇಲ್ ದೂರಿದ್ದಾರೆ. ಈ ಸಂಬಂಧ ಅವರು ಕೇಂದ್ರ ಹಾಗೂ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದಿದ್ದು, ತಕ್ಷಣವೇ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದಾರೆ. 'ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಡಿಯೋ ಹೇಳಿಕೆ ನೀಡುವಾಗಲೆಲ್ಲ, ನನ್ನ ಗಮನವಿ ಅವರ ಕುರ್ಚಿಯ ಹಿಂದಿನ ರಾಷ್ಟ್ರ ಧ್ವಜದತ್ತ ಹರಿಯುತ್ತದೆ. ಇದು ಸಂವಿಧಾನದ ಉಲ್ಲಂಘನೆಯ ಸ್ವರೂಪದಲ್ಲಿದೆ. ಇಲ್ಲಿ ರಾಷ್ಟ್ರಧ್ವಜವನ್ನು ಅಲಂಕಾರದ ಉದ್ದೇಶದೊಂದಿಗೆ ಬಳಸಲಾಗುತ್ತಿದೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. 'ನಡುವಿನಲ್ಲಿ ಬಿಳಿ ಬಣ್ಣವು ಹಸಿರು ಗೆರೆಯಿಂದ ಕತ್ತರಿಸಿ ಹೋದಂತೆ ಕಾಣಿಸುತ್ತಿದೆ. ಇದು ರಾಷ್ಟ್ರ ಧ್ವಜದ ಸ್ವರೂಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ನಿಯಮಗಳಿಗೆ ಪೂರಕವಾಗಿಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಗೊತ್ತಿಲ್ಲದೆಯೇ ನಿರ್ಲಕ್ಷ್ಯ ವಹಿಸಿರುವ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ' ಎಂದು ಅವರು ತಿಳಿಸಿದ್ದಾರೆ.