ಯಡಿಯೂರಪ್ಪ ಕೊನೆಯ ಸಂಪುಟ ಸಭೆಯಲ್ಲಿ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ ಬೊಮ್ಮಾಯಿ: ಜನರ ಮೆಚ್ಚುಗೆ

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದ ಬೆಂಗಳೂರು ನಗರದ ಜಾಹೀರಾತು ನೀತಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರ ರದ್ದುಗೊಳಿಸಿದೆ.

ಯಡಿಯೂರಪ್ಪ ಕೊನೆಯ ಸಂಪುಟ ಸಭೆಯಲ್ಲಿ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ ಬೊಮ್ಮಾಯಿ: ಜನರ ಮೆಚ್ಚುಗೆ
Linkup
ಬೆಂಗಳೂರು: ಇತ್ತೀಚೆಗೆ ಹೊರಡಿಸಲಾಗಿದ್ದ ಬೃಹತ್ ಮಹಾನಗರ ಪಾಲಿಕೆ ನಿಯಮಗಳು, 2021 ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುವುದು ಸಾರ್ವಜನಿಕರ ಮೆಚ್ಚುಗೆ ಪಡೆದಿದೆ. ಬೆಂಗಳೂರು ನಗರದಲ್ಲಿ ಬೃಹತ್ ಹೋರ್ಡಿಂಗ್‌ಗಳ ಅಳವಡಿಕೆಗೆ ಅವರ ಸರ್ಕಾರ ಅನುಮತಿ ನೀಡಿತ್ತು. ಹೋರ್ಡಿಂಗ್‌ಗಳ ಅಳವಡಿಕೆಯನ್ನು ಮೂರು ವರ್ಷಗಳ ಹಿಂದೆ ನಿಷೇಧಿಸಲಾಗಿತ್ತು. ತೀವ್ರ ವಿರೋಧದ ನಡುವೆಯೂ ಬಿಎಸ್‌ವೈ ಸರ್ಕಾರ ಮತ್ತೆ ಅದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ತಮ್ಮದೇ ಬಿಜೆಪಿ ಸರ್ಕಾರ ಹೊರಡಿಸಿದ್ದ ಹಿಂದಿನ ಆದೇಶವನ್ನು ಕಳೆದ ತಿಂಗಳು ನೇತೃತ್ವದ ನೂತನ ಸರ್ಕಾರ ರದ್ದುಗೊಳಿಸಿತ್ತು. ಹೋರ್ಡಿಂಗ್‌ಗಳ ಅಳವಡಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ ನಾಗರಿಕ ಸಂಘಟನೆಗಳಿಗೆ ಇದು ನೆಮ್ಮದಿ ನೀಡಿದೆ. ಕಳೆದ ಜುಲೈ 26ರಂದು ಅಧಿಸೂಚನೆ ಹೊರಡಿಸಲಾಗಿದ್ದ ಜಾಹೀರಾತು ನಿಯಮಗಳು, 2021ಅನ್ನು ಕೂಡಲೇ ಅನ್ವಯವಾಗುವಂತೆ ಹಿಂದಕ್ಕೆ ಪಡೆಯಲು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಆದೇಶ ಹೊರಡಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಯುವ ಮುನ್ನ ನಡೆದಿದ್ದ ಅವರ ಕೊನೆಯ ರಾಜ್ಯ ಸಂಪುಟ ಸಭೆಯಲ್ಲಿ ಈ ಹೊಸ ನಿಯಮಕ್ಕೆ ಅನುಮೋದನೆ ನೀಡಲಾಗಿತ್ತು. ಇದಕ್ಕಾಗಿ ಹೊರಾಂಗಣ ಜಾಹೀರಾತು ಉದ್ಯಮ ಸಾಕಷ್ಟು ಲಾಬಿ ನಡೆಸಿತ್ತು. ಜಾಹೀರಾತು ಹೋರ್ಡಿಂಗ್ ಅಳವಡಿಸುವ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಅದಕ್ಕೆ ಅನುಮತಿ ನೀಡಿದ್ದು, ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿತ್ತು. ಅಧಿಕಾರಿಗಳನ್ನು ಅಮಾನತು ಮಾಡಿ'ಜಾಹೀರಾತು ನೀತಿಯನ್ನು ಅನುಮೋದಿಸುವಂತೆ ಹಿಂದಿನ ಮುಖ್ಯಮಂತ್ರಿಗಳಿಗೆ ತಪ್ಪಾಗಿ ಸಲಹೆ ನೀಡಿದ ಅಧಿಕಾರಿಗಳನ್ನು ಮೊದಲು ಮುಖ್ಯಮಂತ್ರಿ ಕಚೇರಿ ಅಮಾನತು ಮಾಡಬೇಕು. ಅಧಿಕಾರಿಗಳು ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ. ಈ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ಈ ಕುರಿತಾದ ಯಾವುದೇ ನಿರ್ಧಾರ ನ್ಯಾಯಾಂಗ ನಿಂದನೆಗೆ ಎಡೆಮಾಡಿಕೊಡಬಹುದು' ಎಂದಿರುವ ಕಾರ್ಯಕರ್ತ ಸಾಯಿ ದತ್ತಾ, ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಣಕಾಸು ವಿಕೇಂದ್ರೀಕರಣ ವ್ಯವಸ್ಥೆ ಬೇಕುಬೆಂಗಳೂರಿಗೆ ಹೊಸ ಜಾಹೀರಾತು ನೀತಿಯನ್ನು ಅಂಗೀಕರಿಸುವ ಮೂಲಕ ರಾಜ್ಯ ಸರ್ಕಾರ ಪ್ರಮಾದ ಎಸಗಿತ್ತು ಎಂದು ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯ ಸಹ ಸಂಸ್ಥಾಪಕಿ ತಾರಾ ಕೃಷ್ಣಸ್ವಾಮಿ ಹೇಳಿದ್ದಾರೆ. 'ನಗರಕ್ಕೆ ಸಂಬಂಧಿಸಿದ ಯಾವುದೇ ನೀತಿ ಮೊದಲು ಬಿಬಿಎಂಪಿ ಸಮಿತಿಯಲ್ಲಿ ಅಂಗೀಕಾರವಾಗಬೇಕು. ನಗರದ ಆಡಳಿತದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ' ಎಂದಿದ್ದಾರೆ. ರಾಜ್ಯ ಸರ್ಕಾರವು ಸೂಕ್ತವಾದ ಹಣಕಾಸು ವಿಕೇಂದ್ರೀಕರಣ ವ್ಯವಸ್ಥೆ ಸೃಷ್ಟಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 'ಅನುದಾನಗಳು ಸರಿಯಾದ ರೀತಿಯಲ್ಲಿ ಪಾಲಿಕೆಗಳಿಗೆ ಹೋಗುತ್ತಿಲ್ಲ. ಬೆಂಗಳೂರು ಅತ್ಯಧಿಕ ಕಂದಾಯ ಸೃಷ್ಟಿ ನಗರವಾಗಿದ್ದು, ಇಡೀ ರಾಜ್ಯಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಆದರೆ ನಮಗೆ ಸಮರ್ಪಕ ಅನುದಾನ ಸಿಗುತ್ತಿಲ್ಲ. ಇದು ಹಣಕಾಸು ನಿರ್ವಹಣೆಯ ಅತ್ಯಂತ ಕೆಟ್ಟ ಮಾರ್ಗವಾಗಿದೆ' ಎಂದು ಅವರು ಟೀಕಿಸಿದ್ದಾರೆ. ವಾರ್ಡ್ ಸಮಿತಿಗಳಿಗೆ ಬಿಟ್ಟುಬಿಡಿನಗರಕ್ಕೆ ಖಂಡಿತವಾಗಿಯೂ ಜಾಹೀರಾತು ನೀತಿ ಬೇಕು. ಆದರೆ ಅದು ತರ್ಕಬದ್ಧವಾಗಿರಬೇಕು ಎಂದು ಬೆಂಗಳೂರಿನ ನಾಗರಿಕ ವೇದಿಕೆಯ ಶ್ರೀನಿವಾಸ್ ಅಲವಳ್ಳಿ ಹೇಳಿದ್ದಾರೆ. 'ಪಾದಚಾರಿ ಮಾರ್ಗಮಧ್ಯದಲ್ಲಿ, ಸಂಚಾರ ಸ್ಥಳಗಳು ಅಥವಾ ಮರಗಳನ್ನು ಕಡಿದು ಹೋರ್ಡಿಂಗ್‌ಗಳನ್ನು ಅಳವಡಿಸಲು ಬಿಡಲು ಸಾಧ್ಯವಿಲ್ಲ. ಹೋರ್ಡಿಂಗ್‌ಗಳ ಮತ್ತೊಂದು ಸಮಸ್ಯೆಯೆಂದರೆ, ಜಾಹೀರಾತುದಾರರಿಂದ ಸಾಕಷ್ಟು ಪ್ರಮಾಣದ ಬಾಡಿಗೆ ಬಿಬಿಎಂಪಿಗೆ ಸಿಗುವುದಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಾರ್ಡ್ ಸಮಿತಿಗಳ ಸಲಹೆಗಳನ್ನು ಪಡೆಯುವ ಮೂಲಕ ಬಾಡಿಗೆ ಆಧಾರದಲ್ಲಿ ಕೆಲವು ಹೋರ್ಡಿಂಗ್ ಅಳವಡಿಕೆಗೆ ಅವಕಾಶ ನೀಡಬಹುದಷ್ಟೇ. ತಮ್ಮ ವಾರ್ಡ್‌ಗಳಲ್ಲಿನ ಕೆಲಸಗಳಿಗಾಗಿ ಒಂದು ಭಾಗದ ಆದಾಯವನ್ನು ವಾರ್ಡ್ ಸಮಿತಿಗಳಿಗೆ ಹಂಚಿಕೆ ಮಾಡಬೇಕು. ಹೋರ್ಡಿಂಗ್‌ಗಳ ಮಾಲೀಕತ್ವ ಕ್ರಿಯಾತ್ಮಕ ಸ್ವರೂಪದ್ದಾಗಿರಬೇಕು. ಜಾಹೀರಾತುದಾರರು ಗಂಟೆಗಳ ಆಧಾರದಲ್ಲಿ ಸ್ಥಳವನ್ನು ಬಾಡಿಗೆಗೆ ಪಡೆಯುವಂತೆ ಇರಬೇಕು ಎಂದು ಸಲಹೆ ನೀಡಿದ್ದಾರೆ.