ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧಾರ; ಅತ್ಯಾಕರ್ಷಕ ಥೀಮ್‌ನೊಂದಿಗೆ ಪ್ರದರ್ಶನ!

ಕಳೆದ ಮೂರು ಬಾರಿ ಪ್ರದರ್ಶನ ನಡೆಸದ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಾಕರ್ಷಕ ಥೀಮ್‌ನೊಂದಿಗೆ ಪ್ರದರ್ಶನ ನಡೆಸುವ ಉದ್ದೇಶವನ್ನು ಮೈಸೂರು ಉದ್ಯಾನ ಕಲಾಸಂಘ ಹೊಂದಿದೆ. ಮೂರು ಬಾರಿಯಿಂದ ಪ್ರದರ್ಶನ ನಡೆಸದೆ, ಸಂಘದ ಖಜಾನೆಯಲ್ಲಿ ಹಣ ಇಲ್ಲದಿರುವುದರಿಂದ ಖಜಾನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಜನರನ್ನು ಸೆಳೆಯಬೇಕಾಗಿದೆ. ಅದೇ ರೀತಿ ನೋಡುಗರಲ್ಲೂ ಒಂದು ಕುತೂಹಲ ಇದೆ. ಹೀಗಾಗಿ, ಆಯೋಜಕರು ಮತ್ತು ನೋಡುಗರು ಇಬ್ಬರಲ್ಲೂ ದೊಡ್ಡ ಮಟ್ಟದ ನಿರೀಕ್ಷೆಯಿದೆ.

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧಾರ; ಅತ್ಯಾಕರ್ಷಕ ಥೀಮ್‌ನೊಂದಿಗೆ ಪ್ರದರ್ಶನ!
Linkup
ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ನಲ್ಲಿ ಕಳೆದ ಮೂರು ಬಾರಿಯಿಂದ ರದ್ದುಗೊಂಡಿದ್ದ ಈ ಬಾರಿ ಅದ್ಧೂರಿಯಾಗಿಯೇ ನಡೆಯಲಿದೆ. ಮೈಸೂರು ಉದ್ಯಾನ ಕಲಾಸಂಘ ಮತ್ತು ರಾಜ್ಯ ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಈಗಾಗಲೇ ಒಂದು ಸಭೆ ನಡೆಸಿ ಚರ್ಚಿಸಲಾಗಿದೆ. ಅದರಂತೆ ಈ ಬಾರಿ ಪ್ರದರ್ಶನ ನಡೆಸಲು ಎಲ್ಲರೂ ಒಮ್ಮತದಿಂದ ತೀರ್ಮಾನಿಸಿದ್ದೇವೆ. ಸರಕಾರದ ಅನುಮತಿ ಪಡೆದು ಪ್ರದರ್ಶನದ ಚಟುವಟಿಕೆಗಳನ್ನು ಆರಂಭಿಸಲಾಗುವುದು. ಆದರೆ ಯಾವ ಥೀಮ್‌ನಡಿ ಪ್ರದರ್ಶನ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಮೈಸೂರು ಉದ್ಯಾನ ಕಲಾಸಂಘದ ನಿರ್ದೇಶಕ ಎಂ. ಕುಪ್ಪುಸಾಮಿ ತಿಳಿಸಿದರು. ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿಯಲ್ಲಿ ಅಂಗವಾಗಿ ಹಾಗೂ ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. 2020ರ ಫೆಬ್ರವರಿ-ಮಾರ್ಚ್ ನಲ್ಲಿ ಕರ್ನಾಟಕಕ್ಕೆ ಕಾಲಿಟ್ಟ ಪರಿಣಾಮ ಅಂದಿನಿಂದ ಈವರೆಗೆ ಮೂರು ಬಾರಿ ಪ್ರದರ್ಶನ ನಡೆಸಬೇಕಾಗಿತ್ತು. ಆದರೆ ಮೂರು ಬಾರಿಯೂ ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರದರ್ಶನ ಆಯೋಜಿಸಲಿಲ್ಲ. ಈ ಹಿಂದೆ 2020ರ ಆಗಸ್ಟ್‌ ಮತ್ತು 2021ರ ಜನವರಿ ಮತ್ತು ಆಗಸ್ಟ್‌ನಲ್ಲಿ ಪ್ರದರ್ಶನ ನಡೆಸಲು ಸರಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಜನವರಿಯಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆಯೋಜಿಸಲು ಸರಕಾರ ಅನುಮತಿಯೇನೋ ನೀಡಿತು. ಆದರೆ ನೋಡಲು ಸಾರ್ವಜನಿಕರು ಬರುತ್ತಾರೋ ಇಲ್ಲವೋ ಎಂಬ ಭೀತಿ ಆಯೋಜಕರಲ್ಲಿ ಮನೆ ಮಾಡಿತು. ಹೀಗಾಗಿ, ಪ್ರದರ್ಶನ ನಡೆಸದಿರಲು ತೀರ್ಮಾನಿಸಿದರು. ಆದರೆ, ಈ ಬಾರಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿವೆ. ಶಾಲಾ-ಕಾಲೇಜುಗಳೂ ಸೇರಿದಂತೆ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಂಡಿವೆ. ಹೀಗಾಗಿ, 2022ರ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಕಳೆದ ಮೂರು ಬಾರಿ ಪ್ರದರ್ಶನ ನಡೆಸದ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಾಕರ್ಷಕ ಥೀಮ್‌ನೊಂದಿಗೆ ಪ್ರದರ್ಶನ ನಡೆಸುವ ಉದ್ದೇಶವನ್ನು ಮೈಸೂರು ಉದ್ಯಾನ ಕಲಾಸಂಘ ಹೊಂದಿದೆ. ಮೂರು ಬಾರಿಯಿಂದ ಪ್ರದರ್ಶನ ನಡೆಸದೆ, ಸಂಘದ ಖಜಾನೆಯಲ್ಲಿ ಹಣ ಇಲ್ಲದಿರುವುದರಿಂದ ಖಜಾನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಜನರನ್ನು ಸೆಳೆಯಬೇಕಾಗಿದೆ. ಅದೇ ರೀತಿ ನೋಡುಗರಲ್ಲೂ ಒಂದು ಕುತೂಹಲ ಇದೆ. ಹೀಗಾಗಿ, ಆಯೋಜಕರು ಮತ್ತು ನೋಡುಗರು ಇಬ್ಬರಲ್ಲೂ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಮಳೆಯಿಂದಾಗಿ ನಳನಳಿಸುತ್ತಿದೆ ಲಾಲ್‌ಬಾಗ್‌ ಕಳೆದ ಒಂದೆರಡು ತಿಂಗಳಿಂದ ಸಮೃದ್ಧವಾಗಿ ಮಳೆಯಾದ ಪರಿಣಾಮ ಲಾಲ್‌ಬಾಗ್‌ ನಳನಳಿಸುತ್ತಿದೆ. ಎಲ್ಲೆಡೆ ಹಚ್ಚ ಹಸಿರಿನ ಗಿಡ-ಮರಗಳು, ಬಣ್ಣ ಬಣ್ಣದ ಹೂವುಗಳು ಉದ್ಯಾನದಲ್ಲಿ ಅರಳಿ ನಿಂತಿವೆ. ಇದರ ಜತೆಗೆ ಒಂದಷ್ಟು ಅಲ್ಪಾವಧಿ ಹೂವಿನ ಗಿಡಗಳನ್ನು ಬೆಳೆಸಿದರೆ ಮತ್ತಷ್ಟು ಆಕರ್ಷಣೆಯಾಗಿರುತ್ತದೆ ಎನ್ನುತ್ತಾರೆ ಲಾಲ್‌ಬಾಗ್‌ನ ಅಧಿಕಾರಿಗಳು. ಜನವರಿಯಲ್ಲಿ ಪ್ರದರ್ಶನವಾದರೂ ಎರಡು ತಿಂಗಳು ಮೊದಲೇ ತಯಾರಿಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.