ನರೇಂದ್ರ ಮೋದಿ ಸರಕಾರದ ದ್ವಿತೀಯ ಇನ್ನಿಂಗ್ಸ್ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಎರಡನೇ ಅವಧಿ ಎರಡು ವರ್ಷ ಪೂರೈಸಿದ ಬೆನ್ನ ಹಿಂದೆಯೇ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದೆ.
36 ಹೊಸ ಸಚಿವರು ಸಂಪುಟ ಸೇರಿದ್ದಾರೆ. ಏಳು ಸಚಿವರಿಗೆ ಬಡ್ತಿ ಸಿಕ್ಕಿದೆ. ಯುವ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 50 ವರ್ಷ ಒಳಗಿನ ಒಟ್ಟು 14 ಸಚಿವರು ಹಾಲಿ ಸಂಪುಟದಲ್ಲಿದ್ದಾರೆ. ಲಿಂಗ, ಧರ್ಮ, ಜಾತಿ, ಪ್ರದೇಶ ಮತ್ತು ಚಾತುರ್ಯದಂತಹ ಹಲವು ಸಂಗತಿಗಳನ್ನು ಈ ಸಂಪುಟ ಪುನಾರಚನೆಯಲ್ಲಿ ಪರಿಗಣಿಸಲಾಗಿದೆ. ಪುನಾರಚಿತ ಸಂಪುಟದ ಪ್ರೊಫೈಲ್ ಇಲ್ಲಿದೆ...
* ನಾರಾಯಣ ಟಾಟು ರಾಣೆ: 35 ವರ್ಷ, ಎಸ್ಸೆಸ್ಸೆಲ್ಸಿ-ಮಹಾರಾಷ್ಟ್ರದಿಂದ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆ
-ಆರು ಬಾರಿ ಶಾಸಕ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ
-ರಾಜ್ಯದ ಮುಖ್ಯಮಂತ್ರಿಯಾಗಿ, ಸಂಪುಟ ಸಚಿವರಾಗಿ ಕೆಲಸ ಮಾಡಿದ ಅನುಭವ
* ಸರ್ಬಾನಂದ ಸೊನೊವಾಲ್: 58 ವರ್ಷ, ಎಲ್‌ಎಲ್‌ಬಿ-ಅಸ್ಸಾಂನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆ
-ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ, ಎರಡು ಬಾರಿ ಶಾಸಕ
-ಮೊದಲು ಕೇಂದ್ರ ಕ್ರೀಡೆ ಮತ್ತು ಯುವಜನ ಖಾತೆ ರಾಜ್ಯ ಸಚಿವರಾಗಿ ಕಾರ್ಯ
* ಜ್ಯೋತಿರಾದಿತ್ಯ ಸಿಂಧಿಯಾ: 50 ವರ್ಷ, ಎಂಬಿಎ-ಪ್ರಸ್ತುತ ರಾಜ್ಯಸಭೆ ಸದಸ್ಯ
-ಮಧ್ಯಪ್ರದೇಶದಿಂದ 2 ಬಾರಿ ಸಂಸದ
-ಮೊದಲು ಕೇಂದ್ರ ವಾಣಿಜ್ಯಮತ್ತು ಸಂವಹನ ಖಾತೆ ಸಹಾಯಕ ಸಚಿವ
* ಡಾ.ವೀರೇಂದ್ರ ಕುಮಾರ್: 67 ವರ್ಷ, ಎಂಎ ಪಿಎಚ್.ಡಿ-ಮಧ್ಯಪ್ರದೇಶದಿಂದ ಏಳು ಬಾರಿ ಸಂಸತ್ತಿಗೆ ಆಯ್ಕೆ.
-ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವರಾಗಿ ಕಾರ್ಯನಿರ್ವಹಣೆ
-ಸಂಸತ್ತಿನ ಹಿರಿಯ ಸದಸ್ಯರಲ್ಲಿಒಬ್ಬರು, 4 ದಶಕದಿಂದ ಸಾರ್ವಜನಿಕ ಜೀವನ
* ರಾಮಚಂದ್ರ ಪ್ರಸಾದ್ ಸಿಂಗ್: 63 ವರ್ಷ, ಎಂಎ
-ಹಾಲಿ ರಾಜ್ಯಸಭೆ ಸದಸ್ಯ
-ಬಿಹಾರದಿಂದ ಎರಡು ಬಾರಿ ಮೇಲ್ಮನೆಗೆ
-ಐಎಎಸ್ ಅಧಿಕಾರಿಯಾಗಿ ನಿವೃತ್ತಿ
* ಅಶ್ವಿನಿ ವೈಷ್ಣವ್: 50 ವರ್ಷ, ಎಂಬಿಎ-ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆ
-ಐಎಎಸ್ ಅಧಿಕಾರಿಯಾಗಿ ಉತ್ತಮ ಆಡಳಿತ ನೀಡಿದ ಖ್ಯಾತಿ
-ಜಾಗತಿಕ ಕಂಪನಿಗಳಲ್ಲಿಉನ್ನತ ಹುದ್ದೆ ನಿರ್ವಹಣೆಯ ಅನುಭವ
* ಪಶುಪತಿ ಕುಮಾರ್ ಪಾರಸ್: 68 ವರ್ಷ, ಬಿ.ಎಡ್
-ಬಿಹಾರದಿಂದ ಸಂಸದರಾಗಿ ಆಯ್ಕೆ
-ಕೇಂದ್ರ ಮಾಜಿ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಸಹೋದರ
-ಬಿಹಾರದಲ್ಲಿಸಚಿವರಾಗಿ ಕಾರ್ಯನಿರ್ವಹಣೆ
ಭೂಪೇಂದರ್ ಯಾದವ್: 52 ವರ್ಷ, ಎಲ್‌ಎಲ್‌ಬಿ-ರಾಜಸ್ಥಾನದಿಂದ 2 ಬಾರಿ ರಾಜ್ಯಸಭೆಗೆ ಆಯ್ಕೆ
-ಹಲವು ಸಂಸದೀಯ ಸಮಿತಿಗಳಲ್ಲಿಕೆಲಸ ಮಾಡಿದ ಖ್ಯಾತಿ
-ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಣೆ
* ಪಂಕಜ್ ಚೌಧರಿ: 56 ವರ್ಷ, ಪದವೀಧರ-ಉತ್ತರಪ್ರದೇಶದಿಂದ ಆರು ಬಾರಿ ಲೋಕಸಭೆಗೆ ಆಯ್ಕೆ
-ಗೋರಖಪುರ ಉಪ ಮೇಯರ್ ಆಗಿ ಕಾರ್ಯನಿರ್ವಹಣೆ
* ಅನುಪ್ರಿಯಾ ಸಿಂಗ್ ಪಟೇಲ್: 40 ವರ್ಷ, ಎಂಬಿಎ-ಉತ್ತರಪ್ರದೇಶದಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆ
-ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆಯಾಗಿ ಸೇವೆ
* ಸತ್ಯಪಾಲ್ ಸಿಂಗ್ ಬಘೇಲ್: 61 ವರ್ಷ, ಎಲ್‌ಎಲ್‌ಬಿ-ಉತ್ತರಪ್ರದೇಶದಿಂದ 5 ಬಾರಿ ಲೋಕಸಭೆಗೆ ಆಯ್ಕೆ
-ರಾಜ್ಯ ಸರಕಾರದಲ್ಲಿಸಚಿವರಾಗಿ ಸೇವೆ ಸಲ್ಲಿಸಿದ ಅನುಭವ
-ಒಮ್ಮೆ ಶಾಸಕರಾಗಿ ಆಯ್ಕೆ
* ಭಾನು ಪ್ರತಾಪ್ ಸಿಂಗ್ ವರ್ಮಾ: 63 ವರ್ಷ, ಎಂಎ, ಎಲ್‌ಎಲ್‌ಬಿ
-ಉತ್ತರಪ್ರದೇಶದಿಂದ ಐದು ಬಾರಿ ಸಂಸದರಾಗಿ ಆಯ್ಕೆ
-ಶಾಸಕರಾಗಿಯೂ ಕಾರ್ಯ
-ಮೂರು ದಶಕದಿಂದ ರಾಜಕೀಯ ಜೀವನ
*ಕಿರಣ್ ರಿಜಿಜು: 49 ವರ್ಷ, ಬಿಎ, ಎಲ್‌ಎಲ್‌ಬಿ-ಅರುಣಾಚಲ ಪ್ರದೇಶದಿಂದ ಲೋಕಸಭೆಗೆ ಆಯ್ಕೆ
-ಉತ್ತಮ ಯುವ ಸಂಸದೀಯ ಪಟು
-ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವರಾಗಿ ಕಾರ್ಯನಿರ್ವಹಣೆ
* ರಾಜಕುಮಾರ್ ಸಿಂಗ್: 68 ವರ್ಷ, ಎಂಎ, ಪಿಎಚ್.ಡಿ-ಮಣಿಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ
- ಭೂಗೋಳ ಶಾಸ್ತ್ರ ಪ್ರೊಫೆಸರ್ ಆಗಿ 40 ವರ್ಷ ಕೆಲಸ
*ಹರ್ದೀಪ್ ಸಿಂಗ್ ಪುರಿ: 69 ವರ್ಷ, ಸ್ನಾತಕೋತ್ತರ ಪದವೀಧರ-ಉತ್ತರಪ್ರದೇಶದಿಂದ ಲೋಕಸಭೆಗೆ ಆಯ್ಕೆ
-ಪ್ರಸ್ತುತ ಕೇಂದ್ರ ನಗರಾಭಿವೃದ್ಧಿ ಹಾಗೂ ನಾಗರಿಕ ವಿಮಾನಯಾನ ಸಚಿವ
-ಐಎಫ್‌ಎಸ್ ಅಧಿಕಾರಿಯಾಗಿ, ದೇಶದ ರಾಜತಾಂತ್ರಿಕರಾಗಿ ಕಾರ್ಯನಿರ್ವಹಣೆ
*ಮನ್ಸುಖ್ ಮಾಂಡವೀಯ: 49 ವರ್ಷ, ಎಂಎ-ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆ
-2012ರಿಂದಲೂ ರಾಜ್ಯಸಭೆ ಸದಸ್ಯರಾಗಿ ಕಾರ್ಯ
-ಪ್ರಸ್ತುತ ಕೇಂದ್ರ ಬಂದರು ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)
*ಪುರುಷೋತ್ತಮ್ ರೂಪಾಲ: 66 ವರ್ಷ, ಬಿಎಸ್ಸಿ, ಬಿಎಡ್-ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆ
-ಪ್ರಸ್ತುತ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ
-ಸಂಸತ್ ಹಲವು ಸಮಿತಿ ಸದಸ್ಯರಾಗಿಯೂ ಕಾರ್ಯ
*ಜಿ.ಕಿಶನ್ ರೆಡ್ಡಿ: 57 ವರ್ಷ,-ತೆಲಂಗಾಣದಿಂದ ಲೋಕಸಭೆಗೆ ಆಯ್ಕೆ
-ಪ್ರಸ್ತುತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ
-ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಣೆ
* ಅನುರಾಗ್ ಠಾಕೂರ್: 46 ವರ್ಷ, ಬಿಎ-ಹಿಮಾಚಲ ಪ್ರದೇಶದಿಂದ ಲೋಕಸಭೆಗೆ ಆಯ್ಕೆ
-ನಾಲ್ಕು ಬಾರಿ ಸಂಸದರಾಗಿ ಕಾರ್ಯನಿರ್ವಹಣೆ
-ಪ್ರಸ್ತುತ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ
*ದರ್ಶನಾ ವಿಕ್ರಂ ಜರ್ದೊಶ್: 60 ವರ್ಷ, ಬಿ.ಕಾಂ ಪದವೀಧರೆ-ಗುಜರಾತಿನ ಸೂರತ್‌ನಿಂದ ಮೂರು ಬಾರಿ ಸಂಸದೆ
-ಸೂರತ್ ನಗರಪಾಲಿಕೆಯ ಕಾರ್ಪೊರೇಟರ್ ಆಗಿಯೂ ಕೆಲಸ
-ಸಾರ್ವಜನಿಕ ಜೀವನದಲ್ಲಿ4 ದಶಕಗಳಿಂದ ಸೇವೆ
*ಮೀನಾಕ್ಷಿ ಲೇಖಿ: 54 ವರ್ಷ, ಎಲ್‌ಎಲ್‌ಬಿ-ದಿಲ್ಲಿಯಿಂದ ಎರಡು ಬಾರಿ ಸಂಸದೆ
-ಹೊಸದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಸದಸ್ಯಯಾಗಿ ಕಾರ್ಯ.
-ಸುಪ್ರೀಂಕೋರ್ಟ್ ವಕೀಲೆ, ಸಾಮಾಜಿಕ ಕಾರ್ಯಕರ್ತೆಯಾಗಿ ಸೇವೆ
*ಅನ್ನಪೂರ್ಣ ದೇವಿ: 51 ವರ್ಷ, ಎಂ.ಎ-ನಾಲ್ಕು ಬಾರಿ ಶಾಸಕಿ, ಒಂದು ಬಾರಿ ಸಂಸದೆ -ಜಾರ್ಖಂಡ್‌ನ ಕೊಡರ್ಮಾ ಕ್ಷೇತ್ರ
-ಜಾರ್ಖಂಡ್ ಸರಕಾರದಲ್ಲಿಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕಾರ್ಯ
-30ನೇ ವಯಸ್ಸಿಗೆ ಬಿಹಾರ ಸರಕಾರದಲ್ಲಿಗಣಿ ಸಚಿವೆಯಾಗಿ ಸಾಧನೆ
* ಕೌಶಲ್ ಕಿಶೋರ್: 61 ವರ್ಷ, ಬಿ.ಎಸ್ಸಿ-ಎರಡು ಬಾರಿ ಸಂಸದ- ಉತ್ತರಪ್ರದೇಶದ ಮೋಹನ್‌ಲಾಲ್ ಗಂಜ್ ಕ್ಷೇತ್ರ
-30 ವರ್ಷಗಳಿಂದ ಸಾರ್ವಜನಿಕ ಸೇವೆ, ರಾಜ್ಯ ಸಚಿವರಾಗಿಯೂ ಕೆಲಸ,
ಶಾಸಕರಾಗಿಯೂ ಸೇವೆ
*ಅಜಯ್ ಭಟ್: 60 ವರ್ಷ, ಎಲ್‌ಎಲ್‌ಬಿ-ಮೂರು ಬಾರಿ ಶಾಸಕ, ಮೊದಲ ಬಾರಿ ಸಂಸದ- ಉತ್ತರಾಖಂಡದ ನೈನಿತಾಲ್-ಉಧಮ್‌ಸಿಂಗ್ ನಗರ
-ರಾಜ್ಯ ಸಂಪುಟ ಸಚಿವರಾಗಿ ಆರೋಗ್ಯ, ವಿಪತ್ತು ನಿರ್ವಹಣಾ ಖಾತೆ ಹೊಣೆ
-25 ವರ್ಷಗಳಿಂದ ಸಾರ್ವಜನಿಕ ಸೇವೆ
*ಬಿ.ಎಲ್. ವರ್ಮಾ: 59 ವರ್ಷ, ಎಂ.ಎ-ಉತ್ತರಪ್ರದೇಶದಿಂದ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆ
-35 ವರ್ಷಗಳಿಂದ ಸಾರ್ವಜನಿಕ ಸೇವೆ
* ಅಜಯ್ ಕುಮಾರ್: 60 ವರ್ಷ, ಬಿ.ಎಸ್ಸಿ, ಎಲ್‌ಎಲ್‌ಬಿ-ಒಂದು ಬಾರಿ ಶಾಸಕ, ಎರಡು ಬಾರಿ ಸಂಸದ- ಉತ್ತರಪ್ರದೇಶದ ಖೇರಿ ಕ್ಷೇತ್ರ
-ಜಿಲ್ಲಾಪಂಚಾಯತ್ ಸದಸ್ಯರಾಗಿ ಹಲವು ವರ್ಷಗಳ ಅನುಭವ
-30 ವರ್ಷಗಳಿಂದ ಸಾರ್ವಜನಿಕ ಸೇವೆ
*ಚೌಹಾಣ್ ದೇವುಸಿಂಗ್: 56 ವರ್ಷ, ಡಿಪ್ಲೊಮ-2 ಬಾರಿ ಶಾಸಕ. 2 ಬಾರಿ ಸಂಸದ- ಗುಜರಾತಿನ ಖೇಡಾ ಕ್ಷೇತ್ರ
-ರಾಜಕೀಯ ಪ್ರವೇಶಕ್ಕೂ ಮುನ್ನ ಆಕಾಶವಾಣಿಯಲ್ಲಿಎಂಜಿನಿಯರ್
* ಕಪಿಲ್ ಮೋರೆಶ್ವರ ಪಾಟೀಲ್: 60 ವರ್ಷ, ಬಿ.ಎ-ಎರಡನೇ ಬಾರಿಗೆ ಸಂಸದ- ಮಹಾರಾಷ್ಟ್ರದ ಭಿವಂಡಿ ಕ್ಷೇತ್ರ
-ದೇವಿ-ಅಂಜುರ್ ಗ್ರಾಮ ಪಂಚಾಯಿತಿಯ ಸರ್‌ಪಂಚ್‌ನಿಂದ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ
-30 ವರ್ಷಗಳಿಂದ ಪಕ್ಷದ ತಳಮಟ್ಟದ ಸಂಘಟನೆಯಲ್ಲಿನಿರತ
*ಪ್ರತಿಮಾ ಭೌಮಿಕ್: 52 ವರ್ಷ, ಬಿ.ಎಸ್ಸಿ-ಮೊದಲ ಬಾರಿ ಸಂಸದೆ- ತ್ರಿಪುರಾ ಪಶ್ಚಿಮ ಕ್ಷೇತ್ರ
-ಇವತ್ತಿಗೂ ಕೃಷಿ ಮಾಡುವ ಸರಳ ಜೀವನ, ಜನಸ್ನೇಹಿ
*ಡಾ.ಸುಭಾಶ್ ಸರಕಾರ್: -67 ವರ್ಷ, ಎಂಬಿಬಿಎಸ್ (ಸ್ತ್ರೀರೋಗತಜ್ಞ)-ಮೊದಲ ಬಾರಿ ಸಂಸದ- ಪಶ್ಚಿಮ ಬಂಗಾಳದ ಬಂಕುರಾ ಕ್ಷೇತ್ರ
-50 ವರ್ಷಗಳಿಂದ ಸಾರ್ವಜನಿಕ ಸೇವೆ, ಏಮ್ಸ್‌ನಲ್ಲಿ ಮಂಡಳಿ ಸದಸ್ಯರಾಗಿ ಕಾರ್ಯ
-ರಾಮಕೃಷ್ಣ ಮಿಷನ್ ಜತೆಗೆ ನಿಕಟ ಸಂಪರ್ಕ
* ಡಾ. ಭಾಗವತ್ ಕಿಶನ್ ರಾವ್ ಕಾರಟ್: 64 ವರ್ಷ, ಎಂಬಿಬಿಎಸ್. ಎಂಎಸ್ (ಶಸ್ತ್ರಚಿಕಿತ್ಸೆ)-ಮೊದಲ ಬಾರಿಗೆ ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯ
-ಮರಾಠವಾಡದ ನಗರಪಾಲಿಕೆ ಮೇಯರ್ ಆಗಿ ಸೇವೆ
-ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕ
* ಡಾ. ರಾಜ್‌ಕುಮಾರ್ ರಂಜನ್ ಸಿಂಗ್: 68 ವರ್ಷ, ಎಂ.ಎ-ಪಿಎಚ್‌ಡಿ-ಮೊದಲ ಬಾರಿ ಸಂಸದ- ಇನ್ನರ್ ಮಣಿಪುರ ಕ್ಷೇತ್ರ
-40 ವರ್ಷಗಳಿಂದ ಸಾರ್ವಜನಿಕ ಸೇವೆ, ಜತೆಗೆ ಭೌಗೋಳಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಕೆಲಸ
-ಮಣಿಪುರ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ಸೇವೆ
*ಡಾ. ಭಾರತಿ ಪ್ರವೀಣ್ ಪವಾರ್: 42 ವರ್ಷ, ಎಂಬಿಬಿಎಸ್‌ಮೊದಲ ಬಾರಿಗೆ ಸಂಸದೆ - ಮಹಾರಾಷ್ಟ್ರದ ದಿಂಡೋರಿ ಕ್ಷೇತ್ರ
-ನಾಶಿಕ್ ಜಿಲ್ಲಾಪಂಚಾಯಿತಿ ಸದಸ್ಯೆಯಾಗಿ ಅಪೌಷ್ಟಿಕತೆ ನಿವಾರಣೆ-ಶುದ್ಧನೀರಿಗಾಗಿ ಶ್ರಮಿಸಿದ್ದರು
*ಭೀಶ್ವೇಶ್ವರ್ ಟುಡು: 56 ವರ್ಷ, ಡಿಪ್ಲೊಮಾ-ಮೊದಲ ಬಾರಿಗೆ ಸಂಸದ- ಒಡಿಶಾದ ಮಯೂರ್‌ಗಂಜ್ ಕ್ಷೇತ್ರ
-ಕಟಕ್ ಪ್ರಾಂತ್ಯದಲ್ಲಿ ಪ್ರಭಾವಿ ನಾಯಕ
-ಜಲಸಂಪನ್ಮೂಲ ಇಲಾಖೆಯಲ್ಲಿಹಿರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ಅನುಭವ
*ಶಂತನು ಠಾಕೂರ್: 38 ವರ್ಷ, ಬಿ.ಎ ಇಂಗ್ಲಿಷ್ (ಕೆಎಸ್‌ಒಯು)-ಮೊದಲ ಬಾರಿಗೆ ಸಂಸದ - ಪಶ್ಚಿಮ ಬಂಗಾಳದ ಬಾನ್‌ಗಾಂವ್ ಕ್ಷೇತ್ರ
-ಮತುವಾ ಸಮುದಾಯದ ಪ್ರಭಾವಿ ಯುವನಾಯಕ
-ಹಾಸ್ಪಿಟಲಿಟಿ ಮ್ಯಾನೇಜ್‌ಮೆಂಟ್ ಪರಿಣಿತಿ
* ಡಾ. ಮುಂಜಾಪರಾ ಮಹೇಂದ್ರಭಾಯಿ: 52 ವರ್ಷ, ಎಂಬಿಬಿಎಸ್, ಎಂಡಿ (ಹೃದ್ರೋಗತಜ್ಞ)-ಮೊದಲ ಬಾರಿಗೆ ಸಂಸದ- ಗುಜರಾತಿನ ಸುರೇಂದ್ರನಗರ ಕ್ಷೇತ್ರ
-ಸಾಮಾಜಿಕ ಕಾರ್ಯಕರ್ತರಾಗಿ ಜನಪ್ರಿಯ, ಕೇವಲ 2 ರೂ.ಗೆ ಔಷಧ ನೀಡುವ ವೈದ್ಯ
-30 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿಸಮಾಜಸೇವೆಯ ಸಾಧನೆ
* ಜಾನ್ ಬರ್ಲಾ: 45 ವರ್ಷ, 8ನೇ ತರಗತಿ
-ಮೊದಲ ಬಾರಿಗೆ ಸಂಸದ- ಪಶ್ಚಿಮ ಬಂಗಾಳದ ಅಲಿಪುರ್‌ದ್ವಾರ್ಸ್ ಕ್ಷೇತ್ರ
-14ನೇ ವಯಸ್ಸಿಗೆ ಚಹಾ ಎಸ್ಟೇಟ್‌ನಲ್ಲಿಕಾರ್ಮಿಕನಾಗಿ ದುಡಿಮೆ
-ಅಸ್ಸಾಂ, ಉತ್ತರ ಬಂಗಾಳ ಪ್ರಾಂತ್ಯದಲ್ಲಿ20 ವರ್ಷಗಳಿಂದ ಚಹಾ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ
* ಡಾ.ಎಲ್. ಮುರುಗನ್: 44 ವರ್ಷ, ಎಲ್‌ಎಲ್‌ಎಂ-ಪಿಎಚ್‌ಡಿ-ಧರಂಪುರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು
-ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ
-ರಾಷ್ಟ್ರೀಯ ಎಸ್‌ಸಿ ಆಯೋಗದ ಉಪಾಧ್ಯಕ್ಷರಾಗಿ ಸೇವೆ, ಮದ್ರಾಸ್ ಹೈಕೋರ್ಟ್‌ನಲ್ಲಿವಕೀಲ
* ನಿಸಿತ್ ಪ್ರಮಾಣಿಕ್: 35 ವರ್ಷ, ಬಿಸಿಎ-ಮೊದಲ ಬಾರಿ ಸಂಸದ- ಪಶ್ಚಿಮ ಬಂಗಾಳದ ಕೂಛ್‌ಬೆಹಾರ್
-ರಾಜಕೀಯಕ್ಕೂ ಮುನ್ನ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರಾಗಿ ಸೇವೆ
-ಸಂಪುಟದಲ್ಲೇ ಅತಿ ಕಿರಿಯ ಸಚಿವ ಎಂಬ ಹೆಗ್ಗಳಿಕೆ