ಮತ್ತೆ ಆರ್ಭಟಿಸುತ್ತಿದೆ ಮಳೆ: ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 22 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ತಮಿಳುನಾಡಿನಲ್ಲಿ ಮತ್ತೆ ಮಳೆ ಆರ್ಭಟ ತೀವ್ರಗೊಂಡಿದೆ. ಐದು ಜಿಲ್ಲೆಗಳಲ್ಲಿ ಭಾರಿಯಿಂದ ಅನಾಹುತಕಾರಿ ಮಳೆಯ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಮತ್ತು ಶನಿವಾರ 22 ಜಿಲ್ಲೆಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮತ್ತೆ ಆರ್ಭಟಿಸುತ್ತಿದೆ ಮಳೆ: ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 22 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
Linkup
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಎದ್ದಿದೆ. , ಕರ್ನಾಟಕ, ಆಂಧ್ರಪ್ರದೇಶ, ಪುದುಚೆರಿ ರಾಜ್ಯಗಳಲ್ಲಿ ಭಾರಿ ಮಳೆಯ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯು ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಸುರಿದಿದ್ದ ವ್ಯಾಪಕ ಮಳೆಯಿಂದ ಪರಿಸ್ಥಿತಿ ತಲೆದೋರಿದ್ದ 22 ಜಿಲ್ಲೆಗಳಲ್ಲಿನ ಶಾಲೆ ಹಾಗೂ ಕಾಲೇಜುಗಳನ್ನು ಮುಚ್ಚಲಾಗಿದೆ. ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ ಭಾರಿಯಿಂದ ವಿಪರೀತ ಸುರಿಯಲಿದೆ ಎಂದು ಭಾರತೀಯ (ಐಎಂಡಿ) ತಿಳಿಸಿದೆ. ಕೆಲವು ದಿನಗಳಿಂದ ವರುಣನ ಆರ್ಭಟಕ್ಕೆ ಅಪಾರ ಬೆಲೆ ನಷ್ಟ ಉಂಟಾಗಿದೆ. ಕಟ್ಟಡಗಳು ಮತ್ತು ರಸ್ತೆಗಳು ಜಲಾವೃತವಾಗಿದ್ದು, ಅನೇಕ ಪ್ರದೇಶಗಳು ಪ್ರವಾಹದಲ್ಲಿ ಮುಳುಗಿದ್ದವು. ತಿರುವಣ್ಣಾಮಲೈ, ಕನ್ಯಾಕುಮಾರಿ ಮತ್ತು ಕಲ್ಲಕುರಿಚಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಿಂಡಿಗನ್, ಥೇಣಿ, ಮದುರೆ, ತೆಂಕಸೈ ಜಿಲ್ಲೆಗಳಲ್ಲಿ ಭಾರಿ ಮಳೆ ಸೂಚನೆ ನೀಡಲಾಗಿದೆ. ಕಳೆದ ತಿಂಗಳಿನಿಂದ ನಿರಂತರ ಮಳೆಯನ್ನು ಕಂಡಿರುವ ತೂತುಕುಡಿ, ಕನ್ಯಾಕುಮಾರಿ, ತಿರುನೆಲ್ವೇಲಿ, ಕಡ್ಡಲೋರ್, ತಿರುವರೂರ್, ತೆಂಕಸೈ ಮತ್ತು ವಿಲ್ಲಪುರಂ ಸೇರಿದಂತೆ 22 ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಲಾಗಿದೆ. ಪುದುಚೆರಿ ಮತ್ತು ಕಾರೈಕಲ್‌ಗಳಲ್ಲಿ ಸಹ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಹೊಸದಾಗಿ ಆರಂಭವಾಗಿರುವ ಚಂಡಮಾರುತದ ಮಳೆ ಹಾಗೂ ಪ್ರವಾಹಕ್ಕೆ ಐವರು ಬಲಿಯಾಗಿದ್ದಾರೆ. 10,500 ಮಂದಿಯನ್ನು 12 ಜಿಲ್ಲೆಗಳಲ್ಲಿನ ಸರ್ಕಾರಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 152 ಜಾನುವಾರುಗಳು ಜೀವ ಕಳೆದುಕೊಂಡಿವೆ. 681 ಗುಡಿಸಲುಗಳು, 120 ಕಾಂಕ್ರೀಟ್ ಮನೆಗಳು ನೆಲಸಮವಾಗಿವೆ. ಕಾಮೋರಿನ್ ಪ್ರದೇಶ ಮತ್ತು ಸಮೀಪದ ಶ್ರೀಲಂಕಾ ಕರಾವಳಿಗಳಲ್ಲಿ ಚಂಡಮಾರುತದ ವಾತಾವರಣ ದಟ್ಟವಾಗಿದೆ. ಮುಂದಿನ 48 ಗಂಟೆಗಳಲ್ಲಿ ಚೆನ್ನೈನಲ್ಲಿ ಗುಡುಗು ಸಹಿತ ಭಾರಿ ಮಳೆಯ ಸೂಚನೆ ನೀಡಲಾಗಿದೆ. ಗುರುವಾರ ದಕ್ಷಿಣ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ. ಗುರುವಾರ ರಾತ್ರಿ ಕೊಂಚ ವಿರಾಮದ ಬಳಿಕ ಚೆನ್ನೈನಲ್ಲಿ ಮತ್ತೆ ಮಳೆಯಾಗಿದೆ. ದಕ್ಷಿಣ ಅಂಡಮಾನ್ ಸಮುದ್ರದ ಸುತ್ತಲೂ ನ. 29ರವರೆಗೆ ಕಡಿಮೆ ಒತ್ತಡದ ಸನ್ನಿವೇಶ ಉಂಟಾಗಲಿದೆ. ಅದು ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ- ವಾಯವ್ಯ ಭಾಗದತ್ತ ಚಲಿಸುವ ನಿರೀಕ್ಷೆಯಿದೆ. ತೂತುಕುಡಿಯಲ್ಲಿ ಶುಕ್ರವಾರ ಬೆಳಿಗ್ಗೆ 5:30ರ ವರೆಗೆ 25.9 ಸೆಂ.ಮೀ ಮಳೆಯಾಗಿದೆ. ಪುದುಚೆರಿಯ ಕಾರೈಕಲ್‌ನಲ್ಲಿ 11.9 ಸೆಂಮೀ ಮಳೆ ಸುರಿದಿದೆ. ತೂತುಕುಡಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಸ ಸನ್ನಿವೇಶ ಉಂಟಾಗಿದೆ. ತಮಿಳುನಾಡಿನಲ್ಲಿ ಈ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತಲೂ ಶೇ 68ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ 50,000 ಹೆಕ್ಟೇರ್‌ಗೂ ಹೆಚ್ಚಿನ ಭೂಮಿಯಲ್ಲಿ ಬೆಳೆಗಳು ನಾಶವಾಗಿವೆ. 2,300ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕೇಂದ್ರದ ತಂಡವೊಂದು ತಮಿಳುನಾಡಿಗೆ ಭೇಟಿ ನೀಡಿದ್ದು ಹಾನಿಯ ಅಂದಾಜು ಮಾಡಿದೆ. 2,600 ಕೋಟಿ ರೂ ನೆರವು ನೀಡುವಂತೆ ತಮಿಳುನಾಡು ಸರ್ಕಾರ ಬೇಡಿಕೆ ಇರಿಸಿದೆ.