ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನ

ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ. ನವದೆಹಲಿ: ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ.  ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಒಲಿಂಪಿಯನ್ ತುಳಸಿದಾಸ್ ಬಲರಾಮ್ ಅವರು 1950 ಮತ್ತು 60 ರ ದಶಕದಲ್ಲಿ ಭಾರತೀಯ ಫುಟ್ಬಾಲ್ ನ 'ಹೋಲಿ ಟ್ರಿನಿಟಿ' ಭಾಗವಾಗಿದ್ದು, ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ. 85 ವರ್ಷ ವಯಸ್ಸಿನ ಬಲರಾಮ್, ಪಶ್ಚಿಮ ಬಂಗಾಳದ ಹೂಗ್ಲಿ ನದಿ ದಡದಲ್ಲಿರುವ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿದ್ದರು. ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಸಮಸ್ಯೆಯಿಂದಾಗಿ ಕಳೆದ ಡಿಸೆಂಬರ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿರಲಿಲ್ಲ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಅಕ್ಟೋಬರ್ 4, 1937 ರಂದು ತಮಿಳಿನ ಮುತ್ತಮ್ಮ ಮತ್ತು ತುಳಸಿದಾಸ್ ಕಾಳಿದಾಸ್ ದಂಪತಿಯ ಮಗನಾಗಿ ಜನಿಸಿದ ಬಲರಾಮ್, ಏಳು ಸೀಸನ್ ಗಳಲ್ಲಿ 131 ಗೋಲುಗಳನ್ನು ಗಳಿಸಿದ್ದಾರೆ. ಅವರು  ಅರ್ಜುನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಫುಟ್ಬಾಲ್ ದಂತಕಥೆಯ ಗೌರವಾರ್ಥವಾಗಿ ಮೂರು ದಿನಗಳ ಶೋಕಾಚರಣೆಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್  ಘೋಷಿಸಿದೆ. 

ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನ
Linkup
ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ. ನವದೆಹಲಿ: ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ.  ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಒಲಿಂಪಿಯನ್ ತುಳಸಿದಾಸ್ ಬಲರಾಮ್ ಅವರು 1950 ಮತ್ತು 60 ರ ದಶಕದಲ್ಲಿ ಭಾರತೀಯ ಫುಟ್ಬಾಲ್ ನ 'ಹೋಲಿ ಟ್ರಿನಿಟಿ' ಭಾಗವಾಗಿದ್ದು, ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ. 85 ವರ್ಷ ವಯಸ್ಸಿನ ಬಲರಾಮ್, ಪಶ್ಚಿಮ ಬಂಗಾಳದ ಹೂಗ್ಲಿ ನದಿ ದಡದಲ್ಲಿರುವ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿದ್ದರು. ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಸಮಸ್ಯೆಯಿಂದಾಗಿ ಕಳೆದ ಡಿಸೆಂಬರ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿರಲಿಲ್ಲ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಅಕ್ಟೋಬರ್ 4, 1937 ರಂದು ತಮಿಳಿನ ಮುತ್ತಮ್ಮ ಮತ್ತು ತುಳಸಿದಾಸ್ ಕಾಳಿದಾಸ್ ದಂಪತಿಯ ಮಗನಾಗಿ ಜನಿಸಿದ ಬಲರಾಮ್, ಏಳು ಸೀಸನ್ ಗಳಲ್ಲಿ 131 ಗೋಲುಗಳನ್ನು ಗಳಿಸಿದ್ದಾರೆ. ಅವರು  ಅರ್ಜುನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಫುಟ್ಬಾಲ್ ದಂತಕಥೆಯ ಗೌರವಾರ್ಥವಾಗಿ ಮೂರು ದಿನಗಳ ಶೋಕಾಚರಣೆಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್  ಘೋಷಿಸಿದೆ.  ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನ