ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್

ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26  ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ... ನವದೆಹಲಿ: ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26  ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿತ್ತು ಎಂದು ಕಂಪನಿ ಮಂಗಳವಾರ ತಿಳಿಸಿದೆ. ಆಗಸ್ಟ್‌ನಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ 23 ಲಕ್ಷ 28 ಸಾವಿರ ಖಾತೆಗಳನ್ನು ನಿಷೇಧಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧಿಸಲಾದ ಖಾತೆಗಳ ಸಂಖ್ಯೆ ಶೇ. 15 ರಷ್ಟು ಹೆಚ್ಚಾಗಿದೆ. ಇದನ್ನು ಓದಿ: ಸುಮಾರು ಎರಡು ಗಂಟೆಗಳಿಂದ ಸ್ಥಗಿತಗೊಂಡಿದ್ದ WhatsApp ಸೇವೆ ಪುನರಾರಂಭ "ಸೆಪ್ಟೆಂಬರ್ 1, 2022 ರಿಂದ ಸೆಪ್ಟೆಂಬರ್ 30, 2022 ರ ನಡುವೆ, 26, 85,000 ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 8,72,000 ಬಳಕೆದಾರರನ್ನು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿತ್ತು. ಭಾರತೀಯ ಖಾತೆಗಳನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ" ಎಂದು ವಾಟ್ಸ್ ಆ್ಯಪ್ ತನ್ನ ಸೆಪ್ಟೆಂಬರ್ ತಿಂಗಳ ಬಳಕೆದಾರರ ಸುರಕ್ಷತೆ ವರದಿ ತಿಳಿಸಿದೆ. ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಗಳು, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು(50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಪ್ರತಿ ತಿಂಗಳು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮಗಳ ಕುರಿತ ವರದಿ ಪ್ರಕಟಿಸಲು ಕಡ್ಡಾಯಗೊಳಿಸಲಾಗಿದೆ. ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ದ್ವೇಷದ ಭಾಷಣ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳುತ್ತಿವೆ.

ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್
Linkup
ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26  ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ... ನವದೆಹಲಿ: ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26  ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿತ್ತು ಎಂದು ಕಂಪನಿ ಮಂಗಳವಾರ ತಿಳಿಸಿದೆ. ಆಗಸ್ಟ್‌ನಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ 23 ಲಕ್ಷ 28 ಸಾವಿರ ಖಾತೆಗಳನ್ನು ನಿಷೇಧಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧಿಸಲಾದ ಖಾತೆಗಳ ಸಂಖ್ಯೆ ಶೇ. 15 ರಷ್ಟು ಹೆಚ್ಚಾಗಿದೆ. ಇದನ್ನು ಓದಿ: ಸುಮಾರು ಎರಡು ಗಂಟೆಗಳಿಂದ ಸ್ಥಗಿತಗೊಂಡಿದ್ದ WhatsApp ಸೇವೆ ಪುನರಾರಂಭ "ಸೆಪ್ಟೆಂಬರ್ 1, 2022 ರಿಂದ ಸೆಪ್ಟೆಂಬರ್ 30, 2022 ರ ನಡುವೆ, 26, 85,000 ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 8,72,000 ಬಳಕೆದಾರರನ್ನು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿತ್ತು. ಭಾರತೀಯ ಖಾತೆಗಳನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ" ಎಂದು ವಾಟ್ಸ್ ಆ್ಯಪ್ ತನ್ನ ಸೆಪ್ಟೆಂಬರ್ ತಿಂಗಳ ಬಳಕೆದಾರರ ಸುರಕ್ಷತೆ ವರದಿ ತಿಳಿಸಿದೆ. ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಗಳು, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು(50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಪ್ರತಿ ತಿಂಗಳು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮಗಳ ಕುರಿತ ವರದಿ ಪ್ರಕಟಿಸಲು ಕಡ್ಡಾಯಗೊಳಿಸಲಾಗಿದೆ. ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ದ್ವೇಷದ ಭಾಷಣ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳುತ್ತಿವೆ. ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್