'ನಿಯಮ ಉಲ್ಲಂಘನೆ': ಕಾಂಗ್ರೆಸ್ ಹಾಗೂ ಅದರ ಐವರು ನಾಯಕರ ಟ್ವಿಟ್ಟರ್ ಖಾತೆ ಲಾಕ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕ ತಡೆ ಹಿಡಿದ ಬೆನ್ನಲ್ಲೇ, ಕಾಂಗ್ರೆಸ್‌ನ ಅಧಿಕೃತ ಖಾತೆ ಹಾಗೂ ಅದರ ಇನ್ನೂ ಐವರು ಮುಖಂಡರ ಖಾತೆಗಳನ್ನು ಲಾಕ್ ಮಾಡಲಾಗಿದೆ.

'ನಿಯಮ ಉಲ್ಲಂಘನೆ': ಕಾಂಗ್ರೆಸ್ ಹಾಗೂ ಅದರ ಐವರು ನಾಯಕರ ಟ್ವಿಟ್ಟರ್ ಖಾತೆ ಲಾಕ್!
Linkup
ಹೊಸದಿಲ್ಲಿ: ತನ್ನ ಅಧಿಕೃತ ಖಾತೆಯನ್ನು ಲಾಕ್ ಮಾಡಿದೆ ಎಂದು ಆರೋಪಿಸಿದೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಂಗ್ರೆಸ್ ಗುರುವಾರ ಈ ಮಾಹಿತಿ ನೀಡಿದೆ. ಪಕ್ಷದ ನಾಯಕ ಅವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಕೆಲವು ದಿನಗಳಲ್ಲಿಯೇ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಕಾಂಗ್ರೆಸ್‌ನ ಇನ್ನೂ ಐವರು ನಾಯಕರ ಖಾತೆಗಳ ವಿರುದ್ಧವೂ ಇದೇ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ. 'ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘನೆ' ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಲಾಗಿದೆ ಎನ್ನಲಾಗಿದೆ. ರಣದೀಪ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕೆನ್, ಲೋಕಸಭೆಯಲ್ಲಿನ ಪಕ್ಷದ ವಿಪ್ ಮಣಿಕಮ್ ಟ್ಯಾಗೋರ್, ಅಸ್ಸಾಂ ಉಸ್ತುವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳಿಗೆ ಬೀಗ ಹಾಕಲಾಗಿದೆ. 'ಮೋದಿ ಅವರೇ, ನೀವು ಎಷ್ಟೊಂದು ಭಯಗೊಂಡಿದ್ದೀರಿ? ನೆನಪಿಡಿ: ಕಾಂಗ್ರೆಸ್ ಪಕ್ಷವು ಕೇವಲ ಸತ್ಯ, ಅಹಿಂಸೆ ಮತ್ತು ಜನರ ಬಲದೊಂದಿಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು. ನಾವು ಆಗ ಗೆದ್ದಿದ್ದೆವು. ನಾವು ಮತ್ತೆ ಗೆಲ್ಲುತ್ತೇವೆ' ಎಂದು ಕಾಂಗ್ರೆಸ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿದೆ. ದಿಲ್ಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಬಾಲಕಿಯ ಪೋಷಕರ ಜತೆಗಿನ ಚಿತ್ರ ಹಂಚಿಕೊಂಡಿದ್ದರು. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಟ್ವಿಟ್ಟರ್ ಹಾಗೂ ದಿಲ್ಲಿ ಪೊಲೀಸರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅದರಂತೆ ರಾಹುಲ್ ಗಾಂಧಿ ಅವರ ಖಾತೆಯನ್ನು ಲಾಕ್ ಮಾಡಿರುವುದಾಗಿ ಟ್ವಿಟ್ಟರ್ ತಿಳಿಸಿತ್ತು.