ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆಗೆ ಅಂಗೀಕರಿಸಿದ ರಾಜ್ಯಸಭೆ

ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಆಗಸ್ಟ್‌ 04ಕ್ಕೆ ಮುಂದೂಡಲಾಗಿದೆ. ಕಲಾಪದಲ್ಲಿನ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ.

ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆಗೆ ಅಂಗೀಕರಿಸಿದ ರಾಜ್ಯಸಭೆ
Linkup
ಹೊಸದಿಲ್ಲಿ: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಆಗಸ್ಟ್‌ 04ಕ್ಕೆ ಮುಂದೂಡಲಾಗಿದೆ. ಕಲಾಪದಲ್ಲಿನ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ. ಪೆಗಾಸಸ್ ಸ್ಪೈವೇರ್, ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಬೇಕೆಂಬ ಆಗ್ರಹಿಸಿ ಪ್ರತಿಭಟನೆ ನಡೆದಿದ ಪರಿಣಾಮ ರಾಜ್ಯಸಭೆ ಕಲಾಪಕ್ಕೆ ಅಡ್ಡಿಯುಂಟಾದ ಕಾರಣ ಕಲಾಪ ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆಗೆ ಭೋಜನ ವಿರಾಮದ ನಂತರ ಪ್ರಾರಂಭವಾದ ಕಲಾಪದಲ್ಲಿ ಬಿಜೆಪಿ ಸದಸ್ಯ ಭುವನೇಶ್ವರ್ ಕಲಿತಾ ಅವರು ಸಭಾಧ್ಯಕ್ಷರಾಗಿ ಕಲಾಪವನ್ನು ಮುನ್ನೆಡೆಸಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ, ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಸೂಚಿಸಿದರು. ಬೆನ್ನಲ್ಲೇ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ಸದಸ್ಯರ ಘೋಷಣೆಗಳ ನಡುವೆಯೇ ಸಭಾಧ್ಯಕ್ಷರು ಅಮರ ಪಟ್ನಾಯಕ್ (ಬಿಜೆಡಿ) ಅವರನ್ನು ಮಸೂದೆ ಕುರಿತು ಚರ್ಚೆ ಪ್ರಾರಂಭಿಸುವಂತೆ ಸೂಚಿಸಿದರು. ಈ ಬಳಿಕ ಟಿಆರ್‌ಎಸ್‌ನ ಬಂಡ ಪ್ರಕಾಶ್, ಟಿಡಿಪಿಯ ಎಂ. ತಂಬಿದುರೈ, ಕೆ. ರವೀಂದ್ರ ಕುಮಾರ್, ವೈಎಸ್ಆರ್ ಸಿಪಿಯ ವಿ. ವಿಜಯಸಾಯಿ ರೆಡ್ಡಿ ಮೊದಲಾದವರು ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಿಪಿಐ-ಎಂ ನ ಸದಸ್ಯ ಜಾನ್ ಬ್ರಿಟಾನ್ ಅವರು ಮಸೂದೆ ಬಗ್ಗೆ ಮಾತನಾಡುವುದಾಗಿ ಎದ್ದು ನಿಂತು ಗೂಢಚರ್ಯೆ, ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಗತಿಗಳನ್ನು ಮಾತನಾಡಲು ಆರಂಭಿಸಿದರು. ಕೆಲವು ಸದಸ್ಯರಿಂದ ನಡೆದ ಚರ್ಚೆಯ ನಂತರ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿ ಅಂಗೀಕರಿಸಲಾಯಿತು.