ದಿಲ್ಲಿಯಲ್ಲಿ 13,500 ಹೊಸ ಕೊರೊನಾ ಕೇಸ್‌, ಸಿಬಿಎಸ್‌ಇ ಪರೀಕ್ಷೆ ರದ್ದಿಗೆ ಕೇಜ್ರಿವಾಲ್‌ ಮನವಿ

ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ನಡೆಸುವುದರಿಂದ ದೊಡ್ಡ ಪ್ರಮಾಣದ ಕೊರೊನಾ ವೈರಾಣು ಹರಡಬಹುದು. ಹೀಗಾಗಿ ಪರ್ಯಾಯ ಮೌಲ್ಯಮಾಪನದ ವಿಧಾನಗಳನ್ನು ಅನುಸರಿಸಬಹುದು ಎಂದು ಕೇಜ್ರಿವಾಲ್‌ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ದಿಲ್ಲಿಯಲ್ಲಿ 13,500 ಹೊಸ ಕೊರೊನಾ ಕೇಸ್‌, ಸಿಬಿಎಸ್‌ಇ ಪರೀಕ್ಷೆ ರದ್ದಿಗೆ ಕೇಜ್ರಿವಾಲ್‌ ಮನವಿ
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೊರೊನಾ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಸರಕಾರಕ್ಕೆ ದಿಲ್ಲಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ದಿಲ್ಲಿಯಲ್ಲಿ ಹೊಸದಾಗಿ 13,500 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದು ರಾಜಧಾನಿ ಉಲ್ಲಿಯವರೆಗೆ ದಿನವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಾಗಿದ್ದು, ಇದಾದ ಬೆನ್ನಿಗೆ ಕೇಜ್ರಿವಾಲ್‌ ಕೇಂದ್ರಕ್ಕೆ ಪರೀಕ್ಷೆ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ತೀರಾ ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ದಿಲ್ಲಿ ಜನತೆಗೆ ಮನವಿ ಮಾಡಿದ್ದಾರೆ. "ಮಂಡಳಿ ಪರೀಕ್ಷೆಗಳನ್ನು ನಡೆಸುವುದರಿಂದ ಕೊರೊನಾ ವೈರಸ್‌ನ ದೊಡ್ಡ ಪ್ರಮಾಣದ ಹರಡುವಿಕೆಗೆ ಕಾರಣವಾಗಬಹುದು. ಹೀಗಾಗಿ ಮೌಲ್ಯಮಾಪನದ ಪರ್ಯಾಯ ವಿಧಾನಗಳನ್ನು ಹುಡುಕಾಡಬಹುದು. ಆನ್‌ಲೈನ್‌ ಪರೀಖ್ಷೆ ಮೂಲಕ ಅಥವಾ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡಬಹುದು,” ಎಂದು ಅವರು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ಕೊರೊನಾದ ನಾಲ್ಕನೇ ಅಲೆಯ್ನು ಎದುರಿಸುತ್ತಿದೆ. ಇದು ಮೂರನೇ ಅಲೆಗಿಂತ ಹೆಚ್ಚು ಗಂಭೀರವಾದುದು ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥರು ಹೇಳಿದ್ದಾರೆ.