
ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಆತ್ಮಹತ್ಯಾ ದಾಳಿ ಹಾಗೂ ಸರಣಿ ಬಾಂಬ್ ಸ್ಫೋಟಗಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ, ತಿಹಾರ್ ಜೈಲಿನಲ್ಲಿರುವ ಇತರೆ ಕೈದಿಗಳು ತನ್ನ ಮೇಲೆ ಹಲ್ಲೆ ನಡೆಸಿ '' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು ಎಂದು ಕೋರ್ಟ್‌ನಲ್ಲಿ ಆರೋಪಿಸಿದ್ದಾನೆ.
ಐಸಿಸ್-ಪ್ರಚೋದಿತ ಸಂಘಟನೆಯೊಂದರ ಸದಸ್ಯನಾಗಿರುವ ರಶೀದ್ ಜಾಫರ್ ಎಂಬಾತನನ್ನು 2018ರಲ್ಲಿ ಬಂಧಿಸಲಾಗಿತ್ತು. ಈ ಸಂಘಟನೆಯು ರಾಜಕಾರಣಿಗಳು ಹಾಗೂ ದಿಲ್ಲಿ ಮತ್ತು ಉತ್ತರ ಭಾರತದ ಇತರೆ ಭಾಗಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಸರಣಿ ಬಾಂಬ್ ಸ್ಫೋಟ ಮತ್ತು ಆತ್ಮಾಹುತಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿತ್ತು ಎಂದು ಆರೋಪಿಸಲಾಗಿದೆ.
ಉಗ್ರನ ಪರ ಅರ್ಜಿ ಸಲ್ಲಿಸಿರುವ ವಕೀಲ ಎಂಎಸ್ ಖಾನ್, ತಿಹಾರ್ ಜೈಲಿನಿಂದ ತಂದೆಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ವಿವರನ್ನು ತಿಳಿಸಿದ್ದಾರೆ. 'ಆರೋಪಿಯನ್ನು ಸಹ ಆರೋಪಿಗಳು ಥಳಿಸಿದ್ದು, ಜೈ ಶ್ರೀರಾಮ್‌ನಂತಹ ಧಾರ್ಮಿಕ ಘೋಷಣೆಗಳನ್ನು ಉಚ್ಚರಿಸುವಂತೆ ಒತ್ತಾಯಿಸಿದ್ದರು' ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವಂತೆ ಸುಪರಿಂಟೆಂಡೆಂಟ್ ಅವರಿಗೆ ಸೂಕ್ತ ಸೂಚನೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಆರೋಪಿಯನ್ನು 2018ರ ಡಿಸೆಂಬರ್‌ನಲ್ಲಿ ಇತರೆ 9 ಆರೋಪಿಗಳೊಂದಿಗೆ ಬಂಧಿಸಲಾಗಿತ್ತು. ದಿಲ್ಲಿ ಪೊಲೀಸ್ ವಿಶೇಷ ಘಟಕ, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ತಂಡಗಳ ನೆರವಿನೊಂದಿಗೆ ವ್ಯಾಪಕ ದಾಳಿಗಳನ್ನು ನಡೆಸಿದ್ದ ಎನ್‌ಐಎ, ದಿಲ್ಲಿ ಆರು ಸ್ಥಳಗಳು ಹಾಗೂ ಉತ್ತರ ಪ್ರದೇಶದ 11 ಸ್ಥಳಗಳಲ್ಲಿ ಪರಿಶೀಲನೆಗಳನ್ನು ನಡೆಸಿತ್ತು.