ತಿರುಪತಿ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ: ನವೀನ ಟೆಕ್ನಾಲಜಿ ಪಡೆದ ದೇಶದ ಮೊದಲ ದೇವಾಲಯ!

ಜಮ್ಮು ವಾಯು ನೆಲೆಗೆ ಡ್ರೋನ್‌ ದಾಳಿ ನಡೆದ ಬಳಿಕ ದೇಶದಲ್ಲಿಡ್ರೋನ್‌ ದಾಳಿ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸಲು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಂದಾಗಿದೆ. 25 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ.

ತಿರುಪತಿ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ: ನವೀನ ಟೆಕ್ನಾಲಜಿ ಪಡೆದ ದೇಶದ ಮೊದಲ ದೇವಾಲಯ!
Linkup
ತಿರುಪತಿ: ಜಮ್ಮು ವಾಯು ನೆಲೆಗೆ ಡ್ರೋನ್‌ ದಾಳಿ ನಡೆದ ಬಳಿಕ ದೇಶದಲ್ಲಿ ಡ್ರೋನ್‌ ದಾಳಿ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸಲು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಂದಾಗಿದೆ. ಇದೀಗ ವಿಶ್ವದ ಅತಿ ಶ್ರೀಮಂತ ದೇಗುಲವೆಂದೇ ಖ್ಯಾತಿ ಪಡೆದಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇಗುಲಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ ದಾಳಿ ನಿಗ್ರಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂತಹ ರಕ್ಷಣಾ ವ್ಯವಸ್ಥೆ ಪಡೆದ ದೇಶದ ಪ್ರಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೂ ತಿರುಪತಿ ಪಾತ್ರವಾಗಿದೆ. ಜೂನ್‌ನಲ್ಲಿ ಜಮ್ಮುವಿನ ವಾಯಪಡೆ ನೆಲೆಗೆ ಉಗ್ರರು ಡ್ರೋನ್‌ ಮೂಲಕ ದಾಳಿ ನಡೆಸಿದ್ದರು. ಬಳಿಕ ಡ್ರೋನ್‌ ದಾಳಿ ಪತ್ತೆವ್ಯವಸ್ಥೆಯನ್ನು ದೇಶದ ವಿವಿಧೆಡೆ ನಿಯೋಜಿಸಲು ಯೋಜಿಸಲಾಗಿತ್ತು. ಜುಲೈ 6ರಂದು ಕರ್ನಾಟಕದ ಕೋಲಾರದಲ್ಲಿ ಆ್ಯಂಟಿ ಡ್ರೋನ್‌ ಸಿಸ್ಟಮ್‌ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾರ್ಥ ಪ್ರಯೋಗದ ಸಂದರ್ಭದಲ್ಲಿ ಟಿಟಿಡಿಯ ಭದ್ರತಾ ವಿಭಾಗದ ಮುಖ್ಯಸ್ಥರಾದ ಗೋಪಿನಾಥ್‌ ಜಟ್ಟಿ ಉಪಸ್ಥಿತರಿದ್ದರು. ಏನಿದು ಆ್ಯಂಟಿ ಡ್ರೋನ್‌ ಸಿಸ್ಟಮ್‌?: ಶತ್ರುಗಳ ಡ್ರೋನ್‌ ದಾಳಿಯನ್ನು ತಟಸ್ಥಗೊಳಿಸುವ ವ್ಯವಸ್ಥೆ ಇದಾಗಿದೆ. ಸ್ವದೇಶಿ ನಿರ್ಮಿತ ಈ ತಂತ್ರಜ್ಞಾನವು ಸಂಭಾವ್ಯ ಡ್ರೋನ್‌ ದಾಳಿಯನ್ನು ಪತ್ತೆಹಚ್ಚುವುದು ಮಾತ್ರವಲ್ಲದೆ ಶತ್ರು ಡ್ರೋನ್‌ನ ಸಾಫ್ಟ್‌ ಕಿಲ್‌(ಡ್ರೋನ್‌ನ ಸಂವಹನ ವ್ಯವಸ್ಥೆಯನ್ನು ಜಾಮ್‌ ಮಾಡುವುದು)ಗೂ ಸಹಕರಿಸಲಿದೆ. ಸುಮಾರು 3-4 ಕಿ.ಮೀ. ದೂರದಿಂದಲೇ ಇಂತಹ ಶತ್ರು ಡ್ರೋನ್‌ಗಳನ್ನು ಪತ್ತೆಹಚ್ಚಿ ಅದರ ಸಂವಹನ ವ್ಯವಸ್ಥೆಯನ್ನು ಜಾಮ್‌ ಮಾಡುವ ಸಾಮರ್ಥ್ಯವನ್ನು ಡಿಆರ್‌ಡಿಒನ ಆ್ಯಂಟಿ ಡ್ರೋನ್‌ ಸಿಸ್ಟಮ್‌ ಹೊಂದಿದೆ. ವಾಯುಪಡೆ, ನೌಕಾಪಡೆ ಒಳಗೊಂಡಂತೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನು ಡಿಆರ್‌ಡಿಒ ಬಲಪಡಿಸುತ್ತಿದೆ. ಉಗ್ರರ ದಾಳಿಯ ಸಂಭಾವ್ಯತೆ ಇರುವ ದೇಶದ ಪ್ರಮುಖ ದೇಗುಲಗಳೂ ಮುಂದಿನ ದಿನಗಳಲ್ಲಿ ಇಂತಹ ರಕ್ಷಣಾ ವ್ಯವಸ್ಥೆಯನ್ನು ಪಡೆಯಲಿವೆ. ದೇಶದ 74ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಇದೇ ಡ್ರೋನ್‌ ನಿಗ್ರಹ ವ್ಯವಸ್ಥೆ ಕೆಂಪುಕೋಟೆಯಲ್ಲಿ ಕಾರ್ಯನಿರ್ವಹಿಸಿ ಡ್ರೋನ್‌ ದಾಳಿಯ ಮೇಲೆ ನಿಗಾ ವಹಿಸಿತ್ತು. 3 ಸಾವಿರ ಭಕ್ತರಿಗೆ ದರ್ಶನ ಟಿಕೆಟ್‌ ಕೋವಿಡ್‌-19 ಎರಡನೇ ಅಲೆಯಿಂದಾಗಿ ಮಾರ್ಚ್ ಬಳಿಕ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ಕಳೆದ 4 ತಿಂಗಳಲ್ಲಿ ಕೇವಲ 5 ಸಾವಿರ ದರ್ಶನ ಟಿಕೆಟ್‌ ವಿತರಿಸಲಾಗಿದೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದ್ದು, 300 ರೂ.ನ ದರ್ಶನ ಟಿಕೆಟ್‌ನ ಸಂಖ್ಯೆಯನ್ನು ಹೆಚ್ಚಿಸಿದೆ. ಈಗ ಪ್ರತಿದಿನ 3 ಸಾವಿರ ಭಕ್ತರಿಗೆ 300 ರೂ.ನ ದರ್ಶನ ಟಿಕೆಟ್‌ ವಿತರಿಸಲು ಆರಂಭಿಸಲಾಗಿದೆ. ಭಕ್ತರು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಆಗಸ್ಟ್‌ 17ರಿಂದ 20ರವರೆಗೆ ಶ್ರಿವಾರಿ ದೇಗುಲದಲ್ಲಿ ಪವಿತ್ರೋತ್ಸವಂ ಇರುವ ಕಾರಣ ಆ ದಿನಗಳಲ್ಲಿ ದರ್ಶನ ಟಿಕೆಟ್‌ಗಳು ಲಭ್ಯ ಇರುವುದಿಲ್ಲಎಂದು ಟಿಟಿಡಿ ಹೇಳಿದೆ. ಇದೇ ಸಂದರ್ಭದಲ್ಲಿ ಭಕ್ತರು ವಿಶೇಷ ದರ್ಶನ ಟಿಕೆಟ್‌ಗಳ ಹೆಸರಿನಲ್ಲಿ ವಂಚಿಸುವ ಏಜೆಂಟ್‌ಗಳು ಮತ್ತು ಟ್ರಾವೆಲ್‌ ಏಜೆನ್ಸಿಗಳ ಕುರಿತು ಎಚ್ಚರದಿಂದ ಇರುವಂತೆ ಟಿಟಿಡಿ ಎಚ್ಚರಿಸಿದೆ. ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಿಸಲು ಸರಕಾರವು ಅಲ್ಲಿನ ಸಾರಿಗೆ ನಿಗಮದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ವಿವಿಧ ಟೂರಿಸಂ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.