ಟ್ವಿಟರ್‌ಗೆ ಕಟ್ಟ ಕಡೆಯ ನೋಟಿಸ್‌ ಜಾರಿಗೊಳಿಸಿದ ಕೇಂದ್ರ ಸರಕಾರ: ನಿಯಮ ಪಾಲಿಸಿಲ್ಲ ಅಂದರೆ ಬ್ಯಾನ್‌ ಪಕ್ಕಾ?

ನೂತನ ಕಾಯಿದೆ ಪ್ರಕಾರ ರೆಸಿಡೆಂಟ್‌ ಅಧಿಕಾರಿ ಮತ್ತು ನೋಡಲ್‌ ಕಾಂಟ್ಯಕ್ಟ್ ಪರ್ಸನ್‌ ಎಂಬ ಇಬ್ಬರನ್ನು ನೇಮಕ ಮಾಡಿರುವುದಾಗಿ ಟ್ವಿಟರ್‌ ಹೇಳಿದೆ. ಆದರೆ, ಸರಕಾರ ಈ ವಾದವನ್ನು ತಿರಸ್ಕರಿಸಿದ್ದು, ನೇಮಕಗೊಂಡ ಇಬ್ಬರೂ ಸಂಸ್ಥೆಯ ಅಧಿಕೃತ ಉದ್ಯೋಗಿಗಳಲ್ಲ. ಅಲ್ಲದೇ ಅವರು ನೀಡಿರುವ ಕಚೇರಿ ವಿಳಾಸ ಕೂಡಾ ಟ್ವಿಟರ್‌ ಸಂಸ್ಥೆಯದ್ದಲ್ಲ ಎಂದು ಹೇಳಿದೆ.

ಟ್ವಿಟರ್‌ಗೆ ಕಟ್ಟ ಕಡೆಯ ನೋಟಿಸ್‌ ಜಾರಿಗೊಳಿಸಿದ ಕೇಂದ್ರ ಸರಕಾರ: ನಿಯಮ ಪಾಲಿಸಿಲ್ಲ ಅಂದರೆ ಬ್ಯಾನ್‌ ಪಕ್ಕಾ?
Linkup
ಹೊಸದಿಲ್ಲಿ: ಮತ್ತು ನಡುವಿನ ಸಂಘರ್ಷ ಶನಿವಾರ ತಾರಕಕ್ಕೇರಿದೆ. ನೂತನ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳ ಪಾಲನೆ ವಿಚಾರದಲ್ಲಿ ಸೆಡ್ಡು ಹೊಡೆದಿರುವ ಟ್ವಿಟರ್‌ಗೆ ಕೇಂದ್ರ ಅಂತಿಮ ನೋಟಿಸ್‌ ಜಾರಿಗೊಳಿಸಿದೆ. ನೂತನ ನಿಯಮದ ಪ್ರಕಾರ ಟ್ವಿಟರ್‌ ಭಾರತೀಯ ಮೂಲದ ಅಧಿಕಾರಿಗಳನ್ನು ನೇಮಿಸಕೊಳ್ಳದಿದ್ದರೆ, ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಕೇಂದ್ರ ಎಚ್ಚರಿಸಿದೆ. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಎಲ್ಲಾ ಡಿಜಿಟಲ್‌ ಮಾಧ್ಯಮಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. 3 ತಿಂಗಳ ಒಳಗಾಗಿ ಈ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಂದ್ರ ನಿರ್ದೇಶನ ನೀಡಿತ್ತು. ಮೇ 26ಕ್ಕೆ ಈ ಗಡುವು ಮುಗಿದ್ದರೂ ಟ್ವಿಟರ್‌ ಈ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಸರಕಾರದ ನಿಯಮಗಳ ವಿರುದ್ಧ ಟ್ವಿಟರ್‌ ಹೈಕೋರ್ಟ್‌ ಮೆಟ್ಟಿಲೇರಿತ್ತಾದರೂ, ಅಲ್ಲೂ ನ್ಯಾಯಾಲಯ ನೆಲದ ಕಾನೂನು ಪಾಲಿಸುವಂತೆ ತಾಕೀತು ಮಾಡಿದೆ. ಆದರೂ ಟ್ವಿಟರ್‌ ಈ ವಿಚಾರದಲ್ಲಿ ಮೊಂಡುತನ ಮುಂದುವರಿಸಿದೆ. ಹೊಸ ನೀತಿ ಏಕೆ? ಸಾಮಾಜಿಕ ಮಾಧ್ಯಮಗಳು/ಜಾಲತಾಣಗಳನ್ನು ಅವುಗಳಲ್ಲಿ ಪೋಸ್ಟ್‌ ಮಾಡಲಾಗುವ ಸುದ್ದಿ, ಫೊಟೊ, ವಿಡಿಯೊ, ಸಂದೇಶಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೊಣೆಗಾರರನ್ನಾಗಿ ಮಾಡುವ ಉದ್ದೇಶವನ್ನು ಹೊಸ ಮಾರ್ಗಸೂಚಿಗಳು ಹೊಂದಿವೆ. ಭಾರತದಲ್ಲಿಉದ್ಭವಿಸುವ ವಿವಾದಗಳು ಮತ್ತು ಕಾನೂನು ತೊಡಕುಗಳನ್ನು ಕ್ಷಿಪ್ರವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿದೇಶೀಯ ಮಟ್ಟದಲ್ಲಿ ಕುಂದು-ಕೊರತೆ ಅಧಿಕಾರಿಗಳನ್ನು ಪ್ರತಿಯೊಂದು ಸಾಮಾಜಿಕ ಜಾಲತಾಣ ಸಂಸ್ಥೆಯೂ ನೇಮಿಸಬೇಕೆಂಬ ನಿಯಮ ಈ ಮಾರ್ಗಸೂಚಿಯಲ್ಲಿದೆ. ಆದರೆ ಟ್ವಿಟರ್‌ ಇದನ್ನು ಪಾಲಿಸುತ್ತಿಲ್ಲ. ಟ್ವಿಟರ್‌ ಹೇಳುವುದೇನು? ನೂತನ ಕಾಯಿದೆ ಪ್ರಕಾರ ರೆಸಿಡೆಂಟ್‌ ಅಧಿಕಾರಿ ಮತ್ತು ನೋಡಲ್‌ ಕಾಂಟ್ಯಕ್ಟ್ ಪರ್ಸನ್‌ ಎಂಬ ಇಬ್ಬರನ್ನು ನೇಮಕ ಮಾಡಿರುವುದಾಗಿ ಟ್ವಿಟರ್‌ ಹೇಳಿದೆ. ಆದರೆ, ಸರಕಾರ ಈ ವಾದವನ್ನು ತಿರಸ್ಕರಿಸಿದ್ದು, ನೇಮಕಗೊಂಡ ಇಬ್ಬರೂ ಸಂಸ್ಥೆಯ ಅಧಿಕೃತ ಉದ್ಯೋಗಿಗಳಲ್ಲ. ಅಲ್ಲದೇ ಅವರು ನೀಡಿರುವ ಕಚೇರಿ ವಿಳಾಸ ಕೂಡಾ ಟ್ವಿಟರ್‌ ಸಂಸ್ಥೆಯದ್ದಲ್ಲ ಎಂದು ಹೇಳಿದೆ. ವಿನಾಯಿತಿ ವಾಪಸ್‌?''ಹೊಸ ನಿಯಮಗಳನ್ನು ಟ್ವಿಟರ್‌ ಪಾಲಿಸದೆ ಆದೇಶ ಉಲ್ಲಂಘನೆ ಮುಂದುವರಿಸಿದರೆ, 'ಐಟಿ ಕಾಯಿದೆ-2000'ರ ಸೆಕ್ಷನ್‌ 79ರ ಅಡಿಯಲ್ಲಿ ಸಾಮಾಜಿಕ ಜಾಲತಾಣಕ್ಕೆ ನೀಡಲಾಗಿರುವ 'ಉತ್ತರದಾಯತ್ವದಿಂದ ವಿನಾಯಿತಿ' ಸೌಲಭ್ಯವನ್ನು ಸರಕಾರ ಹಿಂಪಡೆಯಲಿದೆ,'' ಎಂದು ಐಟಿ ಇಲಾಖೆ ಎಚ್ಚರಿಸಿದೆ. ಸೆಕ್ಷನ್‌ 79ರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳು ಕಾನೂನು ರಕ್ಷಣೆಯನ್ನು ಪಡೆದಿವೆ. ಅಲ್ಲಿ ಪೋಸ್ಟ್‌ ಮಾಡಲಾಗುವ ವಿಷಯವಸ್ತುವಿನ ಆಧಾರದ ಮೇಲೆ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ಈ ವಿಶೇಷ ಸೆಕ್ಷನ್‌ ವಿನಾಯಿತಿ ಒದಗಿಸುತ್ತದೆ. ವೆಂಕಯ್ಯನಾಯ್ಡು, ಭಾಗವತ್‌ ಬ್ಲೂಟಿಕ್‌ ಮಾಯ!ಸರಕಾರ ಮತ್ತು ಟ್ವಿಟರ್‌ ನಡುವೆ ಸಂಘರ್ಷದ ನಡುವೆಯೇ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಸಂಘಟನೆಯ ಹಲವು ಪ್ರಮುಖರ ಟ್ವಿಟರ್‌ ಖಾತೆಗಳಲ್ಲಿ'ಬ್ಲೂಟಿಕ್‌' (ಖಾತೆ ಅಧಿಕೃತ ಎಂದು ಗುರುತಿಸುವ ಚಿಹ್ನೆ) ಶನಿವಾರ ದಿಢೀರನೆ ಮಾಯವಾಗಿತ್ತು. ಇದರಿಂದ ವಿವಾದಕ್ಕೆ ತುಪ್ಪ ಸುರಿದಂತಾಯಿತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಭಾರಿ ಸದ್ದು ಮಾಡಿತು. 6 ತಿಂಗಳಿಗೂ ಹೆಚ್ಚು ಕಾಲದಿಂದ ಖಾತೆ ಬಳಸದ ಕಾರಣ ತಾಂತ್ರಿಕ ಕಾರಣಕ್ಕೆ ಬ್ಲ್ಯೂಟಿಕ್‌ ತಾನಾಗಿಯೇ ನಿಷ್ಕ್ರಿಯಗೊಂಡಿದೆ ಎಂದು ಟ್ವಿಟರ್‌ ಸ್ಪಷ್ಟೀಕರಣ ನೀಡಿದೆ.